‘ಮರ್ಯಾದೆ ಪ್ರಶ್ನೆ’ ವಿಮರ್ಶೆ: ಶ್ರೀಮಂತರಿಗೆ ದುಡ್ಡಿನ ಆಟ; ಮಧ್ಯಮ ವರ್ಗದವರದ್ದು ಭಾವನೆಗಳ ತೊಳಲಾಟ

Maryade Prashne Review: ಹೊಸಬರ ಸಿನಿಮಾಗೆ ಯಾವುದೇ ಕೊರತೆ ಇಲ್ಲ. ಪ್ರತಿ ವಾರ ಹೊಸ ತಂಡಗಳ ಸಿನಿಮಾಗಳು ಬರುತ್ತಲೇ ಇರುತ್ತವೆ. ಅದರಲ್ಲಿ ‘ಮರ್ಯಾದೆ ಪ್ರಶ್ನೆ’ ಸಿನಿಮಾ ಕೂಡ ಒಂದು. ಈ ಚಿತ್ರ ಹೇಗಿದೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ಮರ್ಯಾದೆ ಪ್ರಶ್ನೆ’ ವಿಮರ್ಶೆ: ಶ್ರೀಮಂತರಿಗೆ ದುಡ್ಡಿನ ಆಟ; ಮಧ್ಯಮ ವರ್ಗದವರದ್ದು ಭಾವನೆಗಳ ತೊಳಲಾಟ
ಮರ್ಯಾದೆ ಪ್ರಶ್ನೆ
Follow us
ರಾಜೇಶ್ ದುಗ್ಗುಮನೆ
|

Updated on:Nov 22, 2024 | 11:17 AM

ಸಿನಿಮಾ: ಮರ್ಯಾದೆ ಪ್ರಶ್ನೆ. ನಿರ್ದೇಶನ: ನಾಗರಾಜ್ ಸೋಮಯಾಜಿ. ನಿರ್ಮಾಣ: ಶ್ವೇತಾ ಪ್ರಸಾದ್. ಕಥೆ: ಆರ್​ಜೆ ಪ್ರದೀಪ. ಸಂಗೀತ ಸಂಯೋಜನೆ: ಅರ್ಜುನ್ ರಾಮು. ತಾರಾಗಣ: ರಾಕೇಶ್ ಅಡಿಗ, ಸುನಿಲ್ ರಾವ್, ಶೈನ್ ಶೆಟ್ಟಿ, ತೇಜು ಬೆಳವಾಡಿ, ರೇಖಾ ಕುಡ್ಲಗಿ, ಪೂರ್ಣಚಂದ್ರ ಮೈಸೂರು ಮೊದಲಾದವರು. ರೇಟಿಂಗ್: 3.5/5.

ಸೂರಿ (ರಾಕೇಶ್), ಸತೀಶ್ (ಸುನೀಲ್), ಮಂಜು (ಪೂರ್ಣಚಂದ್ರ) ಪಕ್ಕಾ ಮಧ್ಯಮ ವರ್ಗದ ಹುಡುಗರು. ಇವರು ಸಣ್ಣ ವಯಸ್ಸಿನಿಂದಲೂ ಗೆಳೆಯರು. ಒಬ್ಬರ ಕಷ್ಟಕ್ಕೆ ಒಬ್ಬರು ಆಗುತ್ತಾರೆ. ಇವರೆಲ್ಲರಿಗೂ ದುಡ್ಡು ಮಾಡಬೇಕು ಎಂಬ ಕನಸು. ಹೇಗಾದರೂ ಹಣ ಮಾಡಲೇಬೇಕು ಎಂದರೂ ಯಾವುದೂ ಕೈಗೂಡುವುದಿಲ್ಲ. ಇದರ ಜೊತೆಗೆ ಮರ್ಯಾದೆ ಬಗ್ಗೆ ಏಳುವ ಪ್ರಶ್ನೆಯ ಬಗ್ಗೆ ಅಂಜಿಕೆ. ಇವರ ಜೀವನದಲ್ಲಿ ಒಂದು ದೊಡ್ಡ ತಿರುವು ಸಿಗುತ್ತದೆ. ಅಲ್ಲಿಂದ ಸಿನಿಮಾದ ಪ್ರತಿ ಪಾತ್ರಗಳೂ ತಿರುವು ಪಡೆದುಕೊಂಡು ಬಿಡುತ್ತದೆ. ನಂತರ ಏನಾಗುತ್ತದೆ? ಇವರು ಹಣ ಮಾಡುತ್ತಾರಾ? ಈ ಪ್ರಶ್ನೆಗಳಿಗೆ ಸಿನಿಮಾದಲ್ಲೇ ಉತ್ತರ ಕಂಡುಕೊಳ್ಳಬೇಕು.

ನಟನೆ..

‘ಮರ್ಯಾದೆ ಪ್ರಶ್ನೆ’ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಹೀರೋಗಳು ಇಲ್ಲ. ಆದರೆ, ನಟಿಸಿದ ಎಲ್ಲರೂ ದೊಡ್ಡ ಹೀರೋಗಳಿಗೇನು ಕಡಿಮೆ ಇಲ್ಲ ಎಂಬಂತೆ ನಟಿಸಿದ್ದಾರೆ. ಎಲ್ಲರೂ ನಟನೆಯಲ್ಲಿ ಫುಲ್ ಮಾರ್ಕ್ಸ್ ಪಡೆದಿದ್ದಾರೆ. ಪ್ರತಿ ಪಾತ್ರಗಳ ಆಯ್ಕೆಯೂ ಉತ್ತಮವಾಗಿ ಮಾಡಿದ್ದಾರೆ ನಿರ್ದೇಶಕರು. ರಾಕೇಶ್ ಅವರು ನಟನೆಯಲ್ಲಿ ಎಲ್ಲರಿಂದ ಚಪ್ಪಾಳೆ ಪಡೆಯುತ್ತಾರೆ. ಸುನಿಲ್, ಪೂರ್ಣಚಂದ್ರ ಅವರು ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ. ವಿಲನ್ ಪಾತ್ರದಲ್ಲಿ ನಟಿಸಿರೋ ಪ್ರಭು ಅವರು ಕೆಲವು ದೃಶ್ಯಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡು ಬಿಡುತ್ತಾರೆ. ತಮ್ಮ ಡೈಲಾಗ್ ಡೆಲಿವರಿ ಹಾಗೂ ಅದ್ಭುತ ನಟನೆಯ ಮೂಲಕ ಭೇಷ್ ಎನಿಸಿಕೊಳ್ಳುತ್ತಾರೆ.

ನಾಗೇಂದ್ರ ಶಾ, ರೇಖಾ ಕುಡ್ಲಿಗಿ ಅವರು ಸತೀಶ್​ನ ತಂದೆ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆರೆಯ ಮೇಲೆ ಇದ್ದಷ್ಟು ಹೊತ್ತು ಅವರು ಭಾವನಾತ್ಮಕವಾಗಿ ಆವರಿಸಿಕೊಳ್ಳುತ್ತಾರೆ. ನಾಗೇಂದ್ರ ಶಾ ಹೇಳುವ ಕೆಲವೇ ಡೈಲಾಗ್​ಗಳು ಕರುಳನ್ನು ಚುರುಕ್ ಎನಿಸುತ್ತದೆ. ಸತೀಶ್​ನ ಸಹೋದರಿಯ ಪಾತ್ರದಲ್ಲಿರೋ ತೇಜು ಬೆಳವಾಡಿ ಅವರು ಒಂದು ನವಿರಾದ ಪ್ರೇಮಕಥೆಯ ರುವಾರಿಯಾಗಿದ್ದಾರೆ. ಅವರು ತಂಗಿಯಾಗಿ, ಪ್ರೇಮಿಯಾಗಿ ಇಷ್ಟ ಆಗುತ್ತಾರೆ. ಶೈನ್ ಶೆಟ್ಟಿ ಅವರು ಶೆಟ್ಟಿ ಪಾತ್ರದ ಮೂಲಕ ಭೇಷ್ ಎನಿಸಿಕೊಳ್ಳುತ್ತಾರೆ.

ಇದನ್ನೂ ಓದಿ:ಈ ವಾರ ಮರ್ಯಾದೆ ಪ್ರಶ್ನೆ, ಟೆನಂಟ್, ಅಂಶು, ಜೀಬ್ರಾ ಮುಂತಾದ ಸಿನಿಮಾ; ಪ್ರೇಕ್ಷಕರ ಆಯ್ಕೆ ಯಾವುದು? 

ನಿರ್ದೇಶನ

ನಾಗರಾಜ್ ಸೋಮಯಾಜಿ ಅವರದ್ದು ಇದು ಮೊದಲ ನಿರ್ದೇಶನ. ಮೊದಲ ಚಿತ್ರದಲ್ಲೇ ಅವರು ಅದ್ಭುತ ಕೆಲಸ ಮಾಡಿ ತೋರಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಒಂದು ಒಳ್ಳೆಯ ನಿರ್ದೇಶಕ ಸಿಕ್ಕ ಎನ್ನಬಹುದು. ಮಧ್ಯಮ ವರ್ಗದವರ ತೊಳಲಾಟವನ್ನು, ಅಸಹಾಯಕತೆಯನ್ನು ಅತ್ಯುತ್ತಮವಾಗಿ ತೋರಿಸಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿ ಕಣ್ಣು ತುಂಬುವಂತೆ ಮಾಡುತ್ತಾರೆ ನಿರ್ದೇಶಕರು. ಎಲ್ಲಿಯೂ ಆಡಂಬರವಿಲ್ಲದೆ, ಮಧ್ಯಮವರ್ಗದ ಸಹಜ ಜೀವನವನ್ನು ಕಟ್ಟಿಕೊಟ್ಟಿದ್ದಾರೆ. ವೀಕ್ಷಕರು ಏನು ಊಹಿಸುತ್ತಾರೋ ಅದಕ್ಕೆ ವಿರುದ್ಧವಾಗಿಯೇ ಕಥೆ ನಡೆಯುತ್ತದೆ. ಒಂದು ನವಿರಾದ ಪ್ರೇಮ ಕಥೆಯನ್ನು ಅದ್ಭುತವಾಗಿ ಹೆಣೆದಿದ್ದಾರೆ. ಮಧ್ಯಂತರದಲ್ಲೇ ಕ್ಲೈಮ್ಯಾಕ್ಸ್ ರೇಂಜ್​ನ ಎಗ್ಸೈಟ್​ಮೆಂಟ್​ ನೀಡುತ್ತಾರೆ. ಅರ್ಜುನ್ ರಾಮು ಅವರು ಹಿನ್ನೆಲೆ ಸಂಗೀತ ಮತ್ತು ಹಾಡುಗಳ ಮೂಲಕ ಕಾಡುತ್ತಾರೆ. ಕ್ಲೈಮ್ಯಾಕ್ಸ್​​ನ ಫ್ಲ್ಯಾಟ್ ಮಾಡುವ ಬದಲು ಇನ್ನೂ ಎಗ್ಸೈಟ್ ಆಗಿ ಮಾಡಬಹುದಿತ್ತು ಎಂದು ಥಿಯೇಟರ್​ನಿಂದ ಹೊರ ಬರುವ ಪ್ರೇಕ್ಷಕರಿಗೆ ಅನಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:53 am, Fri, 22 November 24

ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ