Radhika Kumaraswamy: ಡ್ಯಾನ್ಸ್​ ಮಾಡುತ್ತಾ ಜಾರಿ ಬಿದ್ದ ರಾಧಿಕಾ ಕುಮಾರಸ್ವಾಮಿ; ವಿಡಿಯೋ ವೈರಲ್​

Radhika Kumaraswamy Viral Video: ನಟಿ ರಾಧಿಕಾ ಕುಮಾರಸ್ವಾಮಿ ಅವರು ಅತ್ಯುತ್ತಮ ಡ್ಯಾನ್ಸರ್​ ಕೂಡ ಹೌದು. ಅವರ ಡ್ಯಾನ್ಸ್​ ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ.

Radhika Kumaraswamy: ಡ್ಯಾನ್ಸ್​ ಮಾಡುತ್ತಾ ಜಾರಿ ಬಿದ್ದ ರಾಧಿಕಾ ಕುಮಾರಸ್ವಾಮಿ; ವಿಡಿಯೋ ವೈರಲ್​
ರಾಧಿಕಾ ಕುಮಾರಸ್ವಾಮಿ
Follow us
TV9 Web
| Updated By: ಮದನ್​ ಕುಮಾರ್​

Updated on:Aug 01, 2022 | 2:16 PM

ಸ್ಯಾಂಡಲ್​ವುಡ್​ (Sandalwood) ನಟಿ ರಾಧಿಕಾ ಕುಮಾರಸ್ವಾಮಿ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು ಎರಡು ದಶಕಗಳೇ ಕಳೆದಿವೆ. ಅನೇಕ ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿದ ಅವರು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅಲ್ಲೊಂದು ಇಲ್ಲೊಂದು ಚಿತ್ರಗಳಿಗೆ ಮಾತ್ರ ಅವರು ಸಹಿ ಮಾಡುತ್ತಾರೆ. ನಟನೆಯಿಂದ ರಾಧಿಕಾ ಕುಮಾರಸ್ವಾಮಿ (Radhika Kumaraswamy) ದೂರ ಉಳಿದುಕೊಂಡಿದ್ದರೂ ಕೂಡ ಅವರ ಮೇಲೆ ಅಭಿಮಾನಿಗಳು ಹೊಂದಿರುವ ಕ್ರೇಜ್​ ಕಿಂಚಿತ್ತೂ ಕಡಿಮೆ ಆಗಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುವ ಕೆಲವು ವಿಡಿಯೋ ಮತ್ತು ಫೋಟೋಗಳೇ ಇದಕ್ಕೆ ಸಾಕ್ಷಿ. ರಾಧಿಕಾ ಕುಮಾರಸ್ವಾಮಿ ಅವರು ಡ್ಯಾನ್ಸ್​ ಮಾಡುತ್ತ ಜಾರಿ ಬಿದ್ದಿರುವ ಒಂದು ವಿಡಿಯೋ (Radhika Kumaraswamy Viral Video) ಈಗ ವೈರಲ್​ ಆಗಿದೆ. ಅವರ ಅಭಿಮಾನಿಗಳ ಸೋಶಿಯಲ್​ ಮೀಡಿಯಾ ಪೇಜ್​ಗಳಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಅವರು ಅತ್ಯುತ್ತಮ ಡ್ಯಾನ್ಸರ್​ ಕೂಡ ಹೌದು. ಅವರ ಡ್ಯಾನ್ಸ್​ ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ. ಸದ್ಯ ವೈರಲ್​ ಆಗಿರುವ ಈ ವಿಡಿಯೋದಲ್ಲಿ ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್​ ಕಲಿಯುತ್ತಿರುವ ದೃಶ್ಯ ಇದೆ. ಬಿಂದಾಸ್​ ಆಗಿ ಅವರು ಹೆಜ್ಜೆ ಹಾಕಿದ್ದಾರೆ. ಆದರೆ ಕೊನೆಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ.

ಇದನ್ನೂ ಓದಿ
Image
ನ್ಯೂ ಇಯರ್​​ ಪಾರ್ಟಿಗೆ ರಾಧಿಕಾ ಕುಮಾರಸ್ವಾಮಿ ರಂಗು; ಕಲರ್ಸ್​ ಕನ್ನಡದಲ್ಲಿ ಮಸ್ತ್​ ಡ್ಯಾನ್ಸ್​
Image
ಪುನೀತ್ ಅವರೊಂದಿಗೆ ನಟಿಸುವ ಮಹದಾಸೆ ಈಡೇರಲೇಯಿಲ್ಲ, ನನ್ನ ನಿರ್ಮಾಣದ ಸಿನಿಮಾನಲ್ಲಿ ನಟಿಸಲು ಒಪ್ಪಿದ್ದರು: ರಾಧಿಕಾ ಕುಮಾಸ್ವಾಮಿ
Image
Puneeth Rajkumar: ‘ನಾನೂ ಅವರ ಕುಟುಂಬದವಳಾಗಿದ್ದೆ’: ಅಪ್ಪು ಅಂತಿಮ ನಮನದ ಬಳಿಕ ರಾಧಿಕಾ ಕುಮಾರಸ್ವಾಮಿ ಮಾತು
Image
ರಾಧಿಕಾ ಕುಮಾರಸ್ವಾಮಿ ಮಗಳು ಶಮಿಕಾ ಈಗೇನು ಮಾಡುತ್ತಿದ್ದಾರೆ ಗೊತ್ತಾ?

ಅಭಿಮಾನಿಗಳ ಫ್ಯಾನ್​ ಪೇಜ್​ಗಳಲ್ಲಿ ವಿಡಿಯೋವನ್ನು ಮಾತ್ರ ಹಂಚಿಕೊಳ್ಳಲಾಗಿದೆಯೇ ಹೊರತು ಹೆಚ್ಚಿನ ಮಾಹಿತಿ ನೀಡಿಲ್ಲ. ಇದು ಯಾವ ಸಂದರ್ಭದ ವಿಡಿಯೋ ಎಂಬುದು ಕೂಡ ತಿಳಿದಿಲ್ಲ. ಸೆಲೆಬ್ರಿಟಿಗಳ ಹೆಸರಿನಲ್ಲಿ ಅನೇಕ ಸೋಶಿಯಲ್​ ಮೀಡಿಯಾ ಖಾತೆಗಳನ್ನು ಅಭಿಮಾನಿಗಳು ತೆರೆಯುತ್ತಾರೆ. ರಾಧಿಕಾ ಕುಮಾರಸ್ವಾಮಿ ಅವರ ಹೆಸರಿನಲ್ಲೂ ಅನೇಕ ಖಾತೆಗಳು ಸಕ್ರಿಯವಾಗಿವೆ.

ರಾಧಿಕಾ ಕುಮಾರಸ್ವಾಮಿ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2002ರಲ್ಲಿ. ಅವರ ಮೊದಲ ಸಿನಿಮಾ ‘ನಿನಗಾಗಿ’ ಸಖತ್​ ಗಮನ ಸೆಳೆದಿತ್ತು. ಹಾಡುಗಳು ಸೂಪರ್​ ಹಿಟ್​ ಆಗಿದ್ದವು. ‘ತವರಿಗೆ ಬಾ ತಂಗಿ’ ಸಿನಿಮಾದ ಯಶಸ್ಸಿನಿಂದ ಅವರು ಕರುನಾಡಿನಲ್ಲಿ ಮನೆಮಾತಾದರು. ಆ ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿ ಅವರು ಸೈ ಎನಿಸಿಕೊಂಡರು. ಆದರೆ ನಂತರದ ವರ್ಷಗಳಲ್ಲಿ ಅವರು ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ. ಅವರನ್ನು ಮತ್ತೆ ಬೆಳ್ಳಿ ಪರದೆ ಮೇಲೆ ನೋಡಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಒಳ್ಳೆಯ ಕಥೆ, ಪಾತ್ರದ ಮೂಲಕ ಅವರು ಕಮ್​ಬ್ಯಾಕ್​ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ.

Published On - 2:16 pm, Mon, 1 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ