ಮತ್ತೆ ಒಂದಾದ ‘ಸೀತಾ ರಾಮಂ’ ಕಾಂಬಿನೇಷನ್; ಬರಲಿದೆ ಮತ್ತೊಂದು ಅದ್ಭುತ ಲವ್ಸ್ಟೋರಿ?
ಹನು ರಾಘವಪುಡಿ ಅವರು ಪ್ರಭಾಸ್ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ಸೀತಾ ರಾಮಂ’ ಸಿನಿಮಾ ನಿರ್ದೇಶನ ಮಾಡಿದ ಖ್ಯಾತಿ ಅವರಿಗೆ ಇದೆ. ಪ್ರಭಾಸ್ ಜೊತೆ ನಟಿಸಲು ಮೃಣಾಲ್ನ ಆಯ್ಕೆ ಮಾಡಿಕೊಳ್ಳಲು ಹನು ರಾಘವಪುಡಿ ಆಸಕ್ತಿ ತೋರಿಸಿದ್ದಾರೆ. ವೈಜಯಂತಿ ಮೂವೀಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ನಟಿ ಮೃಣಾಲ್ ಠಾಕೂರ್ (Mrunal Thakur) ಅವರು ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಅವರ ನಟನೆಯ ‘ಸೀತಾ ರಾಮಂ’ ಸಿನಿಮಾ ಸೂಪರ್ ಹಿಟ್ ಆಯಿತು. ಇದಾದ ಬಳಿಕ ಮೃಣಾಲ್ ಅವರ ಅದೃಷ್ಟವೇ ಬದಲಾಗಿ ಹೋಗಿದೆ. ಅವರು ಸದ್ಯ ಬಾಲಿವುಡ್ ಹಾಗೂ ದಕ್ಷಿಣ ಭಾರತ ಎರಡರಲ್ಲೂ ಬ್ಯುಸಿ ಇದ್ದಾರೆ. ಅವರ ಅಭಿಮಾನಿ ಬಳಗ ಕೂಡ ಹಿರಿದಾಗಿದೆ. ಈಗ ಅವರಿಗೆ ದಕ್ಷಿಣದ ಸ್ಟಾರ್ ಹೀರೋ ಪ್ರಭಾಸ್ ಜೊತೆ ಕೆಲಸ ಮಾಡೋ ಅವಕಾಶ ಅವರಿಗೆ ಸಿಕ್ಕಿದೆ. ಈ ಚಿತ್ರಕ್ಕೆ ‘ಸೀತಾ ರಾಮಂ’ ಖ್ಯಾತಿಯ ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದಾರೆ.
ಮೃಣಾಲ್ ಠಾಕೂರ್ ಅವರು ಕಿರುತೆರೆಯಿಂದ ಬಣ್ಣದ ಬದುಕು ಆರಂಭಿಸಿದವರು. ‘ಮುಜೆ ಕುಚ್ ಕೆಹ್ತಿ.. ಯೇ ಕಾಮೋಶಿಯಾ’ ಧಾರಾವಾಹಿಯಲ್ಲಿ ಅವರು ನಟಿಸಿದರು. ಇದು ಪ್ರಸಾರ ಕಂಡಿದ್ದು 2012ರಲ್ಲಿ. ನಂತರ 2014ರಲ್ಲಿ ಅವರು ಮರಾಠಿ ಸಿನಿಮಾಗಳಲ್ಲಿ ನಟಿಸಿದರು. 2018ರಲ್ಲಿ ‘ಲವ್ ಸೋನಿಯಾ’ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಬಂದರು. ಹೆಣ್ಣುಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಬೇರೆ ದೇಶಕ್ಕೆ ಮಾರುವ ಕಥೆಯನ್ನು ಈ ಸಿನಿಮಾ ಹೊಂದಿತ್ತು. ನಂತರ ‘ಬಾಟ್ಲಾ ಹೌಸ್’, ‘ಸೂಪರ್ 30’ ರೀತಿಯ ಚಿತ್ರಗಳಲ್ಲಿ ಮೃಣಾಲ್ ನಟಿಸಿದರು. 2022ರಲ್ಲಿ ರಿಲೀಸ್ ಆದ ‘ಸೀತಾ ರಾಮಂ’ ಮೂಲಕ ಅವರ ಅದೃಷ್ಟ ಬದಲಾಯಿತು. ಈಗ ಅವರಿಗೆ ಮತ್ತೊಂದು ದಕ್ಷಿಣದ ಆಫರ್ ಸಿಕ್ಕಿದೆ.
ಹನು ರಾಘವಪುಡಿ ಅವರು ಪ್ರಭಾಸ್ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ಸೀತಾ ರಾಮಂ’ ಸಿನಿಮಾ ನಿರ್ದೇಶನ ಮಾಡಿದ ಖ್ಯಾತಿ ಅವರಿಗೆ ಇದೆ. ಪ್ರಭಾಸ್ ಜೊತೆ ನಟಿಸಲು ಮೃಣಾಲ್ ಅವರನ್ನು ಆಯ್ಕೆ ಮಾಡಿಕೊಳ್ಳಲು ಹನು ರಾಘವಪುಡಿ ಆಸಕ್ತಿ ತೋರಿಸಿದ್ದಾರೆ. ವೈಜಯಂತಿ ಮೂವೀಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
ಹನು ರಾಘವಪುಡಿ ಹಾಗೂ ಮೃಣಾಲ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಅವರ ಜೊತೆ ಮತ್ತೆ ಕೆಲಸ ಮಾಡೋಕೆ ಮೃಣಾಲ್ಗೂ ಸಾಕಷ್ಟು ಆಸಕ್ತಿ ಇದೆ. ಹೀಗಾಗಿ ಅವರು ಆಫರ್ ನೀಡಿದ ತಕ್ಷಣ ಮೃಣಾಲ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಪ್ರಭಾಸ್ ಹಾಗೂ ಮೃಣಾಲ್ ಕಾಂಬಿನೇಷನ್ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ಐಶ್ವರ್ಯಾ ರೈ, ಮೃಣಾಲ್ ಠಾಕೂರ್ ಸೇರಿ ಅನೇಕ ಸೆಲೆಬ್ರಿಟಿಗಳಿಗೆ ಆಗಿತ್ತು ಬಾಡಿ ಶೇಮಿಂಗ್
ಮೃಣಾಲ್ ಠಾಕೂರ್ಗೆ ಬ್ಯಾಕ್ ಟು ಬ್ಯಾಕ್ ತೆಲುಗು ಆಫರ್ ಬರುತ್ತಿದೆ. ಅವರು ಇತ್ತೀಚೆಗೆ ನಾನಿ ಜೊತೆ ‘ಹಾಯ್ ನಾನ’ ಸಿನಿಮಾ ಮಾಡಿದರು. ಇದು ಭಾರೀ ಮೆಚ್ಚುಗೆ ಪಡೆಯಿತು. ವರುಣ್ ತೇಜ್ ಮುಂದಿನ ಚಿತ್ರಕ್ಕೆ ಮೃಣಾಲ್ ನಾಯಕಿ. ಮೃಣಾಲ್ ಹಾಗೂ ವಿಜಯ್ ದೇವರಕೊಂಡ ನಟನೆಯ ‘ಫ್ಯಾಮಿಲಿ ಸ್ಟಾರ್’ ಕೂಡ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾ ಏಪ್ರಿಲ್ 5ರಂದು ರಿಲೀಸ್ ಆಗಲಿದೆ. ಮೃಣಾಲ್ ಅವರು ವಿಜಯ್ ಅವರ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:01 am, Thu, 14 March 24