‘ಜೈ ಹನುಮಾನ್ಗಿಂತ ಶ್ರೀ ಆಂಜನೇಯಂ ಚಿತ್ರವೇ ಉತ್ತಮವಾಗಿದೆ’ ಎಂದ ಅಭಿಮಾನಿಗೆ ನಿರ್ದೇಶಕ ವಂಶಿ ಕೊಟ್ಟರು ಉತ್ತರ
‘ಹನುಮಾನ್’ ಚಿತ್ರಕ್ಕೆ ಪ್ರಶಾಂತ್ ವರ್ಮ ನಿರ್ದೇಶನ ಮಾಡಿದ್ದಾರೆ. ತೇಜ ಸಜ್ಜಾ ಜೊತೆ ಕನ್ನಡ ನಟಿ ಅಮೃತಾ ಅಯ್ಯರ್ ತೆರೆ ಹಂಚಿಕೊಂಡಿದ್ದಾರೆ. ಸೂಪರ್ ಹೀರೋ ಮಾದರಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಶಿವಕುಮಾರ್ ಎಂಬ ಸಿನಿಪ್ರಿಯ ಈ ಚಿತ್ರವನ್ನು ಮತ್ತೊಂದು ಸಿನಿಮಾಗೆ ಹೋಲಿಕೆ ಮಾಡಿದ್ದರು. ಈ ಟ್ವೀಟ್ ವೈರಲ್ ಆಗಿದೆ.
![‘ಜೈ ಹನುಮಾನ್ಗಿಂತ ಶ್ರೀ ಆಂಜನೇಯಂ ಚಿತ್ರವೇ ಉತ್ತಮವಾಗಿದೆ’ ಎಂದ ಅಭಿಮಾನಿಗೆ ನಿರ್ದೇಶಕ ವಂಶಿ ಕೊಟ್ಟರು ಉತ್ತರ](https://images.tv9kannada.com/wp-content/uploads/2024/02/hanuman-movie-2.jpg?w=1280)
ತೇಜ ಸಜ್ಜಾ ನಟನೆಯ ‘ಹನುಮಾನ್’ ಸಿನಿಮಾ (Hanuman Movie) ರಿಲೀಸ್ ಆಗಿ ಒಂದು ತಿಂಗಳು ಕಳೆದಿದೆ. ಈವರೆಗೆ ಸಿನಿಮಾ 300 ಕೋಟಿ ರೂಪಾಯಿ ಬಾಚಿಕೊಂಡಿದೆ. ತೆಲುಗು ಚಿತ್ರರಂಗದಲ್ಲಿ 2024ರ ಮೊದಲ ಹಿಟ್ ಸಿನಿಮಾ ಇದು ಅನ್ನೋದು ವಿಶೇಷ. ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ಎದುರು ಈ ಚಿತ್ರ ಗೆಲುವು ಕಂಡಿದೆ. ಈಗಲೂ 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವನ್ನು ಪ್ರೇಕ್ಷರು ಹಲವು ಬಾರಿ ವೀಕ್ಷಣೆ ಮಾಡಿದ್ದಾರೆ. ಇದು ಸಿನಿಮಾಗೆ ಸಹಕಾರಿ ಆಗಿದೆ. 2004ರಲ್ಲಿ ಬಂದ ‘ಶ್ರೀ ಆಂಜನೇಯಂ’ ಚಿತ್ರವನ್ನು ಅಭಿಮಾನಿಯೊಬ್ಬರು ಹೊಗಳಿದ್ದರು. ‘ಹನುಮಾನ್’ ಚಿತ್ರಕ್ಕಿಂತ ಆ ಸಿನಿಮಾ ಉತ್ತಮವಾಗಿದೆ ಎಂದಿದ್ದರು.
‘ಹನುಮಾನ್’ ಸಿನಿಮಾಗೆ ಪ್ರಶಾಂತ್ ವರ್ಮ ನಿರ್ದೇಶನ ಮಾಡಿದ್ದಾರೆ. ತೇಜ ಸಜ್ಜಾ ಜೊತೆ ಕನ್ನಡ ನಟಿ ಅಮೃತಾ ಅಯ್ಯರ್ ತೆರೆ ಹಂಚಿಕೊಂಡಿದ್ದಾರೆ. ವಿನಯ್ ರೈ, ವೆನ್ನೆಲ್ಲಾ ಕಿಶೋರ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸೂಪರ್ ಹೀರೋ ಮಾದರಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಶಿವಕುಮಾರ್ ಎಂಬುವವರು ಈ ಚಿತ್ರವನ್ನು ಮತ್ತೊಂದು ಸಿನಿಮಾಗೆ ಹೋಲಿಕೆ ಮಾಡಿದ್ದರು. ಈ ಟ್ವೀಟ್ ವೈರಲ್ ಆಗಿದೆ.
ಅಭಿಮಾನಿ ಏಳಿದ್ದು ಏನು?
2004ರಲ್ಲಿ ನಿತಿನ್ ನಟನೆಯ ‘ಜೈ ಆಂಜನೇಯಂ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಕಮಾಯಿ ಮಾಡಲೇ ಇಲ್ಲ. ಈ ಬಗ್ಗೆ ಶಿವಕುಮಾರ್ ಮಾತನಾಡಿದ್ದಾರೆ. ‘ಶ್ರೀ ಆಂಜನೇಯಂ ಹಾಗೂ ಹನುಮಾನ್. ಬಹುಶಃ ಸ್ವಲ್ಪ ಎಚ್ಚರಿಕೆವಹಿಸಿದ್ದರೆ ಶ್ರೀ ಆಂಜನೇಯಂ ಹಿಟ್ ಆಗುತ್ತಿತ್ತು. ಹನುಮಾನ್ಗಿಂತ ಈ ಚಿತ್ರ ಉತ್ತಮವಾಗಿದೆ’ ಎಂದ ಶಿವಕುಮಾರ್, ‘ಶ್ರೀ ಆಂಜನೇಯಂ’ ಚಿತ್ರದ ನಿರ್ದೇಶಕನ ಟ್ಯಾಗ್ ಮಾಡಿದ್ದರು.
ನಿರ್ದೇಶಕನ ಉತ್ತರ ಏನು?
‘ಪ್ರೇಕ್ಷಕರು ಎಂದಿಗೂ ತಪ್ಪು ಮಾಡುವುದಿಲ್ಲ. ಸಿನಿಮಾನ ಅವರು ಇಷ್ಟಪಟ್ಟಿಲ್ಲ ಎಂದರೆ ಸಿನಿಮಾದಲ್ಲೇ ಏನೋ ತೊಂದರೆ ಇರಬೇಕು ಅಥವಾ ನಮಗೆ ಚಿತ್ರವನ್ನು ಜನರಿಗೆ ತಲುಪಿಸಲು ಸಾಧ್ಯವಾಗದೇ ಇರಬಹುದು. ಹೀಗಾಗಿ ಪ್ರೇಕ್ಷಕರನ್ನು ದೂಷಿಸಬೇಡಿ. ಬಹುಶಃ ನಾನು ಕೆಲವು ಕಡೆ ತಪ್ಪು ಮಾಡಿರಬಹುದು’ ಎಂದಿದ್ದಾರೆ ಕೃಷ್ಣ ವಂಶಿ.
ಅಭಿಮಾನಿಗಳು ಈ ರೀತಿ ಹೇಳಿದಾಗ ಕೆಲವರು ಅದನ್ನು ಒಪ್ಪಿಕೊಂಡು, ‘ನಮ್ಮ ಚಿತ್ರವನ್ನು ನೋಡಲು ಅಭಿಮಾನಿಗಳೇ ಬಂದಿಲ್ಲ. ಹೀಗಾಗಿ ಸಿನಿಮಾ ಸೋತಿತು’ ಎಂದು ಹೇಳುವವರೇ ಹೆಚ್ಚು. ಆದಾಗ್ಯೂ ಕೃಷ್ಣ ಅವರು ಸಿನಿಮಾ ಸೋಲಲು ತಮ್ಮದೇ ತಪ್ಪು ಎಂದು ಹೇಳಿದ್ದಾರೆ. ಇದು ಅನೇಕರಿಗೆ ಖುಷಿ ನೀಡಿದೆ.
ಇದನ್ನೂ ಓದಿ: ‘ಹನುಮಾನ್’ ಸಿನಿಮಾದ ಹೀರೋ ತೇಜ ಸಜ್ಜಾ ಸಂಭಾವನೆಯಲ್ಲಿ ಏರಿಕೆ
ಸದ್ಯ ‘ಹನುಮಾನ್’ ಸಿನಿಮಾ 300 ಕೋಟಿ ರೂಪಾಯಿ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಕಲೆಕ್ಷನ್ ಮಾಡೋ ಸಾಧ್ಯತೆ ಇದೆ. ಈ ಚಿತ್ರ ಶೀಘ್ರವೇ ಒಟಿಟಿಯಲ್ಲಿ ಬಿಡುಡಗೆ ಆಗಲಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಈ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗುತ್ತಿದ್ದು, ‘ಜೈ ಹನುಮಾನ್’ ಎಂದು ಶೀರ್ಷಿಕೆ ಇಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ