ಪುರಿ ಜಗನ್ನಾಥ್ (Puri Jagannadh) ನಿರ್ದೇಶನದ, ವಿಜಯ್ ದೇವರಕೊಂಡ ಅಭಿನಯದ ‘ಲೈಗರ್’ ಸಿನಿಮಾ (Liger Movie) ಬಾಕ್ಸ್ ಆಫೀಸ್ನಲ್ಲಿ ಹೇಳಿಕೊಳ್ಳುವಂತಹ ಮೋಡಿ ಮಾಡಿಲ್ಲ. ವಿಮರ್ಶೆಯಲ್ಲಿ ಚಿತ್ರ ಸೋತ ಬೆನ್ನಲ್ಲೇ ಸಿನಿಮಾಗೆ ಹಿನ್ನಡೆ ಆಯಿತು. ಈ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಮೈಕ್ ಟೈಸನ್ ಅವರ ಆಗಮನ ಆಗುತ್ತದೆ. ಅವರು ಸಿನಿಮಾದಲ್ಲಿ ನಿಜಕ್ಕೂ ಅಗತ್ಯವಿತ್ತೇ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡೋದು ಸಹಜ. ಈ ಚಿತ್ರಕ್ಕಾಗಿ ಮೈಕ್ ಟೈಸನ್ (Mike Tyson) ಅವರು ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಕಣ್ಣರಳಿಸಿದ್ದಾರೆ.
ಮೈಕ್ ಟೈಸನ್ ಅವರು ಬಾಕ್ಸಿಂಗ್ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದರು. ಆದರೆ, ಈಗಿನ ಜನರೇಷನ್ನವರಿಗೆ ಮೈಕ್ ಟೈಸನ್ ಬಗ್ಗೆ ಸರಿಯಾಗಿ ತಿಳಿದಿಲ್ಲ. ಅನೇಕರಿಗೆ ಅವರು ಯಾರು ಎಂಬುದೇ ಗೊತ್ತಿಲ್ಲ. ಈ ಕಾರಣಕ್ಕೆ ಚಿತ್ರದಲ್ಲಿ ಅವರನ್ನು ಹಾಕಿಕೊಂಡರೆ ಹೆಚ್ಚು ಮೈಲೇಜ್ ಸಿಗಲಿದೆ ಎಂಬ ನಿರ್ದೇಶಕ ಪುರಿ ಜಗನ್ನಾಥ್ ಅವರ ಆಲೋಚನೆ ತಲೆಕೆಳಗಾಗಿದೆ.
ಮೈಕ್ ಟೈಸನ್ ಅವರನ್ನು ಸಿನಿಮಾದಲ್ಲಿ ಹಾಕಿಕೊಳ್ಳಬೇಕು ಎಂಬ ಆಲೋಚನೆ ಮೊದಲು ಬಂದಿದ್ದು ಪುರಿ ಜಗನ್ನಾಥ್ಗೆ. ಈ ಐಡಿಯಾವನ್ನು ‘ಲೈಗರ್’ ನಿರ್ಮಾಪಕರಲ್ಲೊಬ್ಬರಾದ ಕರಣ್ ಜೋಹರ್ ಅವರು ಸಂಪೂರ್ಣವಾಗಿ ವಿರೋಧಿಸಿದ್ದರು. ಮೈಕ್ ಟೈಸನ್ ಸಿನಿಮಾದಲ್ಲಿ ನಟಿಸಿದರೆ ಯಾವುದೇ ರೀತಿಯಲ್ಲಿ ಉಪಯೋಗ ಆಗುವುದಿಲ್ಲ ಎಂಬ ಮಾತನ್ನು ಹೇಳಿದ್ದರು. ಆದರೆ, ಇದನ್ನು ಕೇಳುವ ಸ್ಥಿತಿಯಲ್ಲಿ ಪುರಿ ಜಗನ್ನಾಥ್ ಇರಲಿಲ್ಲ. ವಿಜಯ್ ದೇವರಕೊಂಡ ಕೂಡ ಈ ಆಲೋಚನೆಗೆ ಅಷ್ಟಾಗಿ ಬೆಂಬಲ ನೀಡಿಲ್ಲ. ಆದರೆ, ಎಷ್ಟೇ ಖರ್ಚಾದರೂ ಮೈಕ್ ಟೈಸನ್ ಸಿನಿಮಾದಲ್ಲಿ ನಟಿಸಬೇಕು ಎಂದು ಪುರಿ ಹಠ ಹಿಡಿದರು.
ಮೈಕ್ ಟೈಸನ್ ಈ ಚಿತ್ರದಲ್ಲಿ ನಟಿಸೋಕೆ ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅಷ್ಟೇ ಅಲ್ಲ, ಅಮೆರಿಕಕ್ಕೆ ಬಂದು ಸಿನಿಮಾ ಶೂಟಿಂಗ್ ಮಾಡಬೇಕು ಎಂಬ ಷರತ್ತು ಇಟ್ಟಿದ್ದರು. ಈ ಕಾರಣಕ್ಕೆ ಇಡೀ ತಂಡದವರು ಅಮೆರಿಕಕ್ಕೆ ತೆರಳಿದ್ದರು. ಇದರಿಂದ ಸಿನಿಮಾ ಬಜೆಟ್ ಹೆಚ್ಚಿದೆ.
ಇದನ್ನೂ ಓದಿ: ‘ಲೈಗರ್ಗೋಸ್ಕರ ಎಣ್ಣೆ ಬಿಟ್ಟೆ, ಈವರೆಗೂ ಮುಟ್ಟಿಲ್ಲ’: ವಿಜಯ್ ದೇವರಕೊಂಡ
ಪ್ರತಿ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಉತ್ತಮವಾಗಿ ಮೂಡಿ ಬಂದರೆ ಪ್ರೇಕ್ಷಕರು ಥ್ರಿಲ್ ಆಗುತ್ತಾರೆ. ಸಿನಿಮಾ ಸಪ್ಪೆಯಾಗಿ, ಕ್ಲೈಮ್ಯಾಕ್ಸ್ ಕೂಡ ಸಪ್ಪೆ ಎಂದರೆ ಪ್ರೇಕ್ಷಕರಿಗೆ ಬೇಸರ ಆಗೋದು ಸಹಜ. ‘ಲೈಗರ್’ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಮೈಕ್ ಟೈಸನ್ ಬದಲು ಬೇರೆ ಯಾರಾದರೂ ಇದ್ದಿದ್ದರೆ ಸಿನಿಮಾ ಉತ್ತಮ ರೀತಿಯಲ್ಲಿ ಮೂಡಿ ಬರುತ್ತಿತ್ತು ಎಂಬ ಮಾತುಗಳು ಕೇಳಿ ಬಂದಿವೆ.