ಶ್ರೀಮುರಳಿ ನಟನೆಯ ‘ಮದಗಜ’ ಚಿತ್ರದ ಮೊದಲಾರ್ಧ ಹೇಗಿದೆ? ಇಲ್ಲಿದೆ ರಿಪೋರ್ಟ್
ಗಾಂಧಿ ನಗರದಲ್ಲಿ ಶ್ರೀಮುರಳಿ ಅವರ ಕಟೌಟ್ ನಿಲ್ಲಿಸಿ, ಹೂವಿನ ಹಾರ ಹಾಕಲಾಯಿತು. ಕೆಲವು ಕಡೆ ಸೇಬು ಹಣ್ಣಿನ ಹಾರ ಕೂಡ ಹಾಕಲಾಗಿದೆ. ಅದ್ದೂರಿಯಾಗೇ ಎಂಟ್ರಿ ಪಡೆದುಕೊಂಡ ‘ಮದಗಜ’ ಸಿನಿಮಾದ ಮೊದಲಾರ್ಧ ಹೇಗಿದೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಶ್ರೀಮುರಳಿ ನಟಿಸಿರುವ ‘ಮದಗಜ’ ಸಿನಿಮಾ ಬೆಟ್ಟದಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಇಂದು (ಡಿಸೆಂಬರ್3) ಸಿನಿಮಾ ರಿಲೀಸ್ ಆಗಿದೆ. ‘ಅಯೋಗ್ಯ’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ನಿರ್ದೇಶಕ ಮಹೇಶ್ ಕುಮಾರ್ ನಿರ್ದೇಶನ ಸಿನಿಮಾಗಿದೆ. ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಶ್ರೀಮುರಳಿ ‘ಭರಾಟೆ’ ಬಳಿಕ ಒಪ್ಪಿಕೊಂಡ ಚಿತ್ರ ‘ಮದಗಜ’. ಈ ಕಾರಣಕ್ಕೆ ಚಿತ್ರ ಸೆಟ್ಟೇರಿದ ದಿನದಿಂದಲೂ ಭಾರಿ ಕ್ರೇಜ್ ಹುಟ್ಟುಹಾಕಿತ್ತು. ಈ ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಹಾಡುಗಳು ಹಾಗೂ ಟ್ರೇಲರ್ಗಳು ಭಾರೀ ಸೌಂಡ್ ಮಾಡುತ್ತಿವೆ.
ಗಾಂಧಿ ನಗರದಲ್ಲಿ ಶ್ರೀಮುರಳಿ ಅವರ ಕಟೌಟ್ ನಿಲ್ಲಿಸಿ, ಹೂವಿನ ಹಾರ ಹಾಕಲಾಯಿತು. ಕೆಲವು ಕಡೆ ಸೇಬು ಹಣ್ಣಿನ ಹಾರ ಕೂಡ ಹಾಕಲಾಗಿದೆ. ಅದ್ದೂರಿಯಾಗೇ ಎಂಟ್ರಿ ಪಡೆದುಕೊಂಡ ‘ಮದಗಜ’ ಸಿನಿಮಾದ ಮೊದಲಾರ್ಧ ಹೇಗಿದೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
- ಮೊದಲಾರ್ಧ ಪೂರ್ತಿ ಸಖತ್ ಮಾಸ್ ಆಗಿ ಮೂಡಿಬಂದಿದೆ. ಶ್ರೀಮುರಳಿ ಅವರು ಸಾಹಸ ದೃಶ್ಯಗಳ ಮೂಲಕ ರಂಜಿಸಿದ್ದಾರೆ. ಫಸ್ಟ್ ಹಾಫ್ನಲ್ಲಿ ಎರಡು ಫೈಟಿಂಗ್ ದೃಶ್ಯಗಳಿವೆ.
- ಫಸ್ಟ್ ಹಾಫ್ನಲ್ಲಿ ಬರುವ ಅನೇಕ ಸನ್ನಿವೇಶಗಳು ವಾರಾಣಸಿಯಲ್ಲಿ ನಡೆಯುತ್ತಿವೆ. ಇನ್ನುಳಿದ ದೃಶ್ಯಗಳು ಕರ್ನಾಟಕದ ಕನೆಕ್ಷನ್ ಹೊಂದಿವೆ. ವಾರಾಣಸಿಯಿಂದ ಕರ್ನಾಟಕದತ್ತ ಕಥೆ ಸಾಗುತ್ತದೆ.
- ನಾಯಕ-ನಾಯಕಿಗೆ ಮೊದಲಾರ್ಧದಲ್ಲಿ ಯಾವುದೇ ಹಾಡುಗಳಿಲ್ಲ. ಇಂಟರ್ವಲ್ ಬಳಿಕವೇ ಅವರಿಬ್ಬರ ಲವ್ ಸ್ಟೋರಿ ತೆರೆದುಕೊಳ್ಳಬೇಕಿದೆ.
- ಆ್ಯಕ್ಷನ್ ಜೊತೆಗೆ ತಾಯಿ ಸೆಂಟಿಮೆಂಟ್ ದೃಶ್ಯಗಳಿಗೆ ಫಸ್ಟ್ ಹಾಫ್ನಲ್ಲಿ ಹೆಚ್ಚು ಮಹತ್ವ ನೀಡಲಾಗಿದೆ. ಅದರಿಂದ ಚಿತ್ರಕ್ಕೆ ಬೇರೊಂದು ಮೆರುಗು ಸಿಕ್ಕಿದೆ.
- ಕಥೆಯ ಮುಖ್ಯ ವಿಲನ್ ಪಾತ್ರ ಮಧ್ಯಂತರದ ವೇಳೆಗೆ ಕಾಣಿಸಿಕೊಳ್ಳುತ್ತದೆ. ಇಂಟರ್ವಲ್ ಬಳಿಕ ಆ ಪಾತ್ರದ ಅಬ್ಬರನ್ನು ಪ್ರೇಕ್ಷಕರು ನಿರೀಕ್ಷಿಸಬಹುದು.
- ಶಿವರಾಜ್ ಕೆ.ಆರ್. ಪೇಟೆ ಮತ್ತು ಚಿಕ್ಕಣ್ಣ ಅವರ ಕಾಮಿಡಿಗೆ ಮೊದಲಾರ್ಧದಲ್ಲಿ ಅವಕಾಶ ಸಿಕ್ಕಿದೆ. ಈ ದೃಶ್ಯಗಳು ಪ್ರೇಕ್ಷಕರನ್ನು ನಗಿಸುತ್ತವೆ.
- ಜಗಪತಿ ಬಾಬು ಅವರು ಎಲ್ಲ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಾರೆ. ‘ಮದಗಜ’ ಚಿತ್ರದಲ್ಲಿ ಅವರು ವಿಲನ್ ಆಗಿದ್ದರೂ ಕೂಡ ಅವರ ಪಾತ್ರಕ್ಕೆ ಡಿಫರೆಂಟ್ ಶೇಡ್ ಇದೆ.
- ಹೀರೋ ಇಂಟ್ರಡಕ್ಷನ್ ಸಾಂಗ್ ಮತ್ತು ತಾಯಿ ಸಂಟೆಮೆಂಟ್ ಗೀತೆಗಳು ಮೊದಲಾರ್ಧದಲ್ಲಿ ನೋಡಲು ಸಿಗುತ್ತವೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಕೆಲಸ ಎಂದಿನಂತೆ ಹೈಲೈಟ್ ಆಗಿದೆ.
ಇದನ್ನೂ ಓದಿ: ವೇದಿಕೆಯಲ್ಲಿ ಅನುಶ್ರೀಗೆ ಶ್ರೀಮುರಳಿ ಪ್ರೀತಿಯ ಅಪ್ಪುಗೆ; ‘ಮದಗಜ’ ಹೀರೋ ಹೇಳಿದ್ದೇನು?