‘ಅಯ್ಯೋ ಶ್ರದ್ಧಾ’ಗೆ ನರೇಂದ್ರ ಮೋದಿಯವರಿಂದ ಪುರಸ್ಕಾರ
Ayyo Shradha:‘ಅಯ್ಯೋ ಶ್ರದ್ಧಾ’ಗೆ ವರ್ಷದ ಅತ್ಯುತ್ತಮ ಕ್ರಿಯಾಶೀಲ ಕಂಟೆಂಟ್ ಕ್ರಿಯೇಟರ್ ಪ್ರಶಸ್ತಿ ನೀಡಿದ ನರೇಂದ್ರ ಮೋದಿ.

ಯೂಟ್ಯೂಬ್ (Youtube), ಇನ್ಸ್ಟಾಗ್ರಾಂ ರೀಲ್ಸ್ಗಳನ್ನು (Instagram) ಬೈದುಕೊಳ್ಳುವವರೇ ಹೆಚ್ಚು ಆದರೆ ಅದು ಒಂದು ಅತ್ಯಂತ ಲಾಭದಾಯಕ ವೃತ್ತಿ ಎಂಬುದನ್ನು ಅರಿತಿರುವವರು ಕೆಲವು ಮಂದಿಯಷ್ಟೆ. ಕಂಟೆಂಟ್ ಕ್ರಿಯೇಷನ್ ಎನ್ನುವುದು ಕೋವಿಡ್ ಬಳಿಕ ಪ್ರಾರಂಭವಾಗಿ, ಬೂಮ್ ಆಗುತ್ತಿರುವ ವಿಭಾಗ. ಇದೀಗ ಈ ವಿಭಾಗದಲ್ಲಿ ಅತ್ಯುತ್ತಮವರನ್ನು ಆರಿಸಿ ಅವರಿಗೆ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಪ್ರಶಸ್ತಿ ವಿತರಣೆ ಮಾಡಿದ್ದಾರೆ. ಅತ್ಯುತ್ತಮ ಕ್ರಿಯಾಶೀಲ ಕಂಟೆಂಟ್ ಕ್ರಿಯೇಟರ್ ಪ್ರಶಸ್ತಿಯನ್ನು ಕನ್ನಡತಿ ‘ಅಯ್ಯೋ ಶ್ರದ್ಧಾ’ ಖ್ಯಾತಿಯ ಶ್ರದ್ಧಾ ಪಡೆದುಕೊಂಡಿದ್ದಾರೆ.
ಕನ್ನಡತಿ ಶ್ರದ್ಧಾ ಜೈನ್, ‘ಅಯ್ಯೋ ಶ್ರದ್ಧಾ’ ಚಾನೆಲ್ ಮೂಲಕ ಹಲವಾರು ಕಾಮಿಡಿ ಕಿರು ವಿಡಿಯೋಗಳನ್ನು ಮಾಡಿದ್ದಾರೆ. ಅವರ ವಿಡಿಯೋಗಳಿಗೆ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಅಭಿಮಾನಿಗಳಿದ್ದಾರೆ. ಯೂಟ್ಯೂಬ್ ಕಾಮಿಡಿ ವಿಡಿಯೋಗಳಲ್ಲಿ ಅಸಭ್ಯವಾಗಿ ಹಾಸ್ಯ ಮಾಡುವವರ ಸಂಖ್ಯೆ ಹೆಚ್ಚಿರುವಾಗ ಅತ್ಯಂತ ಸೆನ್ಸಿಬಲ್ ಕಾಮಿಡಿ ಮಾಡುವ ಅಯ್ಯೋ ಶ್ರದ್ಧಾಗೆ ವೀಕ್ಷಕ ಬಳಗ ಬಹಳ ದೊಡ್ಡದಿದೆ.
ಇಂಗ್ಲೀಷ್, ಕನ್ನಡ ಎರಡೂ ಭಾಷೆಯಲ್ಲಿಯೂ ವಿಡಿಯೋ ಮಾಡುವ, ಸಾಮಾಜಿಕ ವಿಷಯಗಳು, ಮಧ್ಯಮ ವರ್ಗದ ಸಮಸ್ಯೆಗಳನ್ನು ಇಟ್ಟುಕೊಂಡು ವಿಡಿಯೋ ಮಾಡುವ ಶ್ರದ್ಧಾ ಜೈನ್ಗೆ ನರೇಂದ್ರ ಮೋದಿ ಅವರು ಈ ವರ್ಷದ ‘ಅತ್ಯಂತ ಕ್ರಿಯಾಶೀಲ ಕಂಟೆಂಟ್ ಕ್ರಿಯೇಟರ್’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಪ್ರಶಸ್ತಿ ನೀಡುವಾಗ ಮಾತನಾಡಿದ ನರೇಂದ್ರ ಮೋದಿ, ಶ್ರದ್ಧಾ ಜೊತೆಗೆ ಇದು ನನ್ನ ಎರಡನೇ ಭೇಟಿ, ಈ ಪ್ರಶಸ್ತಿ ಅವರಿಗೆ ಕೊಡಲು ಖುಷಿಯಾಗುತ್ತಿದೆ’ ಎಂದಿದ್ದಾರೆ.
ಇದನ್ನೂ ಓದಿ:ಮೋದಿ ಜತೆ ಬಹುಮುಖ ಪತ್ರಿಭೆ ಅಯ್ಯೋ ಶ್ರದ್ಧಾ
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರದ್ಧಾ, ‘ಮನೆಯಲ್ಲಿ ಸ್ಮಾರ್ಟ್ಫೋನ್ ಇಟ್ಟುಕೊಂಡು ಕಂಟೆಂಟ್ ಮಾಡುವುದು ಸಹ ಒಂದು ಕೌಶಲ ಎಂಬುದನ್ನು ಈ ಪ್ರಶಸ್ತಿ ಸಾಬೀತು ಮಾಡುತ್ತಿದೆ. ದೇಶದಲ್ಲಿ ಸಾಮಾನ್ಯವಾಗಿ ರಾಜಕೀಯ, ಉದ್ಯಮ, ಸಾಮಾಜಿಕ ಪರಿಸ್ಥಿತಿಗಳು ಸಾಮಾನ್ಯವಾಗಿ ಗಂಭೀರವಾಗಿರುತ್ತವೆ. ಅಂಥಹಾ ವಿಷಯಗಳಿಗೆ ಹಾಸ್ಯವನ್ನು ಬೆರೆಸಿದರೆ ಹೇಗಿರುತ್ತದೆ ಎನಿಸಿ ನಾನು ಹಾಸ್ಯದ ವಿಡಿಯೋ ಮಾಡಲು ಪ್ರಾರಂಭಿಸಿದೆ. ನಮ್ಮ ದೇಶದ ಜನರು, ಸಂದರ್ಭ ಯಾವುದೇ ಇರಲಿ ನಗಲು ಕಾರಣ ಹುಡುಕಿಕೊಳ್ಳುತ್ತಾರೆ. ಆ ಕಾರಣವನ್ನು ನಾನು ನೀಡಲು ಯತ್ನಿಸುತ್ತಿದ್ದೇನೆ, ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕೆ ಧನ್ಯವಾದ’ ಎಂದಿದ್ದಾರೆ ಶ್ರದ್ಧಾ.
ಶ್ರದ್ಧಾಗೆ ಪ್ರಶಸ್ತಿ ನೀಡಿ ಮಾತನಾಡಿದ ನರೇಂದ್ರ ಮೋದಿ, ‘ಮಾರುಕಟ್ಟೆಯಿಂದ ಎಷ್ಟೇ ಒಳ್ಳೆಯ ತರಕಾರಿ ತಂದು ಅಡುಗೆ ಮಾಡಿದರೂ ಸಹ ಅದಕ್ಕೆ ಒಗ್ಗರಣೆ ಬಿದ್ದರಷ್ಟೆ ರುಚಿ. ಹಾಸ್ಯ ಸಹ ಒಗ್ಗರಣೆಯ ಕಾರ್ಯವನ್ನು ಮಾಡುತ್ತದೆ’ ಎಂದು ಶ್ರದ್ಧಾರ ಕಂಟೆಂಟ್ ಅನ್ನು ಕೊಂಡಾಡಿದರು.
ಈ ಹಿಂದೆಯೂ ಒಮ್ಮೆ ಶ್ರದ್ಧಾ ಅವರು ಪ್ರಧಾನಿಗಳನ್ನು ಭೇಟಿಯಾಗಿದ್ದರು. ಕನ್ನಡದ ಸ್ಟಾರ್ಗಳಾದ ಯಶ್, ರಿಷಬ್ ಶೆಟ್ಟಿ, ಶ್ರದ್ಧಾ ಅವರುಗಳಿಗೆ ಮೋದಿ ಅವರಿಂದ ಆಹ್ವಾನ ಬಂದಿತ್ತು. ಆಗ ಶ್ರದ್ಧಾ, ನರೇಂದ್ರ ಮೋದಿ ಅವರನ್ನು ಭೇಟಿ ಆಗಿದ್ದರು. ಶ್ರದ್ಧಾ, ಹಾಸ್ಯ ವಿಡಿಯೋ ಮಾಡುವ ಜೊತೆಗೆ ಸ್ಟಾಂಡಪ್ ಕಾಮೆಡಿ ಮಾಡುತ್ತಾರೆ. ಇತ್ತೀಚೆಗೆ ಹಿಂದಿ ಸಿನಿಮಾ ಒಂದರಲ್ಲಿಯೂ ಸಹ ನಟಿಸಿದ್ದಾರೆ.
ಅಯ್ಯೋ ಶ್ರದ್ಧಾ ಮಾತ್ರವೇ ಅಲ್ಲದೆ, ಕಂಟೆಂಟ್ ಕ್ರಿಯೇಷನ್ ವಿಭಾಗದಲ್ಲಿ ಸುಮಾರು ಉತ್ತಮ ಕಂಟೆಂಟ್ ಕ್ರಿಯೇಟರ್ಸ್ ಅನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಗೇಮಿಂಗ್, ವ್ಲಾಗಿಂಗ್ ಇನ್ನೂ ಹಲವು ವಿಭಾಗಗಳ ಕ್ರಿಯೇಟರ್ಸ್ಗೆ ಪ್ರಶಸ್ತಿ ದೊರೆತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ