ನಟರ ವಯಸ್ಸು ಸಹ ನೋಡದೆ ಹೊಡೆಯುತ್ತಾನೆ, ಸಹಾಯಕರ ಮೇಲೂ ದೌರ್ಜನ್ಯ ತಮಿಳು ನಿರ್ದೇಶಕನ ವಿರುದ್ಧ ಆರೋಪ

ತಮಿಳಿನ ಸಂವೇದನಾಶೀಲ ನಿರ್ದೇಶಕ ಎನಿಸಿಕೊಂಡಿರುವ ಮಾರಿ ಸೆಲ್ವರಾಜ್ ಸಿನಿಮಾ ಸೆಟ್​ನಲ್ಲಿ ನಟರು ಹಾಗೂ ತನ್ನ ಸಹಾಯಕರ ಮೇಲೆ ಹಲ್ಲೆ ಮಾಡುತ್ತಾರೆ ಎಂದು ಆರೋಪಿಸಲಾಗಿದೆ.

ನಟರ ವಯಸ್ಸು ಸಹ ನೋಡದೆ ಹೊಡೆಯುತ್ತಾನೆ, ಸಹಾಯಕರ ಮೇಲೂ ದೌರ್ಜನ್ಯ ತಮಿಳು ನಿರ್ದೇಶಕನ ವಿರುದ್ಧ  ಆರೋಪ
ಮಾರಿ ಸೆಲ್ವರಾಜ್
Follow us
ಮಂಜುನಾಥ ಸಿ.
|

Updated on:Jun 24, 2023 | 4:01 PM

ಹಿಂದೆ ಕಾಲವೊಂದಿತ್ತು ಸಿನಿಮಾ ನಿರ್ದೇಶಕರು (Director) ನಟರನ್ನು, ಸಹಾಯಕರನ್ನು ಹೊಡೆದು ಬಡಿದು ಕೆಲಸ ಮಾಡಿಸುತ್ತಿದ್ದರಂತೆ. ಈಗಿನ ಹಲವು ಹಿರಿಯ ನಟರು ತಾವು ಇಂಥಹಾ ನಿರ್ದೇಶಕರ ಕೈಯಲ್ಲಿ ಏಟು ತಿಂದು ನಟನೆ ಕಲಿತಿದ್ದೀವಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ಈಗ ಕಾಲ ಬದಲಾಗಿದೆ, ಕಲಿಸಲೇ ಆಗಲಿ, ಯಾವುದೇ ವಿಷಯಕ್ಕಾಗಲಿ ಹಿಂಸೆ ಹಿಂಸೆಯೇ, ಯಾವುದೇ ಕಾರಣಕ್ಕಾದರೂ ದೈಹಿಕ ಹಿಂಸೆ ತಪ್ಪು ಎಂಬುದು ಈಗಿನವರ ನಿಲವು. ಆದರೆ ತಮಿಳಿನ ಜನಪ್ರಿಯ ಯುವ ಸಿನಿಮಾ ನಿರ್ದೇಶಕರೊಬ್ಬರು ತಮ್ಮ ನಟರನ್ನು ಹೊಡೆಯುತ್ತಾರೆ ಎಂಬ ಆರೋಪ ಇದೀಗ ಕೇಳಿ ಬಂದಿದೆ.

ಮಾರಿ ಸೆಲ್ವರಾಜ್ (Mari Selvaraj) ತಮಿಳಿನ ಜನಪ್ರಿಯ ನಿರ್ದೇಶಕ. ಸಂವೇದನಾಶೀಲ ಸಿನಿಮಾಗಳ ಮೂಲಕ ತಮಿಳುನಾಡಿನಲ್ಲಿ ಮಾತ್ರವೇ ಅಲ್ಲದೆ ಕರ್ನಾಟಕ ಸೇರಿದಂತೆ ಹಲವೆಡೆ ತಮ್ಮದೇ ಆದ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. ಆದರೆ ಈ ನಿರ್ದೇಶಕ ತಮ್ಮ ನಟರನ್ನು, ಸಹಾಯಕರನ್ನು ಹೊಡೆಯುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ಅವರಿಂದ ಏಟು ತಿಂದವರೇ ಕೆಲವರು ಈ ವಿಷಯವನ್ನು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಮಾರಿ ಸೆಲ್ವರಾಜ್​ ಅವರ ಮೊದಲ ಸಿನಿಮಾ ಪರಿಯೇರುಮ್ ಪೆರುಮಾಳ್ ಸಿನಿಮಾದಲ್ಲಿ ನಟಿಸಿರುವ ನಲ್ಲೈ ತಂಗರಾಜ್, ಮಾರಿ ಸೆಲ್ವರಾಜ್ ತಮ್ಮನ್ನು ಹೊಡೆಯುತ್ತಿದ್ದ ಬಗ್ಗೆ ಈ ಹಿಂದೆಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ”ಎಷ್ಟೆ ಉದ್ದ ಸಂಭಾಷಣೆಯಾದರು ನನಗೆ ಬಾಯಿಪಾಠವಾಗಿಬಿಡುತ್ತಿತ್ತು, ಆದರೆ ಕ್ಯಾಮೆರಾ ಮುಂದೆ ನಾನು ನವರ್ಸ್ ಆಗಿ ಡೈಲಾಗ್ ಮರೆತುಬಿಡುತ್ತಿದ್ದೆ. ಆಗ ನಿರ್ದೇಶಕ ಮಾರಿ ಸೆಲ್ವರಾಜ್ ನನ್ನ ಕತ್ತಿನ ಮೇಲೆ ಹೊಡೆದು ಬೈಯ್ಯುತ್ತಿದ್ದರು, ನನ್ನ ವಯಸ್ಸಿಗೂ ಮರ್ಯಾದೆ ಕೊಡುತ್ತಿರಲಿಲ್ಲ. ಆದರೆ ಆ ನಂತರ ಕ್ಷಮೆ ಕೇಳಿ ನನ್ನಿಂದ ನಟನೆ ಮಾಡಿಸುತ್ತಿದ್ದರು” ಎಂದಿದ್ದರು.

ಇದನ್ನೂ ಓದಿ:ಧನುಷ್​ ನಟನೆಯ ಕರ್ಣನ್​ ಸಿನಿಮಾ ಮೇಲೆ ಕಣ್ಣಿಟ್ಟ ಟಾಲಿವುಡ್​; ರಿಮೇಕ್​ನಲ್ಲಿ ಹೀರೋ ಯಾರು?

ಅದೇ ಸಿನಿಮಾದಲ್ಲಿ ಕೆಲಸ ಮಾಡಿರುವ ನಟ ಮಾರಿಮುತ್ತು ಚಾಯ್ ವಿತ್ ಚೈತ್ರ ಎಂಬ ಯೂಟ್ಯೂಬ್ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಾ, ಮಾರಿ ಸೆಲ್ವರಾಜ್ ಪರಿಯೇರುಮ್ ಪೆರುಮಾಳ್ ಸಿನಿಮಾದ ನಾಯಕ ಕಾತಿರ್ ಅನ್ನು ಬಹಳ ನಿಕೃಷ್ಠವಾಗಿ ನಡೆಸಿಕೊಳ್ಳುತ್ತಿದ್ದರು. ಬರಿಗಾಲಲ್ಲಿ ಓಡುವಂತೆ ಹೇಳುತ್ತಿದ್ದರು, ಪ್ರತಿಬಾರಿ ಕಾತಿರ್ ಓಡಿದಾಗಲೆಲ್ಲ ಅವರ ಕಾಲು ಗಾಯಗೊಳ್ಳುತ್ತಿತ್ತು. ಫೈಟ್ ದೃಶ್ಯಗಳಲ್ಲಿ ನಿಜವಾಗಿಯೂ ಕಾತಿರ್ ಅನ್ನು ಹೊಡೆಯುವಂತೆ ಸೂಚನೆ ನೀಡುತ್ತಿದ್ದರು. ಪರಿಯೇರುಮ್ ಪೆರುಮಾಳ್ ಸಿನಿಮಾದ ನಾಯಕನ ಪಾತ್ರ ನಿರ್ದೇಶಕ ಮಾರಿ ಸೆಲ್ವರಾಜ್ ಜೀವನದ ಕತೆ ಹಾಗಾಗಿ ತಾವು ಅನುಭವಿಸಿದ ನಿಜವಾದ ಭಾವನೆಗಳನ್ನು ಕಾತಿರ್ ಮೂಲಕ ಹೊರಗೆ ತರುವ ಯತ್ನವನ್ನು ಮಾರಿ ಸೆಲ್ವರಾಜ್ ಮಾಡಿದ್ದರು ಎಂದಿದ್ದಾರೆ.

ಇನ್ನು ಇತ್ತೀಚೆಗಷ್ಟೆ ತಮಿಳುನಾಡಿ ಸಿಎಂ ಪುತ್ರ, ನಟ ಉದಯ್ ನಿಧಿ ಸ್ಟಾಲಿನ್ ಸಂದರ್ಶನವೊಂದರಲ್ಲಿ, ಮಾರಿ ಸೆಲ್ವರಾಜ್ ತನ್ನ ಸಹಾಯಕರನ್ನು ಹೊಡೆಯುತ್ತಾನೆ ಎಂದು ಸಹ ಹೇಳಿದ್ದು ಇದು ಸಹ ಸುದ್ದಿಯಾಗಿದೆ. ಮಾರಿ ಸೆಲ್ವರಾಜ್ ಇದೀಗ ಮಾಮನ್ನನ್ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಸಹ ತಮ್ಮ ಹಿಂದಿನ ಸಿನಿಮಾಗಳಂತೆ ನೊಂದವರು ಆಳುವವರ ತಿರುಗಿ ಬೀಳುವ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಉದಯ್ ನಿಧಿ ಸ್ಟಾಲಿನ್ ಹಾಗೂ ವಡಿವೇಲು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕೀರ್ತಿ ಸುರೇಶ್, ಸಿನಿಮಾದ ನಾಯಕಿ. ಸಿನಿಮಾವು ಜೂನ್ 29ರಂದು ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:28 pm, Sat, 24 June 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ