
ನಟ ಮೋಹನ್ಲಾಲ್ (Mohanlal) ಅವರಿಗೆ ಇಂದು (ಮೇ 21) ಜನ್ಮದಿನ. ಅವರಿಗೆ ಈಗ 65 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ಅವರು ಸಾಕಷ್ಟು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈಗ ಅವರು ಒಂದು ಹೊಸ ದಾಖಲೆ ಬರೆಯಲು ರೆಡಿ ಆಗಿದ್ದಾರೆ. ಆ ದಾಖಲೆ ಈ ವರ್ಷವೇ ನಿರ್ಮಾಣ ಆಗಲಿದೆ ಅನ್ನೋದು ವಿಶೇಷ. ಹಾಗಂತ ಮೋಹನ್ಲಾಲ್ ಅವರು ವೈಯಕ್ತಿಕ ವಿಚಾರದಲ್ಲಿ ಯಾವುದೋ ದಾಖಲೆ ಮಾಡುತ್ತಿದ್ದಾರೆ ಎಂದುಕೊಳ್ಳಬೇಡಿ. ಅವರು ದಾಖಲೆ ಮಾಡುತ್ತಿರುವುದು ಸಿನಿಮಾಗಳ ವಿಚಾರದಲ್ಲಿಯೇ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ಅವರ ಬರ್ತ್ಡೇ ಪ್ರಯುಕ್ತ ಆ ಬಗ್ಗೆ ಚರ್ಚಿಸೋಣ.
ಮೋಹನ್ಲಾಲ್ ನಟನೆಯ ‘ಎಲ್2: ಎಂಪುರಾನ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಸಿನಿಮಾ ಗೆಲುವು ಕಂಡಿತು. ಪೃಥ್ವಿರಾಜ್ ಸುಕುಮಾರನ್ ಈ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ‘ಲುಸಿಫರ್’ ಚಿತ್ರದ ಮುಂದುವರಿದ ಭಾಗವೇ ಆಗಿದೆ. ಈ ಸಿನಿಮಾ ಕೇರಳದ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಇದಾದ ಬಳಿಕ ‘ಥುಡರುಂ’ ಸಿನಿಮಾ ತೆರೆಗೆ ಬಂತು. ಈ ಚಿತ್ರ ಕೂಡ ಯಶಸ್ಸು ಕಂಡಿತು. ಇದನ್ನು ಅನೇಕರು ‘ದೃಶ್ಯಂ’ ಚಿತ್ರಕ್ಕೆ ಹೋಲಿಕೆ ಮಾಡಿದ್ದಾರೆ. ಈ ಸಿನಿಮಾ ಕೇರಳ ಒಂದರಲ್ಲೇ 100 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಈಗ ಕೇಳಿ ಬರುತ್ತಿರುವ ಹೊಸ ಮಾಹಿತಿ ಎಂದರೆ ಮೋಹನ್ಲಾಲ್ ನಟನೆಯ ‘ಹೃದಯಪೂರ್ವಮ್’ ಚಿತ್ರದ ಶೂಟ್ ಪೂರ್ಣಗೊಳ್ಳಲಿದೆಯಂತೆ. ಈ ಸಿನಿಮಾ ಕೂಡ ಶೀಘ್ರವೇ ರಿಲೀಸ್ ಆಗಲಿದೆ. ಈ ಮೂಲಕ ಒಂದೇ ವರ್ಷ ಅವರ ನಟನೆಯ ಮೂರು ಚಿತ್ರಗಳು ರಿಲೀಸ್ ಆದಂತೆ ಆಗಲಿದೆ. ಮಮ್ಮೂಟ್ಟಿ ಅವರು ಮಲಯಾಳಂ ರಂಗದಲ್ಲಿ ಈ ಸಾಧನೆ ಮಾಡಿದ್ದರು.
ಇದನ್ನೂ ಓದಿ: ಮೋಹನ್ಲಾಲ್ ತಂತ್ರದಿಂದಾಗಿ ಇಕ್ಕಟ್ಟಿಗೆ ಸಿಲುಕಿದ ಅಜಯ್ ದೇವಗನ್
‘ಹೃದಯಪೂರ್ವಂ’ ಎಂಬುದು ಫ್ಯಾಮಿಲಿ ಡ್ರಾಮಾ ಆಗಿದೆ. ಸತ್ಯನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದೆ. ಆಗಸ್ಟ್ 28ರಂದು ಸಿನಿಮಾ ತೆರೆಗೆ ಬರೋ ಸಾಧ್ಯತೆ ಇದೆ. ಇದಾದ ಬಳಿಕ ‘ಕಣ್ಣಪ್ಪ’ದಲ್ಲಿ ಅವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಅತಿಥಿ ಪಾತ್ರ. ಆದಾಗ್ಯೂ ಈ ಚಿತ್ರವನ್ನು ನಾವು ಪರಿಗಣಿಸಬಹುದಾಗಿದೆ. ಈ ಮೂಲಕ ಮೋಹನ್ಲಾಲ್ ಅವರು ಒಂದೇ ವರ್ಷ 4 ಚಿತ್ರಗಳ ಬಿಡುಗಡೆಯನ್ನು ಕಾಣುತ್ತಿದೆ. ಅವರ ನಟನೆಯ ‘ವೃಷಭ’ ಚಿತ್ರದ ಶೂಟ್ನಲ್ಲಿ ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:46 am, Wed, 21 May 25