
ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತು ಎಂದರೆ ಸಾಮಾನ್ಯವಾಗಿ ಗಳಿಕೆ ಕಡಿಮೆ ಆಗುತ್ತವೆ. ಸಿನಿಮಾ ನೂರು ಕೋಟಿ ರೂಪಾಯಿ ಕ್ಲಬ್ ಸೇರೋದು ಕೂಡ ಕಷ್ಟ ಆಗುತ್ತದೆ. ಆದರೆ, ‘ಕೂಲಿ’ (Coolie) ಹಾಗೂ ‘ವಾರ್ 2’ ಸಿನಿಮಾಗಳು ಮಾತ್ರ ಇದಕ್ಕೆ ಭಿನ್ನ. ಎರಡೂ ಚಿತ್ರಗಳಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿವೆ. ಇದು ರಜನಿಕಾಂತ್ ಹಾಗೂ ಜೂನಿಯರ್ ಎನ್ಟಿಆರ್ ಚಿತ್ರಗಳ ಸ್ಪೆಷಾಲಿಟಿ ಎಂದೇ ಹೇಳಬಹುದು.
‘ವಾರ್ 2’ ಹಾಗೂ ‘ಕೂಲಿ’ ಸಿನಿಮಾಗಳು ಆಗಸ್ಟ್ 14ರಂದು ರಿಲೀಸ್ ಆದವು. ಎರಡೂ ಸಿನಿಮಾಗಳು ಆಗಸ್ಟ್ 15ರ ರಜೆಯ ಲಾಭವನ್ನು ಪಡೆಯಲು ಪ್ಲ್ಯಾನ್ ಮಾಡಿಕೊಂಡಿದ್ದವು. ಈ ಪ್ಲ್ಯಾನ್ ಸಫಲವಾಗಿದೆ. ಸಿನಿಮಾ ಅಬ್ಬರದ ಗಳಿಕೆ ಮಾಡುತ್ತಿದೆ. ಮೂರು ದಿನಕ್ಕೆ ಎರಡೂ ಚಿತ್ರಗಳ ದೇಶಿಯ ಕಲೆಕ್ಷನ್ 200 ಕೋಟಿ ರೂಪಾಯಿ ಸಮೀಪಿಸಿದೆ.
‘ಕೂಲಿ’ ಸಿನಿಮಾ ಮೊದಲ ದಿನ ಭಾರತದಲ್ಲಿ ಬರೋಬ್ಬರಿ 65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಶುಕ್ರವಾರ, ಶನಿವಾರ ಹಾಗೂ ಭಾನುವಾರ ಅನುಕ್ರಮವಾಗಿ, 54.75 ಕೋಟಿ ರೂಪಾಯಿ, 39.5 ಕೋಟಿ ರೂಪಾಯಿ ಹಾಗೂ 35 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 194 ಕೋಟಿ ರೂಪಾಯಿ ಆಗಿದೆ. ‘ಕೂಲಿ’ ಚಿತ್ರಕ್ಕೆ ತಮಿಳಿನ ಜೊತೆ ಹಿಂದಿ ಹಾಗೂ ತೆಲುಗಿನಲ್ಲೂ ಒಳ್ಳೆಯ ಕಲೆಕ್ಷನ್ ಆಗುತ್ತಿದೆ. ಈ ಚಿತ್ರದಲ್ಲಿ ರಜನಿಕಾಂತ್ ಹೀರೋ. ಶ್ರುತಿ ಹಾಸನ್, ಶೌಬಿನ್ ಶಾಹಿರ್, ಉಪೇಂದ್ರ ಮೊದಲಾದವರು ನಟಿಸಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನ ಚಿತ್ರಕ್ಕಿದೆ.
ಇದನ್ನೂ ಓದಿ: ಮೂರೇ ದಿನಕ್ಕೆ 200 ಕೋಟಿ ಕಲೆಕ್ಷನ್ ದಾಟಿದ ‘ವಾರ್ 2’, ‘ಕೂಲಿ’ ಎಷ್ಟು?
ಜೂನಿಯರ್ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ಅಭಿನಯದ ‘ವಾರ್ 2’ ಸಿನಿಮಾ ಆಗಸ್ಟ್ 14ರಂದು ಬಿಡುಡಗೆ ಆಗಿದೆ. ಈ ಚಿತ್ರಕ್ಕೂ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದಾಗ್ಯೂ ಆ್ಯಕ್ಷನ್ ಪ್ರಿಯರಿಗೆ ಸಿನಿಮಾ ಇಷ್ಟ ಆಗಿದೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 173.60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಚಿತ್ರದ ಹೆಚ್ಚುಗಾರಿಕೆ. ಸಿನಿಮಾಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:00 am, Mon, 18 August 25