The Kashmir Files: ಮೀಟುಗೋಲು; ಈಗ ವಿವಾದಗಳು ತಾವಾಗಿಯೇ ಹುಟ್ಟುವುದಿಲ್ಲ, ಹುಟ್ಟಿಸಲಾಗುತ್ತದೆ

Cinema : ಇಂದಿನ ಭಾರತದ ಸನ್ನಿವೇಶದಲ್ಲಿ ಆಧುನಿಕ ಮಾಧ್ಯಮಗಳ ಮೂಲಕ ವಿಷಯಗಳ ಸೆನ್ಸೇಷನಲೈಜ಼ೇಷನ್ ಬಹಳ ಸಾಮಾನ್ಯವಾದ ವಿಷಯವಾಗಿದೆ. ಯುವಜನಾಂಗದ ರಕ್ತ ಕುದಿಯುವ ಹಾಗೆ ಮಾಡಿದ್ದ ಸಿನಿಮಾಗಳು ಆಗಲೂ ಇದ್ದವು.

The Kashmir Files: ಮೀಟುಗೋಲು; ಈಗ ವಿವಾದಗಳು ತಾವಾಗಿಯೇ ಹುಟ್ಟುವುದಿಲ್ಲ, ಹುಟ್ಟಿಸಲಾಗುತ್ತದೆ
ಲೇಖಕಿ ನೂತನ ದೋಶೆಟ್ಟಿ
Follow us
ಶ್ರೀದೇವಿ ಕಳಸದ
|

Updated on:Mar 16, 2022 | 10:53 AM

ಮೀಟುಗೋಲು | Meetugolu : ಯಾರ ಲೀಲೆಗೋ ಯಾರೋ ಏನೋ ಗುರಿಯಿರದೆ ಬಿಟ್ಟ ಬಾಣಕ್ಕೆ ಓಡುತ್ತಲೇ ಇರುತ್ತೇವೆ, ಇದ್ದೇವೆ. ಆದರೂ ಬಿಡುವು ಮಾಡಿಕೊಂಡು ಒಂದು ಸಿನೆಮಾ ನೋಡುವ ಮನಸ್ಸು ಮಾಡುತ್ತೇವೆ; ಅರೆ! ಇಂಥದೇ ಒಂದು ಪಾತ್ರ, ಇಂಥದೇ ಒಂದು ಸನ್ನಿವೇಶ, ಇಂಥದೇ ಒಂದು ತಂತುವಿನೊಂದಿಗೆ ಜೀವಿಸುತ್ತಿದ್ದೇವಲ್ಲ ಎನ್ನಿಸಲಾರಂಭಿಸುತ್ತದೆ. ಎದುರಿನ ಪರದೆಯೊಳಗಿನ ಅಂತಃಸಾರ ಎದೆಮೆದುಳಿಗಿಳಿದು ಮೆಲ್ಲನೆ ಅಲೆಗಳನ್ನು ಹರಡುತ್ತದೆ. ಇಳಿದದ್ದು ಕಾಡದೇ ಇರದು, ಕಾಡುವುದು ಸುಮ್ಮನಿರಲು ಬಿಡದು. ಹಿಂಜಾಡಿ ಹಿಂಜಾಡಿ ಏನೇನೋ ನೆನಪುಗಳನ್ನುಕ್ಕಿಸುತ್ತದೆ, ಪ್ರಶ್ನೆಗಳನ್ನೆಬ್ಬಿಸುತ್ತದೆ. ಏಕೆಂದರೆ ಕಲೆ ಎನ್ನುವುದು ‘ರುಚಿಯವಿಚಾರ’, ನಮ್ಮ ಭಾವಭಿತ್ತಿಯನ್ನು ಮೀಟಿ, ಮೀರಿ ಪಾಕಗಟ್ಟುವ ಆತ್ಮಾವಲೋಕನದ ಪ್ರಕಾರ. ಈ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವೇ  ಕೆದಕಿಕೊಳ್ಳುತ್ತ ಅರಿವಿಲ್ಲದೆ ನಾವೇ ಒಂದು ಪಾತ್ರವಾಗಿಯೂ ನಿಂತುಬಿಡಬಹುದು! ಅಂತಹ ಅಭಿವ್ಯಕ್ತಿಗೊಂದು ವೇದಿಕೆಯಾಗಿ ‘ಟಿವಿ9 ಕನ್ನಡ ಡಿಜಿಟಲ್ : ಮೀಟುಗೋಲು’ ನೀವು ಬರೆದಾಗೆಲ್ಲ ಇದು ಪ್ರಕಟವಾಗುತ್ತದೆ. ಬರೆಯುತ್ತಿರಿ: tv9kannadadigital@gmail.com

ಸಿನೆಮಾ : ದಿ ಕಾಶ್ಮೀರ ಫೈಲ್ಸ್ (The Kashmir Files) | ಲೇಖಕಿ : ನೂತನ ದೋಶೆಟ್ಟಿ (Nutan Doshetty

(ಭಾಗ 1)

ಈ ಸಿನಿಮಾ ಈಗ ಸದ್ದು ಮಾಡುತ್ತಿದೆ. ವಿವಾದಾತ್ಮಕ ವಿಷಯಗಳಿರುವ ಚಿತ್ರಗಳು ಸದ್ದು ಮಾಡುತ್ತಿರುವುದು ಹೊಸದೇನಲ್ಲ. ಈ ಹಿಂದೆಯೂ ಫೈರ್, ಪದ್ಮಾವತ್, ಲಕ್ಷ್ಮೀ ಬಾಂಬ್, ಪಿಕೆ ಮೊದಲಾದ ಹಿಂದಿ ಚಲನಚಿತ್ರಗಳು ಬಿಡುಗಡೆಗೆ ಮೊದಲೇ ದೊಡ್ಡ ಚರ್ಚೆಗೆ ಒಳಗಾಗಿದ್ದವು. ದೇಶದ ಕೆಲ ಭಾಗಗಳಲ್ಲಿ ಈ ಸಿನಿಮಾಗಳ ಬಿಡುಗಡೆ ವಿರೋಧಿಸಿ ಪ್ರದರ್ಶನಗಳು ನಡೆದವು. ಕೆಲ ದಿನಗಳಲ್ಲೇ ಜನ ಮುಗಿಬಿದ್ದು ಚಿತ್ರಗಳನ್ನು ನೋಡಿದ್ದಲ್ಲದೇ ಕೆಲವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾದರೆ ಕೆಲವು ಪ್ರಶಸ್ತಿಗಳನ್ನು ಬಾಚಿಕೊಂಡವು. ಕಾಶ್ಮೀರದ ಭಯೋತ್ಪಾದನೆಯ ಕುರಿತಂತೆ ಕೆಲವಾರು ಚಿತ್ರಗಳು ಹಿಂದೆ ಬಂದಿದ್ದರೂ ಈ ಮಟ್ಟದ ಸುದ್ದಿ ಮಾಡಿರಲಿಲ್ಲ. ಹಾಗಾದರೆ ಈ ಸಿನಿಮಾ ಏಕೆ ಇಷ್ಟು ಸುದ್ದಿಯಲ್ಲಿದೆ?

ಇದನ್ನೂ ಓದಿ : Amazon Prime Video : ‘ನೆನಪುಗಳು ಮನಸ್ಸಿನಲ್ಲಿರಲಿ ಅಂತ ಇಟ್ಟುಕೊಳ್ಳಬೇಕು, ಯಾರನ್ನಾದರೂ ದೂಷಿಸುವುದಕ್ಕಂತ ಅಲ್ಲ’

ಕಾಶ್ಮೀರ ಫೈಲ್ಸ್ ಚಿತ್ರ ಸತ್ಯ ಘಟನೆಯಾಧಾರಿತ ಹಾಗೂ ಈ ಸತ್ಯ ಇದುವರೆಗೂ ಜಗದ ಕಣ್ಣಿಂದ ಮರೆಮಾಚಲ್ಪಟ್ಟಿದ್ದು ಎಂಬುದಷ್ಟೇ ಈ ಕುತೂಹಲಕ್ಕೆ ಕಾರಣ ಇರಲಾರದು. ಇಂದಿನ ಭಾರತದ ಸನ್ನಿವೇಶದಲ್ಲಿ ಆಧುನಿಕ ಮಾಧ್ಯಮಗಳ ಮೂಲಕ ವಿಷಯಗಳ ಸೆನ್ಸೇಷನಲೈಜ಼ೇಷನ್ ಬಹಳ ಸಾಮಾನ್ಯವಾದ ವಿಷಯವಾಗಿದೆ. 70-80ರ ದಶಕದಲ್ಲಿ ಈ ಕೆಲಸವನ್ನು ಸಿನಿಮಾಗಳು ಬಹಳ ಪರಿಣಾಮಕಾರಿಯಾಗಿ ಮಾಡಿದ್ದವು. ಯುವಜನಾಂಗದ ರಕ್ತ ಕುದಿಯುವ ಹಾಗೆ ಮಾಡಿದ್ದ ಅನೇಕ ಸಿನಿಮಾಗಳು ಆಗ ಇದ್ದವು . ಆದರೆ ಆಗಿನ ಸಾಮಾಜಿಕ ಹಾಗೂ ಮಾಧ್ಯಮ ಸನ್ನಿವೇಶಗಳು ಭಿನ್ನವಾಗಿದ್ದು, ರೋಷವನ್ನು ಅವುಡುಗಚ್ಚಿ ಸಹಿಸುವದನ್ನು ಕುಟುಂಬದ ಸಂಯಮಿಕ ವಾತಾವರಣ ಕಲಿಸಿತ್ತು. ಜೊತೆಗೆ ಕ್ಷಣಾರ್ಧದಲ್ಲಿ ಜಗತ್ತನ್ನು ಸುತ್ತುವ ಇಂದಿನ ಆಧುನಿಕ ಮಾಧ್ಯಮಗಳೂ ಇರಲಿಲ್ಲ. ಆದರೆ ಈಗ ವಿವಾದಗಳು ತಾವಾಗಿ ಹುಟ್ಟುವುದಿಲ್ಲ. ಅವುಗಳನ್ನು ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರಣಗಳಿಗಾಗಿ ಹುಟ್ಟಿಸಲಾಗುತ್ತದೆ ಎಂಬುದನ್ನು ಕಳೆದ ಕೆಲ ದಶಕಗಳ ಬೆಳವಣಿಗೆಗಳನ್ನು ಗಮನಿಸಿ ತಿಳಿಯಬಹುದಾಗಿದೆ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಇದನ್ನೂ ಓದಿ : Modern Love : ಮೀಟುಗೋಲು ; ಈಕೆ ರಾತ್ರಿಯ ಹುಡುಗಿ ಅವನು ಹಗಲಿನ ಹುಡುಗ

ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/meetugolu

Published On - 9:28 am, Wed, 16 March 22

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?