ಮಿಥುನ್ ಚಕ್ರವರ್ತಿ ಆರೋಗ್ಯದಲ್ಲಿ ಚೇತರಿಕೆ; ಪರೀಕ್ಷೆ ಮಾಡಿ ಶೀಘ್ರವೇ ಡಿಸ್ಚಾರ್ಜ್​

|

Updated on: Feb 12, 2024 | 7:01 AM

ಮಿಥುನ್ ಚಕ್ರವರ್ತಿ 73 ವರ್ಷ ವಯಸ್ಸು. ಶನಿವಾರ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಸೇರಿಸಲಾಯಿತು. ಮಿಥುನ್ ಚೇತರಿಕೆ ಕಾಣುತ್ತಿದ್ದಾರೆ. ಈ ವಿಚಾರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ವೈದ್ಯರು ಕೂಡ ಅವರ ಆರೋಗ್ಯದ ಬಗ್ಗೆ ಒಳ್ಳೆಯ ಸುದ್ದಿಯನ್ನೇ ನೀಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಮಿಥುನ್ ಚಕ್ರವರ್ತಿ ಆರೋಗ್ಯದಲ್ಲಿ ಚೇತರಿಕೆ; ಪರೀಕ್ಷೆ ಮಾಡಿ ಶೀಘ್ರವೇ ಡಿಸ್ಚಾರ್ಜ್​
ಮಿಥುನ್ ಚಕ್ರವರ್ತಿ
Follow us on

ಖ್ಯಾತ ನಟ ಹಾಗೂ ರಾಜಕಾರಣಿ ಮಿಥುನ್ ಚಕ್ರವರ್ತಿ (Mithun Chakraborty) ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡಿದೆ. ಅವರ ಆರೋಗ್ಯ ಸುಧಾರಣೆ ಕಾಣುತ್ತಿದೆ. ಅವರಿಗೆ ಮಿದುಳಿನ ಸ್ಟ್ರೋಕ್ ಆಗಿತ್ತು ಎಂದು ತಿಳಿದು ಬಂದಿದೆ. ಈ ವರದಿಯಿಂದ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಆದರೆ, ಈ ರೀತಿ ಚಿಂತೆಗೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಶೀಘ್ರವೇ ಮಿಥುನ್ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಮಿಥುನ್ ಚಕ್ರವರ್ತಿಗೆ ಈಗ 73 ವರ್ಷ ವಯಸ್ಸು. ಅವರಿಗೆ ಶನಿವಾರ (ಫೆಬ್ರವರಿ 10) ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿತು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅವರು ಚೇತರಿಕೆ ಕಾಣುತ್ತಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ವೈದ್ಯರು ಕೂಡ ಅವರ ಆರೋಗ್ಯದ ಬಗ್ಗೆ ಒಳ್ಳೆಯ ಸುದ್ದಿಯನ್ನೇ ನೀಡಿದ್ದಾರೆ.

‘ಮಿಥುನ್ ಚಕ್ರವರ್ತಿ ಅವರು ಚೇತರಿಕೆ ಕಾಣುತ್ತಿದ್ದಾರೆ. ಡಿಸ್ಚಾರ್ಜ್​ ಮಾಡುವುದಕ್ಕೂ ಮೊದಲು ಕೆಲವು ಪರೀಕ್ಷೆಗಳನ್ನು ಮಾಡಬೇಕಿದೆ’ ಎಂದಿದ್ದಾರೆ ವೈದ್ಯರು. ಈ ಮಾತನ್ನು ಕೇಳಿ ಅವರ ಫ್ಯಾನ್ಸ್ ಖುಷಿಯಾಗಿದ್ದಾರೆ. ಅವರು ಬೇಗ ಮನೆಗೆ ಬರುವಂತಾಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.

1976ರಿಂದ ಮಿಥುನ್ ಚಕ್ರವರ್ತಿ ಅವರು ಸಿನಿಮಾ ಮಾಡುತ್ತಿದ್ದಾರೆ. ಮೊದಲ ಚಿತ್ರದಲ್ಲೇ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿತು ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ನಂತರ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ವರ್ಷ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೂಡ ಸಿಕ್ಕಿದೆ.

ಇದನ್ನೂ ಓದಿ: ಮಿಥುನ್​ ಚಕ್ರವರ್ತಿಗೆ ಬ್ರೇನ್​ ಸ್ಟ್ರೋಕ್​; ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡಿದ ಆಸ್ಪತ್ರೆ

ಈ ಮಧ್ಯೆ ಮಿಥುನ್ ಅಡ್ಮಿಟ್ ಆಗಿರುವ ಕೋಲ್ಕತ್ತ ಆಸ್ಪತ್ರೆಗೆ ಹಲವರು ಭೇಟಿ ನೀಡುತ್ತಿದ್ದಾರೆ. ನಟಿ ದೇವಶ್ರೀ ರಾಯ್, ನಿರ್ದೇಶಕ ಪತಿಕೃತ್​ ಬಸು ಮೊದಲಾದವರು ಆಸ್ಪತ್ರೆಗೆ ಬಂದು ಹೋಗಿದ್ದಾರೆ. ದೇವಶ್ರೀ ಅವರು ಮಿಥುನ್ ಆರೋಗ್ಯದ ಬಗ್ಗೆ ಅಪ್​ಡೇಟ್ ನೀಡಿದ್ದಾರೆ. ‘ಮಿಥುನ್​ ಚಕ್ರವರ್ತಿ ಅವರ ಆರೋಗ್ಯ ಸುಧಾರಿಸುತ್ತಿದೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:01 am, Mon, 12 February 24