Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF Chapter 2 First Half Review: ಹೇಗಿದೆ ‘ಕೆಜಿಎಫ್​ ಚಾಪ್ಟರ್​ 2’ ಮೊದಲಾರ್ಧ​? ಅಬ್ಬರಿಸಿದ ಯಶ್

ಕೆಜಿಎಫ್​ ಚಾಪ್ಟರ್ 2’ ಮೊದಲಾರ್ಧ ಹೇಗಿದೆ? ಮೊದಲಾರ್ಧದಲ್ಲಿ ಯಾವೆಲ್ಲ ವಿಚಾರ ಹೇಳಲಾಗಿದೆ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

KGF Chapter 2 First Half Review: ಹೇಗಿದೆ ‘ಕೆಜಿಎಫ್​ ಚಾಪ್ಟರ್​ 2’ ಮೊದಲಾರ್ಧ​? ಅಬ್ಬರಿಸಿದ ಯಶ್
ಕೆಜಿಎಫ್​ ಚಾಪ್ಟರ್​ 2
Follow us
TV9 Web
| Updated By: ಮದನ್​ ಕುಮಾರ್​

Updated on: Apr 14, 2022 | 6:44 AM

ದೇಶಾದ್ಯಂತ ದೊಡ್ಡ ಮಟ್ಟದ ಹೈಪ್ ಪಡೆದುಕೊಂಡು ‘ಕೆಜಿಎಫ್ ಚಾಪ್ಟರ್​ 2’ ಸಿನಿಮಾ (KGF Chapter 2) ರಿಲೀಸ್ ಆಗಿದೆ. ‘ಕೆಜಿಎಫ್​ ಚಾಪ್ಟರ್​ 1’ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಇದಾದ ಮೂರು ವರ್ಷಗಳ ಬಳಿಕ ‘ಕೆಜಿಎಫ್ ಚಾಪ್ಟರ್​ 2’ ತೆರೆಗೆ ಬಂದಿದೆ. ಪಾರ್ಟ್​ 1ಗಿಂತಲೂ ಪಾರ್ಟ್​ ಎರಡರಲ್ಲಿ ಕಲಾವಿದರ ಬಳಗ ಹಿರಿದಾಗಿದೆ. ಬಾಲಿವುಡ್​ನ ಸಂಜಯ್ ದತ್ ಹಾಗೂ ರವೀನಾ ಟಂಡನ್ ಚಿತ್ರತಂಡ ಸೇರಿಕೊಂಡಿದ್ದಾರೆ. ಟ್ರೇಲರ್ ಮೂಲಕ ಯಶ್ ಅವರು ಗಮನ ಸೆಳೆದಿದ್ದಾರೆ. ಹಿಂದಿ ಬೆಲ್ಟ್​ನಲ್ಲೂ ಸಿನಿಮಾ ಅಬ್ಬರಿಸಲು ರೆಡಿ ಆಗಿದೆ. ಹಾಗಾದರೆ, ‘ಕೆಜಿಎಫ್​ ಚಾಪ್ಟರ್ 2’ ಮೊದಲಾರ್ಧ (KGF Chpater 2 First Half Review) ಹೇಗಿದೆ? ಮೊದಲಾರ್ಧದಲ್ಲಿ ಯಾವೆಲ್ಲ ವಿಚಾರ ಹೇಳಲಾಗಿದೆ? ಯಶ್ ಹಾಗೂ ಸಂಜಯ್ ದತ್ ಮುಖಾಮುಖಿ ಆದರಾ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

  1. ಯಶ್​ ಸಿಕ್ಕಾಪಟ್ಟೆ ಮಾಸ್​ ಆಗಿ ಕಾಣಿಸಿಕೊಂಡಿದ್ದಾರೆ. ಫಸ್ಟ್​ ಹಾಫ್​ ಪೂರ್ತಿ ಅವರ ಪಾತ್ರವೇ ಆವರಿಸಿದೆ.
  2. ಸಂಜಯ್​ ದತ್​ ನಿಭಾಯಿಸಿರುವ ಅಧೀರ ಪಾತ್ರ ಮೊದಲಾರ್ಧದಲ್ಲೇ ಎಂಟ್ರಿ ಆಗಿದೆ. ರಾಕಿ ಭಾಯ್​ ಮತ್ತು ಅಧೀರ ಫಸ್ಟ್​ ಹಾಫ್​ನಲ್ಲಿಯೇ ಮುಖಾಮುಖಿ ಆಗುತ್ತಾರೆ.
  3. ತಾಯಿ ಸೆಂಟಿ​ಮೆಂಟ್​ ದೃಶ್ಯದ ಮೂಲಕವೇ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಕಥೆ ಆರಂಭ ಆಗುತ್ತದೆ. ಅನೇಕ ಕಡೆಗಳಲ್ಲಿ ತಾಯಿ ಸೆಂಟಿಮೆಂಟ್​ ಇದೆ.
  4. ಅಭಿಮಾನಿಗಳಲ್ಲಿ ಕಿಚ್ಚು ಹತ್ತಿಸಿರುವ ‘ಸುಲ್ತಾನ..’ ಹಾಡು ಮೊದಲಾರ್ಧದಲ್ಲಿ ಬರುತ್ತದೆ. ಅದು ಸಿನಿಮಾದ ಮೈಲೇಜ್​ ಹೆಚ್ಚಿಸಿದೆ.
  5. ಫಸ್ಟ್​ ಹಾಫ್​ನಲ್ಲಿ ಬರುವ ಒಂದು ಕಾರ್​ ಚೇಸಿಂಗ್​ ದೃಶ್ಯ ತುಂಬ ಥ್ರಿಲ್ಲಿಂಗ್​ ಆಗಿದೆ. ನಂತರ ಬರುವ ಒಂದು ಫೈಟಿಂಗ್​ ಸೀನ್​ ಕೂಡ ಮಾಸ್​ ಪ್ರೇಕ್ಷಕರನ್ನು ಸೆಳೆಯುವಂತಿದೆ.
  6. ಮೊದಲಾರ್ಧದಲ್ಲಿ ಮಾಸ್​ ಡೈಲಾಗ್​ಗಳು ಹೆಚ್ಚು ಹೈಲೈಟ್​ ಆಗಿವೆ. ಯಶ್​ ಅವರು ಪಂಚಿಂಗ್​ ಡೈಲಾಗ್​ಗಳ ಮೂಲಕ ಮನರಂಜನೆ ನೀಡಿದ್ದಾರೆ.
  7. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆಯೇ ‘ಕೆಜಿಎಫ್​: ಚಾಪ್ಟರ್​ 2’ ಮೊದಲಾರ್ಧ ಮೂಡಿಬಂದಿದೆ. ಮಾಸ್​ ಪ್ರೇಕ್ಷಕರಿಗೆ ಈ ಸಿನಿಮಾ ಹೇಳಿ ಮಾಡಿಸಿದಂತಿದೆ.
  8. ಈ ಚಿತ್ರದಲ್ಲಿ ಹೆಚ್ಚು ಕೌತುಕ ಮೂಡಿಸಿದ ಪಾತ್ರಗಳಲ್ಲಿ ಒಂದಾಗಿರುವ ರಮಿಕಾ ಸೇನ್​ ಪಾತ್ರ ಮೊದಲಾರ್ಧದಲ್ಲಿ ಕಾಣಿಸಿಕೊಂಡಿಲ್ಲ. ಸೆಕೆಂಡ್​ ಹಾಫ್​​ನಲ್ಲಿ ಅವರ ಆಗಮನ ಆಗಲಿದೆ. ಆ ಪಾತ್ರಕ್ಕೆ ರವೀನಾ ಟಂಡನ್​ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ:ಸಿನಿಮಾ ರಿಲೀಸ್​ಗೆ ಕೆಲವೇ ಗಂಟೆಗಳ ಮೊದಲು ಪ್ರಶಾಂತ್ ನೀಲ್ ವಿಶೇಷ ಮನವಿ; ನಡೆಸಿಕೊಡ್ತಾರಾ ಫ್ಯಾನ್ಸ್​?  ‘ಕೆಜಿಎಫ್​ 2’ ಎಡಿಟರ್​ ವಯಸ್ಸು ಕೇವಲ 20 ವರ್ಷ; ಫ್ಯಾನ್​ ಮೇಡ್ ವಿಡಿಯೋ ಮಾಡಿದ್ದಕ್ಕೆ ಸಿಕ್ತು ಚಾನ್ಸ್

ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ