Vedha First Half Review: ‘ವೇದ’ ಚಿತ್ರದಲ್ಲಿ ಅಬ್ಬರಿಸಿದ ಶಿವಣ್ಣ: ಹೇಗಿದೆ ಮೊದಲಾರ್ಧ?

| Updated By: Digi Tech Desk

Updated on: Dec 23, 2022 | 9:13 AM

Shiva Rajkumar, Vedha Movie Review: ಅದ್ದೂರಿಯಾಗಿ ‘ವೇದ’ ಚಿತ್ರ ರಿಲೀಸ್​ ಆಗಿದೆ. ಮುಂಜಾನೆಯೇ ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದ್ದಾರೆ.

Vedha First Half Review: ‘ವೇದ’ ಚಿತ್ರದಲ್ಲಿ ಅಬ್ಬರಿಸಿದ ಶಿವಣ್ಣ: ಹೇಗಿದೆ ಮೊದಲಾರ್ಧ?
ಶಿವರಾಜ್​ಕುಮಾರ್
Follow us on

ನಟ ಶಿವರಾಜ್​ಕುಮಾರ್​ ಅಭಿನಯದ ‘ವೇದ’ ಸಿನಿಮಾ (Movie Review) ಅದ್ದೂರಿಯಾಗಿ ಬಿಡುಗಡೆ ಆಗಿದೆ. ಅನೇಕ ಕಡೆಗಳಲ್ಲಿ ಮುಂಜಾನೆಯೇ ಫ್ಯಾನ್ಸ್​ ಶೋ ಆಯೋಜನೆಗೊಂಡಿದೆ. ಎ. ಹರ್ಷ ಮತ್ತು ಶಿವರಾಜ್​ಕುಮಾರ್​ (Shivarajkumar) ಕಾಂಬಿನೇಷನ್​ನಲ್ಲಿ ಬಂದ ಈ ಸಿನಿಮಾವನ್ನು ಗೀತಾ ಶಿವರಾಜ್​ಕುಮಾರ್​ ನಿರ್ಮಾಣ ಮಾಡಿದ್ದಾರೆ. ಇದು ‘ಹ್ಯಾಟ್ರಿಕ್​ ಹೀರೋ’ ನಟನೆಯ 125ನೇ ಸಿನಿಮಾ ಎಂಬುದು ಮತ್ತೊಂದು ವಿಶೇಷ. ಗಾನವಿ ಲಕ್ಷ್ಮಣ್​, ಅದಿತಿ ಸಾಗರ್​, ಉಮಾಶ್ರೀ, ಶ್ವೇತಾ ಚೆಂಗಪ್ಪ, ಲಾಸ್ಯಾ ನಾಗರಾಜ್​ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅನೇಕ ಕಾರಣಗಳಿಂದಾಗಿ ‘ವೇದ’ ಸಿನಿಮಾ ಹೈಪ್​ ಕ್ರಿಯೇಟ್​ ಮಾಡಿದೆ. ಹಾಗಾದ್ರೆ ಈ ಚಿತ್ರದ ಮೊದಲಾರ್ಧ (Vedha Movie First Half Review) ಹೇಗಿದೆ? ಇಲ್ಲಿದೆ ವಿಮರ್ಶೆ..

  • ಮೂರು ಕಾಲಘಟ್ಟದಲ್ಲಿ ‘ವೇದ’ ಸಿನಿಮಾದ ಕಥೆ ಸಾಗುತ್ತದೆ. 2021,1985 ಹಾಗೂ 1965ರ ಕಾಲಘಟ್ಟಗಳನ್ನು ಸಿನಿಮಾ ಹೊಂದಿದೆ.
  • ಶಿವರಾಜ್​ಕುಮಾರ್ ಅವರು ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಫೈಟಿಂಗ್ ಸೀನ್ ಮೂಲಕ ಅವರು ಎಂಟ್ರಿ ಕೊಡುತ್ತಾರೆ.
  • ಇದನ್ನೂ ಓದಿ
    Triple Riding Movie Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು
    Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ
    Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
    Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ
  • ಫ್ಯಾನ್ಸ್ ಇಷ್ಟಪಟ್ಟಿರುವ ‘ಗಿಲ್ಲಕ್ಕೋ ಶಿವ ಗಿಲ್ಲಕ್ಕೋ..’ ಹಾಗೂ ‘ಪುಷ್ಪ ಪುಷ್ಪ..’ ಸೇರಿ ಮೊದಲಾರ್ಧದಲ್ಲಿ ಮೂರು ಹಾಡುಗಳು ಇವೆ.
  • ಫೈಟ್​ಗಳ ಮೂಲಕ ಶಿವಣ್ಣ ಎಂಟರ್​ಟೇನ್​ ಮಾಡ್ತಾರೆ. ಅವರ ಜತೆಗೆ ಅದಿತಿ ಸಾಗರ್​ ಕೂಡ ಫೈಟ್​ನಲ್ಲಿ ಸಾಥ್ ನೀಡಿದ್ದಾರೆ.
  • ನಟಿ ಗಾನವಿ ಲಕ್ಷ್ಮಣ್​ ಅವರಿಗೆ ಎರಡು ಶೇಡ್​ನ ಪಾತ್ರ ಇದೆ. ಒಂದರಲ್ಲಿ ನಾಚಿಕೆ ಸ್ವಭಾವದವರಾಗಿ ಕಾಣಿಸಿಕೊಂಡರೆ, ಮತ್ತೊಂದರಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಇಡೀ ಚಿತ್ರದ ಸಸ್ಪೆನ್ಸ್​​ನ ಹೆಚ್ಚಿಸುತ್ತದೆ.
  • ವಿಲನ್​ಗಳನ್ನು ವೇದ ಸಾಯಿಸುತ್ತಾ ಇರುತ್ತಾನೆ. ಇದಕ್ಕೆ ಕಾರಣ ಏನು ಎಂಬುದು ಮೊದಲಾರ್ಧದಲ್ಲಿ ತಿಳಿಯುವುದಿಲ್ಲ. ದ್ವಿತೀಯಾರ್ಧಕ್ಕೆ ಈ ಸಸ್ಪೆನ್ಸ್ ಕ್ಯಾರಿ ಆಗಿದೆ.
  • 1965 ಹಾಗೂ 1985ರ ಕಾಲ ಘಟ್ಟದಲ್ಲಿ ಸಿನಿಮಾ ಸಾಗುತ್ತದೆ. ಇದಕ್ಕಾಗಿ ಹಾಕಿರುವ ಸೆಟ್ ಗಮನ ಸೆಳೆದಿದೆ.
  • ನಟಿ ಶ್ವೇತಾ ಚೆಂಗಪ್ಪ ಅವರು ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಒಂದು ಹಿನ್ನೆಲೆ ಇದೆ. ಅದು ಏನು ಎಂಬುದು ಮೊದಲಾರ್ಧದಲ್ಲಿ ರಿವೀಲ್ ಆಗಿಲ್ಲ. ಉಮಾಶ್ರೀ ಅವರ ಪಾತ್ರ ಮೊದಲಾರ್ಧದಲ್ಲಿ ಗಮನ ಸೆಳೆಯುತ್ತದೆ.
  • ನಿರ್ದೇಶಕ ಎ. ಹರ್ಷ ಅವರು ಸಿನಿಮಾದ ಮೊದಲಾರ್ಧವನ್ನು ತುಂಬಾನೇ ರಗಡ್ ಆಗಿ ಕಟ್ಟಿಕೊಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:19 am, Fri, 23 December 22