100 Movie Review: ಮೆಸೇಜ್​ ಮಾಡಿ ಮೈ ಮರೆಯುವ ಎಲ್ಲರಿಗೂ ‘100’ ಚಿತ್ರವೇ ಒಂದು ಮೆಸೇಜ್​

100 Kannada Movie: ಮೇಲ್ನೋಟಕ್ಕೆ ಸೋಶಿಯಲ್​ ಮೀಡಿಯಾ ಜಗತ್ತು ಕಲರ್​ಫುಲ್​ ಆಗಿ ಕಾಣಿಸುತ್ತವೆ. ಆದರೆ ಅಂಥ ಆಕರ್ಷಕ ಜಾಲದ ಹಿಂದೆ ಭಯಾನಕ ಸತ್ಯಗಳು ಕೂಡ ಇವೆ ಎಂಬುದನ್ನು ಎಳೆಎಳೆಯಾಗಿ ವಿವರಿಸುವ ಪ್ರಯತ್ನ ಮಾಡಿದೆ ‘100’ ಸಿನಿಮಾ.

100 Movie Review: ಮೆಸೇಜ್​ ಮಾಡಿ ಮೈ ಮರೆಯುವ ಎಲ್ಲರಿಗೂ ‘100’ ಚಿತ್ರವೇ ಒಂದು ಮೆಸೇಜ್​
‘100’ ಸಿನಿಮಾ ವಿಮರ್ಶೆ
Follow us
ಮದನ್​ ಕುಮಾರ್​
|

Updated on: Nov 19, 2021 | 4:27 PM

ಚಿತ್ರ: 100 ನಿರ್ಮಾಣ: ರಮೇಶ್​ ರೆಡ್ಡಿ ನಿರ್ದೇಶನ: ರಮೇಶ್​ ಅರವಿಂದ್​ ಪಾತ್ರವರ್ಗ: ರಮೇಶ್​ ಅರವಿಂದ್​, ಪೂರ್ಣಾ, ರಚಿತಾ ರಾಮ್​, ವಿಶ್ವಕರ್ಣ ಮುಂತಾದವರು. ಸ್ಟಾರ್​: 3/5

ನಟನೆ ಮತ್ತು ನಿರ್ದೇಶನ ಎರಡರಲ್ಲೂ ಸೈ ಎನಿಸಿಕೊಂಡವರು ರಮೇಶ್​ ಅರವಿಂದ್​. ರಿಮೇಕ್​ ಅಥವಾ ಸ್ವಮೇಕ್​ ಯಾವುದೇ ಇರಲಿ, ರಮೇಶ್​ (Ramesh Aravind) ಆಯ್ಕೆ ಮಾಡಿಕೊಳ್ಳುವ ಸಿನಿಮಾ ಎಂದರೆ ಅಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ. ಅದರಲ್ಲೂ ಫ್ಯಾಮಿಲಿ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಅವರು ಸಿನಿಮಾ ಮಾಡುತ್ತಾರೆ. ಈ ಬಾರಿ ರಮೇಶ್​ ಅರವಿಂದ್​ ನಟನೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಒಟ್ಟಾಗಿ ನಿಭಾಯಿಸಿರುವ ‘100’ ಸಿನಿಮಾ (100 Kannada Movie) ಕೂಡ ಆ ಸಾಲಿಗೆ ಸೇರುತ್ತದೆ. ಕೌಟುಂಬಿಕ ಪ್ರೇಕ್ಷಕರಿಗಾಗಿಯೇ ಅವರು ಈ ಸಿನಿಮಾ ಮಾಡಿದ್ದಾರೆ. ಜೊತೆಗೆ ಯುವ ಜನತೆ ಮೇಲೆ ಪರಿಣಾಮ ಬೀರುವಂತಹ ಒಂದು ಒಳ್ಳೆಯ ಸಂದೇಶವನ್ನೂ ‘100’ ಸಿನಿಮಾ ಮೂಲಕ ನೀಡಲಾಗಿದೆ. ಈ ಚಿತ್ರದಲ್ಲಿ ರಚಿತಾ ರಾಮ್​ (Rachita Ram), ಪೂರ್ಣಾ, ವಿಶ್ವ ಕರ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೆಲ್ಲರ ಜುಗಲ್ ಬಂದಿ ಇರುವ ‘100’ ಚಿತ್ರ ಹೇಗಿದೆ ಎಂಬುದನ್ನು ತಿಳಿಯಲು ಈ ವಿಮರ್ಶೆ (100 Movie Review) ಪೂರ್ತಿ ಓದಿ..

ಚಿತ್ರದ ಥೀಮ್​ ಏನು?

ಇಂದು ಎಲ್ಲರ ಕುಟುಂಬದಲ್ಲೂ ಮೊಬೈಲ್​ ಫೋನ್​ಗೆ ವಿಶೇಷವಾದ ಸ್ಥಾನ ಸಿಕ್ಕಿದೆ. ಕುಟುಂಬದ ಸದಸ್ಯರು ಪರಸ್ಪರ ಕೊಟ್ಟುಕೊಳ್ಳುವ ಸಮಯಕ್ಕಿಂತಲೂ ಹೆಚ್ಚಿನ ಸಮಯವನ್ನು ತಮ್ಮ ಮೊಬೈಲ್​ ಬಳಕೆಗೆ ನೀಡುತ್ತಾರೆ. ಇದರಿಂದ ಆಗುವ ಅನಾಹುತಗಳು ಒಂದೆರಡಲ್ಲ. ಮೇಲ್ನೋಟಕ್ಕೆ ಸೋಶಿಯಲ್​ ಮೀಡಿಯಾಗಳು ಕಲರ್​ಫುಲ್​ ಆಗಿ ಕಾಣಿಸುತ್ತವೆ. ಆದರೆ ಅಂಥ ಆಕರ್ಷಕ ಜಾಲದ ಹಿಂದೆ ಭಯಾನಕ ಸತ್ಯಗಳು ಕೂಡ ಇವೆ ಎಂಬುದನ್ನು ಎಳೆಎಳೆಯಾಗಿ ವಿವರಿಸುವ ಪ್ರಯತ್ನ ಮಾಡಿದೆ ‘100’ ಸಿನಿಮಾ.

‘100’ ಕಥೆ ಹೇಗಿದೆ?

ಕಥಾನಾಯಕ ವಿಷ್ಣು (ರಮೇಶ್​ ಅರವಿಂದ್​) ಓರ್ವ ಸಮರ್ಥ ಪೊಲೀಸ್​ ಅಧಿಕಾರಿ. ಅವನ ಪುಟ್ಟ ಕುಟುಂಬದಲ್ಲಿ ಪತ್ನಿ ಅನಘಾ (ಪೂರ್ಣಾ), ತಂಗಿ ಹಿಮಾ (ರಚಿತಾ ರಾಮ್​) ಖುಷಿಖುಷಿಯಾಗಿ ಜೀವನ ಸಾಗಿಸುತ್ತ ಇರುತ್ತಾರೆ. ಆ ಮನೆಯೊಳಗೆ ಸೋಶಿಯಲ್​ ಮೀಡಿಯಾ ಎಂಬ ಸುರಂಗದ ಮೂಲಕ ವಿಲನ್​ ಹರ್ಷ (ವಿಶ್ವ ಕರ್ಣ) ಎಂಟ್ರಿ ನೀಡುತ್ತಾನೆ. ಇಡೀ ಕುಟುಂಬವನ್ನು ಹ್ಯಾಕಿಂಗ್​ ಮೂಲಕ ತನ್ನ ನಿಯಂತ್ರಣಕ್ಕೆ ಆತ ತೆಗೆದುಕೊಳ್ಳುತ್ತಾನೆ. ಮನೆಯ ಯಜಮಾನನೇ ಪೊಲೀಸ್​ ಅಧಿಕಾರಿ ಆಗಿದ್ದರೂ ಕೂಡ ಸೈಬರ್ ಕಿಡಿಗೇಡಿ ಆಗಿರುವ ಹರ್ಷನ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತಿಮವಾಗಿ ಆತನನ್ನು ಹೇಗೆ ಮಟ್ಟ ಹಾಕಲಾಗುತ್ತದೆ? ವಿಷ್ಣು ತನ್ನ ಕುಟುಂಬವನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ? ಈ ಪ್ರಶ್ನೆಗಳಿಗೆ ಕ್ಲೈಮ್ಯಾಕ್ಸ್​ನಲ್ಲಿದೆ ಉತ್ತರ.

ಯುವಜನತೆಗೆ ಮನಮುಟ್ಟುವ ಮೆಸೇಜ್​:

ಸೋಶಿಯಲ್​ ಮೀಡಿಯಾ ಬಳಸಿಕೊಂಡು ಯುವಜನರನ್ನು ಯಾಮಾರಿಸುವ ದೊಡ್ಡ ಜಾಲವೇ ಇಂಟರ್​ನೆಟ್​ ಲೋಕದಲ್ಲಿ ಸಕ್ರಿಯವಾಗಿದೆ. ಹೆಣ್ಣು ಮಕ್ಕಳನ್ನು ಟಾರ್ಗೆಟ್​ ಮಾಡಿ, ಅವರ ಖಾಸಗಿ ವಿಡಿಯೋಗಳನ್ನು ಸೆರೆ ಹಿಡಿದು, ನಂತರ ಬ್ಲಾಕ್​ ಮೇಲ್​ ಮಾಡುವ ಕಿಡಿಗೇಡಿಗಳ ಸಂಖ್ಯೆಯೂ ದೊಡ್ಡದಿದೆ. ಅಂತಹ ವಿದ್ಯಾಮಾನಗಳ ಕಡೆಗೆ ‘100’ ಸಿನಿಮಾ ಬೆಳಕು ಚೆಲ್ಲುತ್ತದೆ. ಅಪರಿಚಿತರನ್ನು ಸೋಶಿಯಲ್​ ಮೀಡಿಯಾದಲ್ಲಿ ಪರಿಚಯ ಮಾಡಿಕೊಂಡು ಸಲುಗೆ ಬೆಳೆಸುವುದಕ್ಕಿಂತಲೂ ಮುನ್ನ ಎಷ್ಟು ಹುಷಾರಾಗಿದ್ದರೂ ಸಾಲದು ಎಂಬ ಸಂದೇಶವನ್ನು ಈ ಸಿನಿಮಾ ನೀಡುತ್ತದೆ. ಆ ಮೂಲಕ ಪೋಷಕರನ್ನು ಎಚ್ಚರಿಸುವ ಪ್ರಯತ್ನ ಮಾಡಲಾಗಿದೆ.

ಮಿಂಚಿದ ವಿಲನ್​ ವಿಶ್ವ ಕರ್ಣ

ಎಂದಿನಂತೆ ರಮೇಶ್​ ಅರವಿಂದ್​ ಅವರು ನಟನೆಯಲ್ಲಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಾರೆ. ರಚಿತಾ ರಾಮ್​, ಪೂರ್ಣಾ ಕೂಡ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಈ ಸಿನಿಮಾದಲ್ಲಿ ನಿಜವಾದ ಸರ್ಪ್ರೈಸ್​ ಎಂದರೆ ಅದು ವಿಲನ್​ ಪಾತ್ರ ಮಾಡಿರುವ ವಿಶ್ವ ಕರ್ಣ. ಸೈಬರ್​ ಕ್ರೈಮ್​ ಲೋಕದ ಹ್ಯಾಂಡ್ಸಮ್​ ಖಳನಾಗಿ ಅವರು ಗಮನ ಸೆಳೆಯುತ್ತಾರೆ. ರಮೇಶ್​ ಅವರಿಂದ್​ ಅವರಿಗೆ ಖಡಕ್​ ಫೈಟ್​ ನೀಡುವ ಪಾತ್ರವನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ.

ಅಚ್ಚುಕಟ್ಟಾದ ರಿಮೇಕ್​

ಅಂದಹಾಗೆ, ಇದು ತಮಿಳಿನ ‘ತಿರುಟ್ಟು ಪಯಲೇ 2’ ಚಿತ್ರದ ಕನ್ನಡ ರಿಮೇಕ್​. ಮೂಲ ಚಿತ್ರದ ನಿರ್ದೇಶಕ ಸುಸಿ ಗಣೇಶನ್​ ಬರೆದ ಕಥೆಯನ್ನು ಇಟ್ಟುಕೊಂಡೇ ‘100’ ಸಿನಿಮಾ ಮಾಡಲಾಗಿದೆ. ಹೌದೋ ಅಲ್ಲವೋ ಎಂಬಂತೆ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಹಾಡುಗಳಿಗಿಂತಲೂ ಹಿನ್ನೆಲೆ ಸಂಗೀತದ ಮೂಲಕ ರವಿ ಬಸ್ರೂರು ಅವರ ಕಸುಬುದಾರಿಕೆ ಇಷ್ಟವಾಗುತ್ತದೆ. ಎಲ್ಲವನ್ನೂ ತುಂಬ ಅಚ್ಚುಕಟ್ಟಾಗಿ ಸೆರೆ ಹಿಡಿದಿದ್ದಾರೆ ಛಾಯಾಗ್ರಾಹಕ ಸತ್ಯ ಹೆಗಡೆ.

ಇದನ್ನೂ ಓದಿ:

GGVV Review: ಹೀಗೂ ಇರಬಹುದಾ ಕ್ರೈಮ್​ ಲೋಕ? ಇದು ರಾಜ್​ ಬಿ. ಶೆಟ್ಟಿ ಇನ್ನೊಂದು ಮುಖ

Salaga Movie Review: ‘ಸಲಗ’ ತುಂಬಾ ರಗಡ್​ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್​ಗೆ ಮಾಸ್​ ಪ್ರೇಕ್ಷಕರೇ ಟಾರ್ಗೆಟ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ