
ಇಂದು (ಅ.7) ‘ಗುಡ್ಬೈ’ ಸಿನಿಮಾ (Goodbye) ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಅಮಿತಾಭ್ ಬಚ್ಚನ್ (Amitabh Bachchan), ನೀನಾ ಗುಪ್ತಾ, ಪವೇಲ್ ಗುಲಾಟಿ ಮುಂತಾದವರು ನಟಿಸಿದ್ದಾರೆ. ಇದು ರಶ್ಮಿಕಾ ಮಂದಣ್ಣ ನಟನೆಯ ಮೊದಲ ಹಿಂದಿ ಸಿನಿಮಾ ಎಂಬುದು ವಿಶೇಷ. ಆ ಕಾರಣಕ್ಕಾಗಿ ಅವರ ಅಭಿಮಾನಿಗಳಿಗೆ ಈ ಚಿತ್ರದ ಮೇಲೆ ವಿಶೇಷ ನಿರೀಕ್ಷೆ ಇದೆ. ಕೆಲವು ದಿನಗಳ ಹಿಂದೆ ಬಿಡುಗಡೆ ಆದ ಟ್ರೇಲರ್ ನೋಡಿ ಸಿನಿಪ್ರಿಯರು ಮೆಚ್ಚಿಕೊಂಡಿದ್ದರು. ಹಾಗಾದರೆ ಜನರಿಗೆ ಇಡೀ ಸಿನಿಮಾ ಇಷ್ಟ ಆಯ್ತಾ? ‘ಗುಡ್ ಬೈ?’ ನೋಡಿ ಬಂದ ವೀಕ್ಷಕರು ಏನು ಹೇಳ್ತಾ ಇದ್ದಾರೆ? ಚಿತ್ರದಲ್ಲಿ ಏನುಂಟು, ಏನಿಲ್ಲ ಎಂಬ ಬಗ್ಗೆ ಟ್ವಿಟರ್ ವಿಮರ್ಶೆ ಮೂಲಕ ರಶ್ಮಿಕಾ (Rashmika Mandanna) ಅಭಿಮಾನಿಗಳು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.
ಮೊದಲ ದಿನ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಸಿನಿಮಾ ನೋಡಿ ಅಭಿಪ್ರಾಯ ತಿಳಿಸಿದರೆ ಚಿತ್ರಕ್ಕೆ ಅನುಕೂಲ ಆಗುತ್ತದೆ. ಆ ಉದ್ದೇಶದಿಂದ ಇಂದು (ಅ.7) ಟಿಕೆಟ್ ಬೆಲೆಯನ್ನು ತಗ್ಗಿಸಲಾಗಿದೆ. ಅನೇಕ ಕಡೆಗಳಲ್ಲಿ ಕೇವಲ 150 ರೂಪಾಯಿ ನಿಗದಿ ಆಗಿದೆ. ಹಾಗಿದ್ದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಬುಕಿಂಗ್ ಆಗಿಲ್ಲ. ಮೊದಲ ದಿನ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯಲು ಈ ಸಿನಿಮಾಗೆ ಸಾಧ್ಯವಾಗಿಲ್ಲ.
‘ಇದು ಪಕ್ಕಾ ಫ್ಯಾಮಿಲಿ ಸಿನಿಮಾ. ಕುಟುಂಬದವರ ಜೊತೆ ಕುಳಿತು ಚಿತ್ರ ನೋಡಿ. ಪ್ರತಿ ದೃಶ್ಯ ಕೂಡ ಭಾವುಕವಾಗಿ ಮೂಡಿಬಂದಿದೆ’ ಎಂದು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ. ತಂದೆ ಮತ್ತು ಮಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಹಾಗೂ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ‘ಬಿಗ್ ಬಿ ನಟನೆ ಸೂಪರ್ ಆಗಿದೆ. ಅವರು ಯಾಕೆ ಲೆಜೆಂಡ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ’ ಎಂದು ಅಭಿಮಾನಿಯೊಬ್ಬರು ಪೋಸ್ಟ್ ಮಾಡಿದ್ದಾರೆ.
ಅಮಿತಾಭ್ ಬಚ್ಚನ್ ಜೊತೆ ನಟಿಸುವ ಅವಕಾಶ ಸಿಗುವುದು ಎಂದರೆ ಸಣ್ಣ ಮಾತಲ್ಲ. ಅಂಥ ಅವಕಾಶವನ್ನು ಪಡೆದುಕೊಂಡಿದ್ದು ರಶ್ಮಿಕಾ ಪಾಲಿನ ಹೆಮ್ಮೆಯ ಸಂಗತಿ. ಆ ಕಾರಣದಿಂದ ಅವರಿಗೆ ಈ ಸಿನಿಮಾ ತುಂಬ ವಿಶೇಷವಾಗಿದೆ. ಅಂತಿಮವಾಗಿ ಬಾಕ್ಸ್ ಆಫೀಸ್ನಲ್ಲಿ ‘ಗುಡ್ಬೈ’ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬದನ್ನು ಕಾದು ನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:37 am, Fri, 7 October 22