AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Unlock Raghava Review: ತಾನೇ ಲಾಕ್ ಆಗಿ ನಗಿಸುವ ‘ಅನ್​ಲಾಕ್ ರಾಘವ’

‘ಅನ್​ಲಾಕ್ ರಾಘವ’ ಸಿನಿಮಾದಲ್ಲಿ ಮಿಲಿಂದ್ ಮತ್ತು ರೇಚಲ್ ಡೇವಿಡ್ ಅವರು ಜೋಡಿಯಾಗಿ ನಟಿಸಿದ್ದಾರೆ. ಸರಳವಾದ ಒಂದು ಕಥೆಯನ್ನು ಕಾಮಿಡಿ ಟ್ವಿಸ್ಟ್​ಗಳ ಮೂಲಕ ಹೇಳಲಾಗಿದೆ. ಎಂದಿನಂತೆ ಸಾಧು ಕೋಕಿಲ ಅವರು ನಟಿಸುವ ಜವಾಬ್ದಾರಿ ನಿಭಾಯಿಸಿದ್ದಾರೆ. ಹೊಸ ಹೀರೋಗೆ ಅವರು ಸಾಥ್ ನೀಡಿದ್ದಾರೆ. ‘ಅನ್​ಲಾಕ್ ರಾಘವ’ ಸಿನಿಮಾ ವಿಮರ್ಶೆ ಇಲ್ಲಿದೆ..

Unlock Raghava Review: ತಾನೇ ಲಾಕ್ ಆಗಿ ನಗಿಸುವ ‘ಅನ್​ಲಾಕ್ ರಾಘವ’
Unlock Raghava Poster
ಮದನ್​ ಕುಮಾರ್​
|

Updated on: Feb 07, 2025 | 6:39 PM

Share

ಸಿನಿಮಾ: ಅನ್​ಲಾಕ್ ರಾಘವ. ನಿರ್ಮಾಣ: ಮಂಜುನಾಥ ಡಿ, ಗಿರೀಶ್ ಕುಮಾರ್ ಎನ್‌. ನಿರ್ದೇಶನ: ದೀಪಕ್‌ ಮಧುವನಹಳ್ಳಿ. ಪಾತ್ರವರ್ಗ: ಮಿಲಿಂದ್, ರೇಚಲ್ ಡೇವಿಡ್, ಶೋಭರಾಜ್, ಸಾಧು ಕೋಕಿಲ, ಧರ್ಮಣ್ಣ, ಅವಿನಾಶ್, ಭೂಮಿ ಶೆಟ್ಟಿ, ರಮೇಶ್ ಭಟ್ ಮುಂತಾದವರು.

ಹೊಸ ನಟ ಮಿಲಿಂದ್ ಅವರು ‘ಅನ್​ಲಾಕ್ ರಾಘವ’ ಸಿನಿಮಾದಲ್ಲಿ ಹೀರೋ ಆಗಿದ್ದಾರೆ. ಈ ಸಿನಿಮಾದಲ್ಲಿ ಅವರು ರೊಮ್ಯಾಂಟಿಕ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಆ್ಯಕ್ಷನ್ ಹೀರೋ ಆಗಿ ಕೂಡ ಮಿಂಚಿದ್ದಾರೆ. ಈ ಸಿನಿಮಾದ ಶೀರ್ಷಿಕೆಯಲ್ಲಿಯೇ ಕಥೆಯ ಬಗ್ಗೆ ಸುಳಿವು ಇದೆ. ಯಾವುದೇ ಬೀಗವನ್ನಾದರೂ ಸುಲಭವಾಗಿ ತೆಗೆಯುವ ಕಲೆ ಗೊತ್ತಿರುವ ಹುಡುಗನ ಕಥೆ ಇದು. ಆದರೆ ಆ ಹುಡುಗನೇ ಒಂದು ಪರಿಸ್ಥಿತಿಯಲ್ಲಿ ಲಾಕ್ ಆಗಿಬಿಟ್ಟರೆ ಏನಾಗುತ್ತದೆ ಎಂಬುದು ಈ ಸಿನಿಮಾದ ಮುಖ್ಯ ತಿರುಳು.

‘ಅನ್​ಲಾಕ್ ರಾಘವ’ ಸಿನಿಮಾಗೆ ದೀಪಕ್ ಮಧುವನಹಳ್ಳಿ ಅವರು ನಿರ್ದೇಶನ ಮಾಡಿದ್ದಾರೆ. ‘ರಾಮಾ ರಾಮಾ ರೇ’ ಖ್ಯಾತಿಯ ಸತ್ಯ ಪ್ರಕಾಶ್ ಅವರು ಕಥೆ ಬರೆದಿದ್ದಾರೆ. ‘ಲವ್ ಮಾಕ್ಟೇಲ್ 2’ ಖ್ಯಾತಿಯ ನಟಿ ರೇಚಲ್ ಡೇವಿಡ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಅನೂಪ್ ಸಿಳೀನ್ ಅವರ ಸಂಗೀತ, ಲವಿತ್ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಸಾಧುಕೋಕಿಲ, ಅವಿನಾಶ್, ಶೋಭರಾಜ್, ರಮೇಶ್ ಭಟ್ ಅವರಂತಹ ಅನುಭವಿ ಕಲಾವಿದರು ನಟಿಸಿದ್ದಾರೆ. ಒಟ್ಟಿನಲ್ಲಿ ಹೊಸಬರು ಮತ್ತು ಹಿರಿಯರ ಸಂಗಮ ಈ ಸಿನಿಮಾದಲ್ಲಿ ಆಗಿದೆ.

ಇಡೀ ಸಿನಿಮಾದ ಕತೆ ಸಿಂಪಲ್ ಆಗಿದೆ. ಹಾಗಿದ್ದರೂ ಕೂಡ ಕಾಮಿಡಿ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲಾಗಿದೆ. ಆ ವಿಚಾರದಲ್ಲಿ ನಟ ಸಾಧು ಕೋಕಿಲ ಅವರಿಗೆ ಹೆಚ್ಚು ಅಂಕ ಸಲ್ಲುತ್ತದೆ. ಸಿನಿಮಾದ ಆರಂಭದಿಂದ ಕ್ಲೈಮ್ಯಾಕ್ಸ್ ತನಕ ಸಾಧು ಕೋಕಿಲ ಅವರ ಪಾತ್ರ ಸಾಗುತ್ತದೆ. ತಲೆಗೆ ಪೆಟ್ಟು ಬಿದ್ದು ಅರ್ಥವಿಲ್ಲದ ಭಾಷೆ ಮಾಡಲು ಆರಂಭಿಸಿದಾಗಿ ಪ್ರೇಕ್ಷಕರಿಗೆ ಡಬಲ್ ಮನರಂಜನೆ ಸಿಗುತ್ತದೆ. ಸಾಧು ಕೋಕಿಲ ಅವರ ಕಾಮಿಡಿಯನ್ನು ಎಂಜಾಯ್ ಮಾಡುವ ಪ್ರೇಕ್ಷಕರಿಗೆ ‘ಅನ್​ಲಾಕ್ ರಾಘವ’ ಸಿನಿಮಾ ಸಖತ್ ನಗಿಸುತ್ತದೆ.

ರಾಘವನ (ಮಿಲಿಂದ್) ಬಾಲ್ಯದಿಂದ ಈ ಚಿತ್ರದ ಕತೆ ಆರಂಭ ಆಗುತ್ತದೆ. ಶಾಲೆಯಲ್ಲಿ ಓದುತ್ತಿರುವಾಗಲೇ ಜಾನಕಿ (ರೇಚಲ್) ಎಂಬ ಹುಡುಗಿಯ ಮೇಲೆ ಆತನಿಗೆ ಲವ್ ಆಗುತ್ತದೆ. ಆದರೆ ಹುಡುಗಿಯ ಅಪ್ಪ ಬೇರೆ ಊರಿಗೆ ಟ್ರಾನ್ಸ್​ಫರ್​ ಆಗಿದ್ದರಿಂದ ರಾಘವನಿಗೆ ಸಂಪರ್ಕ ತಪ್ಪಿ ಹೋಗುತ್ತದೆ. ಹಲವು ವರ್ಷಗಳು ಕಳೆದ ನಂತರ ಅದೇ ಹುಡುಗಿ ಬಂದು ಎದುರಲ್ಲಿ ನಿಂತರೂ ಅದು ಜಾನಕಿ ಎಂಬುದು ರಾಘವನಿಗೆ ತಿಳಿಯುವುದಿಲ್ಲ. ಇನ್ನೇನು ಸತ್ಯ ಗೊತ್ತಾಯಿತು ಎನ್ನುವಾಗ ಹೊಸ ಸಮಸ್ಯೆ ಶುರುವಾಗುತ್ತದೆ. ಆ ಸಮಸ್ಯೆ ಏನು? ಅದಕ್ಕೆ ರಾಘವ ಹೇಗೆ ಪರಿಹಾರ ಕಂಡುಕೊಳ್ಳುತ್ತಾನೆ ಎಂಬುದು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಮಿಲಿಂದ್ ಅವರು ಆ್ಯಕ್ಷನ್ ಮತ್ತು ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದಾರೆ. ಲವರ್ ಬಾಯ್ ರೀತಿಯ ಪಾತ್ರದ ಜೊತೆ ಮಾಸ್ ಆಗಿಯೂ ಕಾಣಿಸಿಕೊಳ್ಳುವ ಸಾಮರ್ಥ್ಯ ಇದೆ ಎಂಬುದನ್ನು ಅವರು ರಾಘವನ ಪಾತ್ರದ ಮೂಲಕ ತೋರಿಸಿದ್ದಾರೆ. ನಟ ಶೋಭರಾಜ್ ಅವರು ಮುಖ್ಯ ವಿಲನ್ ಆಗಿ ಎಂದಿನ ಖದರ್​ನಲ್ಲಿ ನಟಿಸಿದ್ದಾರೆ. ಧರ್ಮಣ್ಣ ಅವರ ಕಾಮಿಡಿ ಕಚಗುಳಿ ಕೂಡ ಈ ಸಿನಿಮಾದಲ್ಲಿದೆ.

ಇದನ್ನೂ ಓದಿ: Adhipatra Review: ಮರ್ಡರ್ ಮಿಸ್ಟರಿ ಜತೆ ತುಳುನಾಡಿನ ಕಥೆ ಹೇಳುವ ‘ಅಧಿಪತ್ರ’ ಸಿನಿಮಾ

ಹಲವೆಡೆ ಲಾಜಿಕ್ ಮಿಸ್ ಆಗಿರುವುದು ಎದ್ದು ಕಾಣುತ್ತದೆ. ಕಥೆಯನ್ನು ಇನ್ನಷ್ಟು ಗಟ್ಟಿಯಾಗಿಸಬಹುದಿತ್ತು. ಇಂಥ ಕೆಲವು ಲೋಪಗಳ ಬಗ್ಗೆ ನಿರ್ದೇಶಕರು ಗಮನ ಹರಿಸಬೇಕಿತ್ತು. ಉಳಿದಂತೆ, ಹೊಸ ನಟನ ಪರಿಚಯಕ್ಕೆ ಬೇಕಾದ ಎಲ್ಲ ಅಂಶಗಳು ‘ಅನ್​ಲಾಕ್ ರಾಘವ’ ಸಿನಿಮಾದಲ್ಲಿದೆ. ಮಿಲಿಂದ್ ಹಾಗೂ ರೇಚಲ್ ನಡುವಿನ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ. ಆದರೆ ಪ್ರೇಮಕಥೆಯಲ್ಲಿ ತೀವ್ರತೆ ಕಾಣಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ