ವಿರಾಟ್ ಬಗ್ಗೆ ಹೇಳಿದ್ದಕ್ಕೆ ಸುಖಾಸುಮ್ಮನೆ ಸಿಟ್ಟು ಮಾಡಿಕೊಂಡ ಮೃಣಾಲ್ ಠಾಕೂರ್
ಮೃಣಾಲ್ ಠಾಕೂರ್ ಅವರು ನ್ಯಾಶನಲ್ ಕ್ರಶ್ ಎನಸಿಕೊಳ್ಳುವಷ್ಟು ಫೇಮಸ್ ಆಗಿದ್ದಾರೆ. ‘ಸೀತಾ ರಾಮಂ’ ಚಿತ್ರದಲ್ಲಿ ಅವರ ನಟನೆ, ಸೌಂದರ್ಯ ಕಂಡು ಎಲ್ಲರೂ ಫಿದಾ ಆಗಿದ್ದಾರೆ. ಈಗ ಅವರು ನೀಡಿದ ಹಳೆಯ ಹೇಳಿಕೆಯನ್ನು ವೈರಲ್ ಮಾಡಲಾಗಿದೆ. ಇದಕ್ಕೆ ಅವರು ಸಿಟ್ಟಾಗಿದ್ದಾರೆ ಎನ್ನಲಾಗಿದೆ.
ಸಂದರ್ಶನಗಳಲ್ಲಿ ತಾವೇ ನೀಡಿದ ಕೆಲ ಹೇಳಿಕೆಯನ್ನು ಸೆಲೆಬ್ರಿಟಿಗಳು ಒಪ್ಪಲು ರೆಡಿ ಇರೋದಿಲ್ಲ. ಚರ್ಚೆಯ ಸಂದರ್ಭ ಜೋಶ್ನಲ್ಲಿ ಏನೇನೋ ಹೇಳಿಕೆ ನೀಡಿ ನಂತರ ಟೀಕೆಗೆ ಒಳಗಾಗುತ್ತಾರೆ. ಈಗ ಮೃಣಾಲ್ ಠಾಕೂರ್ ಅವರಿಗೆ ಹಾಗೆಯೇ ಆಗಿದೆ. ಅವರು ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮೇಲೆ ಪ್ರೀತಿ ಇದೆ ಎಂದು ಹೇಳಿಕೊಂಡಿದ್ದರು. ಇದನ್ನು ಮತ್ತೆ ಮತ್ತೆ ವೈರಲ್ ಮಾಡುತ್ತಿರುವವರ ವಿರುದ್ಧ ಅವರು ಸಿಟ್ಟಾಗಿದ್ದಾರೆ.
ಮೃಣಾಲ್ ಠಾಕೂರ್ ಅವರಿಗೆ ಈಗ ಬೇಡಿಕೆ ಹೆಚ್ಚಾಗಿದೆ. ಅವರು ಯಾರು ಎಂಬುದು ಈ ಮೊದಲು ಕೆಲವೇ ಕೆಲವು ಮಂದಿಗೆ ಗೊತ್ತಿತ್ತು. ಆದರೆ, ಈಗ ಹಾಗಲ್ಲ ಬಹುತೇಕರಿಗೆ ಅವರ ಪರಿಚಯ ಇದೆ. ಹೀಗಾಗಿ, ತಮ್ಮ ಹಳೆಯ ಹೇಳಿಕೆ ವೈರಲ್ ಮಾಡುವವರಿಗೆ ಅವರು ಎಚ್ಚರಿಕೆ ನೀಡುತ್ತಿದ್ದಾರೆ.
‘ಇನ್ಸ್ಟಂಟ್ ಬಾಲಿವುಡ್’ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಇದೆ. ಇದರಲ್ಲಿ ಬಾಲಿವುಡ್ಗೆ ಸಂಬಂಧಿಸಿದ ಪೋಸ್ಟ್ಗಳನ್ನು ಹಾಕಲಾಗುತ್ತದೆ. ಮೃಣಾಲ್ ಫೋಟೋ ಹಾಕಿ ‘ಒಂದು ಸಮಯದಲ್ಲಿ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ಪ್ರೀತಿ ಇತ್ತು-ಮೃಣಾಲ್’ ಎಂದು ಪೋಸ್ಟ್ ಮಾಡಲಾಗಿದೆ. ಇದು ಅವರು ಇತ್ತೀಚೆಗೆ ನೀಡಿದ ಹೇಳಿಕೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ಇದು ಮೃಣಾಲ್ ಕೋಪಕ್ಕೆ ಕಾರಣ ಆಗಿದೆ. ಹೀಗಾಗಿ, ‘ಇದನ್ನು ನಿಲ್ಲಿಸಿ’ ಎಂದು ಮೃಣಾಲ್ ಈ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ.
ಇದು ಹಿಂದಿಯ ‘ಜರ್ಸಿ’ ಸಿನಿಮಾ ಪ್ರಮೋಷನ್ ವೇಳೆ ನೀಡಿದ ಹೇಳಿಕೆ. ಇದನ್ನು ಈಗ ವೈರಲ್ ಮಾಡಲಾಗುತ್ತಿದೆ. ‘ಮೃಣಾಲ್ ಅವರಿಗೆ ನಾಚಿಕೆ ಆಗಿ ಈ ರೀತಿ ಹೇಳಿಕೆ ನೀಡಿರಬಹುದು’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಮೃಣಾಲ್ ಅವರು ಈ ಹೇಳಿಯಿಂದ ಈಗ ಮುಜುಗರಪಟ್ಟಿಕೊಳ್ಳುತ್ತಿದ್ದಾರೆ ಎಂದು ಕೆಲವರು ಭಾವಿಸಿದ್ದಾರೆ.
ಇದನ್ನೂ ಓದಿ: ಸಂಭಾವನೆ ಪಡೆಯದೇ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ ಮೃಣಾಲ್, ಕಾರಣ?
ಮೃಣಾಲ್ ನಟನೆಯ ‘ಫ್ಯಾಮಿಲಿ ಸ್ಟಾರ್’ ಇತ್ತೀಚೆಗೆ ರಿಲೀಸ್ ಆಯಿತು. ವಿಜಯ್ ದೇವರಕೊಂಡ ಈ ಚಿತ್ರದ ಹೀರೋ. ಈ ಸಿನಿಮಾ ಫ್ಲಾಪ್ ಆಯಿತು. ಇದರ ಜೊತೆಗೆ ಅವರು ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಈ ಸಿನಿಮಾ ಯಶಸ್ಸು ಕಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.