Ravi Bopanna Review: ರವಿ ಬೋಪಣ್ಣ ಭೇದಿಸುವ ಕೊಲೆ ರಹಸ್ಯದ ಕಥೆಗೆ ಶೃಂಗಾರವೇ ಅತಿ ಭಾರ

Ravi Bopanna Movie Review | Ravichandran: ರವಿಚಂದ್ರನ್​, ಕಾವ್ಯಾ ಶೆಟ್ಟಿ, ರಾಧಿಕಾ ಕುಮಾರಸ್ವಾಮಿ ನಟನೆಯ ‘ರವಿ ಬೋಪಣ್ಣ’ ಚಿತ್ರ ತೆರೆಕಂಡಿದೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್​ ಅತಿಥಿ ಪಾತ್ರ ನಿಭಾಯಿಸಿದ್ದಾರೆ.

Ravi Bopanna Review: ರವಿ ಬೋಪಣ್ಣ ಭೇದಿಸುವ ಕೊಲೆ ರಹಸ್ಯದ ಕಥೆಗೆ ಶೃಂಗಾರವೇ ಅತಿ ಭಾರ
ರಾಧಿಕಾ ಕುಮಾರಸ್ವಾಮಿ, ರವಿಚಂದ್ರನ್
Follow us
TV9 Web
| Updated By: ಮದನ್​ ಕುಮಾರ್​

Updated on: Aug 12, 2022 | 3:44 PM

ಚಿತ್ರ: ರವಿ ಬೋಪಣ್ಣ

ನಿರ್ಮಾಣ: ಶ್ರೀ ಈಶ್ಚರಿ ಪ್ರೊಡಕ್ಷನ್ಸ್​

ನಿರ್ದೇಶನ: ರವಿಚಂದ್ರನ್​

ಇದನ್ನೂ ಓದಿ
Image
Gaalipata 2 Review: ಇದು ಬಗೆಹರಿಯದ ಭಾವನೆಗಳ ‘ಹಾಡು’-ಪಾಡು ಆಗಿರಬಹುದು ಪ್ರಾಯಶಃ
Image
Laal Singh Chaddha Twitter review: ಲಾಲ್​ ಸಿಂಗ್ ಚಡ್ಡಾ ಟ್ವಿಟರ್​ ವಿಮರ್ಶೆ: ಅಮೀರ್ ಅಭಿನಯಕ್ಕೆ ಸಿನಿಪ್ರಿಯರು ಫಿದಾ
Image
Vikrant Rona Review: ಸಸ್ಪೆನ್ಸ್ ಕಥೆಯ ‘ರಂಗು’ ಹೆಚ್ಚಿಸಿದ ಸುದೀಪ್-ಅನೂಪ್​; ಇಷ್ಟವಾಗುತ್ತೆ ಕಿಚ್ಚನ ಗೆಟಪ್
Image
Shamshera Twitter Review: ‘ಶಂಷೇರಾ’ ಟ್ವಿಟರ್​ ವಿಮರ್ಶೆ; ರಣಬೀರ್​ ಕಪೂರ್​ ಚಿತ್ರ ನೋಡಿ ಭೇಷ್​ ಎಂದ ಪ್ರೇಕ್ಷಕರು

ಪಾತ್ರವರ್ಗ: ರವಿಚಂದ್ರನ್​, ಕಾವ್ಯಾ ಶೆಟ್ಟಿ, ರಾಧಿಕಾ ಕುಮಾರಸ್ವಾಮಿ, ಮೋಹನ್​, ಕಿಚ್ಚ ಸುದೀಪ್​ ಮುಂತಾದವರು.

ಸ್ಟಾರ್​: 2.5/5

ಬಣ್ಣದ ಲೋಕದಲ್ಲಿ ರವಿಚಂದ್ರನ್​ (Ravichandran) ಓರ್ವ ಕನಸುಗಾರ. ವಿಭಿನ್ನವಾದ ಪ್ರಯತ್ನಗಳನ್ನು ಮಾಡುವಲ್ಲಿ ಅವರಿಗೆ ಹೆಚ್ಚು ಉತ್ಸಾಹ. ಆ ಪ್ರಯತ್ನದಲ್ಲಿ ಅವರು ಸೋಲು-ಗೆಲುವಿನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಅದು ಸಾಬೀತಾಗಿದೆ. ಈಗ ಮತ್ತೆ ‘ರವಿ ಬೋಪಣ್ಣ’ (Ravi Bopanna) ಚಿತ್ರದಲ್ಲಿ ಅವರು ತಮ್ಮತನವನ್ನು ಇಟ್ಟುಕೊಂಡು ಭಿನ್ನವಾದ ರೀತಿಯಲ್ಲಿ ಕಥೆ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರೊಂದು ಅತಿಥಿ ಪಾತ್ರ ಮಾಡಿದ್ದಾರೆ. ಕಾವ್ಯಾ ಶೆಟ್ಟಿ, ರಾಧಿಕಾ ಕುಮಾರಸ್ವಾಮಿ ಅವರು ಗ್ಲಾಮರ್​ ಗಂಧದಲ್ಲಿ ಮಿಂದೆದ್ದಿದ್ದಾರೆ. ಕೌತುಕ ಮೂಡಿಸುವ ಒಂದು ಕೊಲೆ ಕೇಸ್​ ಈ ಚಿತ್ರದಲ್ಲಿದೆ. ಹಾಗಿದ್ದರೂ ಕೂಡ ಏನೋ ಒಂದು ಕೊರತೆ ಎದ್ದು ಕಾಣುತ್ತದೆ.

ರವಿ ಬೋಪಣ್ಣ (ರವಿಚಂದ್ರನ್​) ಓರ್ವ ನಿವೃತ್ತ ಪೊಲೀಸ್​ ಅಧಿಕಾರಿ. ಒಂದು ಕಾಲದಲ್ಲಿ ಯಾವುದೇ ಕೊಲೆ ಪ್ರಕರಣವನ್ನೂ ಕೆಲವೇ ನಿಮಿಷಗಳಲ್ಲಿ ಭೇದಿಸುವ ಚತುರು ಬುದ್ಧಿಯವನಾಗಿದ್ದ ಆತ ನಂತರ ಮದ್ಯದ ದಾಸನಾಗುತ್ತಾನೆ. ಮನೆಯಲ್ಲಿ ಒಂಟಿಯಾಗಿ ಕಾಲ ಕಳೆಯುತ್ತಾನೆ. ಇಂಥ ಸಂದರ್ಭದಲ್ಲಿಯೂ ಪೊಲೀಸ್​ ಇಲಾಖೆಗೆ ಆತನ ಸಹಾಯ ಬೇಕಾಗುತ್ತದೆ. ಬೇರೆಯವರ ಕೊಲೆ ಪ್ರಕರಣವನ್ನು ಭೇದಿಸುವ ರವಿ ಬೋಪಣ್ಣನಿಗೆ ಮುಂದೆ ತನ್ನದೇ ಪ್ರೇಯಸಿಯ ಹತ್ಯೆಯ ಕೇಸ್​ ತನಿಖೆ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಆ ಕೊಲೆಗೆ ಕಾರಣ ಯಾರು ಎಂಬುದು ಇಲ್ಲಿನ ಸಸ್ಪೆನ್ಸ್​.

ಮೇಲ್ನೋಟಕ್ಕೆ ಇದೊಂದು ಮೂಮೂಲಿ ಮರ್ಡರ್​ ಮಿಸ್ಟರಿ ಕಥೆ ಎನಿಸಿದರೂ ಕ್ಲೈಮ್ಯಾಕ್ಸ್​ನಲ್ಲಿ ಬೇರೆಯದೇ ಲೋಕ ತೆರೆದುಕೊಳ್ಳುತ್ತದೆ. ಅದರ ಮೂಲಕ ಪ್ರೇಕ್ಷಕರಿಗೆ ಒಂದು ಮುಖ್ಯವಾದ ಸಂದೇಶ ರವಾನಿಸಲಾಗಿದೆ. ಆದರೆ ಇಡೀ ಸಿನಿಮಾವನ್ನು ರವಿಚಂದ್ರನ್​ ಅವರು ಬೇರೆಯದೇ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ತೀರಾ ಗಂಭೀರವಾದ ವಿಚಾರವನ್ನು ಹೇಳುವ ಅವರು ಹಾಡು ಮತ್ತು ಗ್ಲಾಮರ್​ಗೆ ಹೆಚ್ಚು ಮಹತ್ವ ನೀಡಿದ್ದಾರೆ. ಇದರಿಂದ ಸಿನಿಮಾದ ಸ್ವರೂಪವೇ ಬದಲಾಗಿದೆ.

ಕಥಾನಾಯಕ ರವಿ ಬೋಪಣ್ಣನಿಗೆ ಇಬ್ಬರು ಪ್ರೇಯಸಿಯರು ಇದ್ದರು ಎಂಬುದು ಕಥೆಯಲ್ಲಿ ಬರುವ ಒಂದು ಫ್ಲ್ಯಾಶ್​ ಬ್ಯಾಕ್​. ಕೇವಲ ಅದನ್ನು ಹೇಳುವ ಸಲುವಾಗಿ ಎರಡ್ಮೂರು ಅತಿ ರೊಮ್ಯಾಂಟಿಕ್​ ಹಾಡಿನ ಮೊರೆ ಹೋಗಿದ್ದಾರೆ. ತುಂಬ ಶೃಂಗಾರಮಯವಾಗಿ ಈ ಗೀತೆಗಳು ಮೂಡಿಬಂದಿವೆ. ಆದರೆ ಅಸಲಿ ಕಥೆಯನ್ನೇ ಇದು ಸೈಡ್​ಲೈನ್​ ಮಾಡಿದಂತೆ ಭಾಸವಾಗುತ್ತದೆ.

ರಾಧಿಕಾ ಕುಮಾರಸ್ವಾಮಿ ಮತ್ತು ಕಾವ್ಯಾ ಶೆಟ್ಟಿ ಅವರು ನಟನೆಗಿಂತಲೂ ಹೆಚ್ಚಾಗಿ ಗ್ಲಾಮರ್​ ಕಾರಣಕ್ಕಾಗಿಯೇ ಕಣ್ಣು ಕುಕ್ಕುತ್ತಾರೆ. ಇನ್ನುಳಿದ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೋಹನ್​, ಧರ್ಮ, ರಮೇಶ್​ ಭಟ್​, ರಾಮ ಕೃಷ್ಣ, ಜೈ ಜಗದೀಶ್​ ಮುಂತಾದವರು ಸಹಜಾಭಿನಯ ನೀಡಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್​ ನಟಿಸಿದ್ದಾರೆ ಎಂಬ ಕಾರಣಕ್ಕೆ ಅವರ ಅಭಿಮಾನಿಗಳಿಗೆ ನಿರೀಕ್ಷೆ ಇರುವುದು ಸಹಜ. ಆದರೆ ಅದೊಂದು ಚಿಕ್ಕ ಅತಿಥಿ ಪಾತ್ರವಷ್ಟೇ. ಕ್ಲೈಮ್ಯಾಕ್ಸ್​ನಲ್ಲಿ ಬರುವ ಅವರು ಇಡೀ ಕಥೆಯ ಸಾರಾಂಶವನ್ನು ವಿವರಿಸುತ್ತಾರೆ. ಲಾಯರ್​ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾದ ಬಹುತೇಕ ದೃಶ್ಯಗಳನ್ನು ಒಳಾಂಗಣದಲ್ಲಿ ಚಿತ್ರೀಕರಿಸಲಾಗಿದೆ. ರವಿಚಂದ್ರನ್​ ಅವರು ತಮ್ಮದೇ ಮ್ಯಾನರಿಸಂನಲ್ಲಿ ಹತ್ತು ಹಲವು ಬಗೆಯ ಫಿಲಾಸಫಿ ಹೇಳಲು ಪ್ರಯತ್ನಿಸಿದ್ದಾರೆ. ಆದರೆ ಪದೇ ಪದೇ ಗಾಜು ಪುಡಿಪುಡಿ ಆಗುವುದು, ಪರದೆ ಮೇಲೆ ಇಂಗ್ಲಿಷ್​ ಪದಗಳು ರಾರಾಜಿಸುವುದು, ಮದ್ಯದ ಬಾಟಲಿ ಒಡೆಯುವುದು ಏಕತಾನತೆ ಮೂಡಿಸುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ