ಜೈಸ್ವಾಲ್ ಜೊತೆ ಡೇಟಿಂಗ್ ಎಂದವರಿಗೆ ಮೃಣಾಲ್ ಠಾಕೂರ್ ಖಡಕ್ ಉತ್ತರ

ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಜೊತೆಗಿನ ಡೇಟಿಂಗ್ ವದಂತಿಗಳಿಗೆ ನಟಿ ಮೃಣಾಲ್ ಠಾಕೂರ್ ಖಾರವಾಗಿ ಸ್ಪಂದಿಸಿದ್ದಾರೆ. ಸಾಕ್ಷಿಯಿಲ್ಲದೆ ಸುಳ್ಳು ಸುದ್ದಿ ಹರಡದಂತೆ ಜಾಲತಾಣದಲ್ಲಿ ಕಿಡಿಕಾರಿದ್ದಾರೆ. ವಿದ್ಯಾವಂತರಾಗಿ ಜವಾಬ್ದಾರಿಯಿಂದ ವರ್ತಿಸುವಂತೆ ಸಲಹೆ ನೀಡಿದ್ದಾರೆ. ದೇಶದ ಮುಖ್ಯ ವಿಷಯಗಳ ಬಗ್ಗೆ ಧ್ವನಿ ಎತ್ತುವಂತೆ ನಟಿ ಮನವಿ ಮಾಡಿದ್ದಾರೆ.

ಜೈಸ್ವಾಲ್ ಜೊತೆ ಡೇಟಿಂಗ್ ಎಂದವರಿಗೆ ಮೃಣಾಲ್ ಠಾಕೂರ್ ಖಡಕ್ ಉತ್ತರ
ಜೈಸ್ವಾಲ್-ಮೃಣಾಲ್
Edited By:

Updated on: Aug 10, 2026 | 7:59 AM

ಮುಖ್ಯಾಂಶಗಳು

  • ಒಂದೇ ಕೆಫೆ, ವಿಭಿನ್ನ ಕಥೆ: ವದಂತಿಗೆ ನಟಿಯ ಕಿಡಿ
  • ಸೋಷಿಯಲ್ ಮೀಡಿಯಾದಲ್ಲಿ ಮೃಣಾಲ್ ಖಡಕ್ ಉತ್ತರ
  • ಸುಳ್ಳು ಸುದ್ದಿಗೆ ಜಾಲತಾಣದಲ್ಲಿ ಬ್ರೇಕ್ ಹಾಕಿದ ನಟಿ

ನಟಿ ಮೃಣಾಲ್ ಠಾಕೂರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಡೇಟಿಂಗ್ ವಿಷಯದಲ್ಲಿ ಅವರ ಹೆಸರು ವಿವಿಧ ವ್ಯಕ್ತಿಗಳ ಜೊತೆ ತಳುಕು ಹಾಕಿಕೊಳ್ಳುತ್ತಿದೆ. ಈ ಬಾರಿ ಅವರ ಹೆಸರು ಭಾರತೀಯ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಜೊತೆ ಕೇಳಿಬರುತ್ತಿದೆ. ಒಂದೇ ಕೆಫೆಯಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದಕ್ಕೆ ಡೇಟಿಂಗ್ ವದಂತಿ ಹಬ್ಬಿತ್ತು. ಇದಕ್ಕೆ ಮೃಣಾಲ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಸತ್ಯಾಂಶವಿಲ್ಲದ ಸುದ್ದಿಗೆ ಗಾಸಿಪ್‌ ಪ್ರಿಯರು ಸೃಷ್ಟಿಸಿದ ಕಥೆಗೆ ಈಗ ತೆರೆಬಿದ್ದಿದೆ. ಸುಳ್ಳು ವದಂತಿ ಹಬ್ಬಿಸುವವರಿಗೆ ನಟಿ ಸರಿಯಾದ ಪಾಠ ಕಲಿಸಿದ್ದಾರೆ.

ಒಂದೇ ದಿನ ಒಂದೇ ಉಪಹಾರ ಗೃಹದಲ್ಲಿ ಇದ್ದಿದ್ದನ್ನೇ ನೆಪ ಮಾಡಿಕೊಂಡು ಜಾಲತಾಣಗಳಲ್ಲಿ ವೀಡಿಯೋ ಹಂಚಿಕೊಳ್ಳಲಾಗಿತ್ತು. ಇದನ್ನು ಕಂಡ ಮೃಣಾಲ್ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸ್ವಲ್ಪ ಶಾಂತರಾಗಿ. ನಾವು ಒಟ್ಟಿಗೆ ಎಲ್ಲಿದ್ದೇವೆ ಎಂದು ತೋರಿಸಿ? ವಿದ್ಯಾವಂತರಾಗಿದ್ದುಕೊಂಡು ಇಂತಹ ವದಂತಿಗಳನ್ನು ಹೇಗೆ ನಂಬುತ್ತೀರಿ?’ ಎಂದು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಚರ್ಚಿಸಬೇಕಾದ ವಿಷಯಗಳು ಸಾಕಷ್ಟು ಇವೆ. ಯುವ ಪೀಳಿಗೆಯಿಂದ ಒಳ್ಳೆಯ ವಿಷಯಗಳನ್ನು ಕಲಿಯಿರಿ. ಉಪಯುಕ್ತ ಸಂಗತಿಗಳ ಬಗ್ಗೆ ಧ್ವನಿ ಎತ್ತಿ ಎಂದು ಕಿವಿಮಾತು ಹೇಳಿದ್ದಾರೆ. ಈ ಕಾಮೆಂಟ್ ಅನ್ನು ನಂತರ ಅವರು ತೆಗೆದುಹಾಕಿದ್ದಾರೆ. ಆದರೆ ಅಷ್ಟರಲ್ಲಾಗಲೇ ಇದರ ಸ್ಕ್ರೀನ್‌ಶಾಟ್ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್‌ಸ್ಟಾಂಟ್ ಬಾಲಿವುಡ್ ಹಂಚಿಕೊಂಡಿದ್ದ ವೀಡಿಯೋ ಈ ಗೊಂದಲಕ್ಕೆ ಕಾರಣವಾಗಿತ್ತು. 24 ವರ್ಷದ ಕ್ರಿಕೆಟಿಗ ಮತ್ತು 34 ವರ್ಷದ ನಟಿಯ ನಡುವೆ ಪ್ರೇಮ ಬೆಳೆದಿದೆ ಎಂದು ಬಿಂಬಿಸಲಾಗಿತ್ತು. ಆದರೆ ಇಬ್ಬರೂ ಒಟ್ಟಿಗೆ ಬಂದಿದ್ದಕ್ಕೆ ಯಾವುದೇ ಸಾಕ್ಷಿ ಇರಲಿಲ್ಲ. ಈ ಹಿಂದೆಯೂ ನಟ ಧನುಷ್ ಜೊತೆ ಮೃಣಾಲ್ ಮದುವೆಯಾಗಲಿದ್ದಾರೆ ಎಂಬ ಗಾಳಿ ಸುದ್ದಿ ಹರಡಿತ್ತು.

ಇದನ್ನೂ ಓದಿ: ತನಗಿಂತ ಹತ್ತು ವರ್ಷ ಕಿರಿಯ ಕ್ರಿಕೆಟಿಗನ ಜೊತೆ ಮೃಣಾಲ್ ಡೇಟಿಂಗ್? ನಟಿ ಹೇಳಿದ್ದೇನು?

ಬರಹಗಾರ ಶರದ್ ಚಂದ್ರ ತ್ರಿಪಾಠಿ ಜೊತೆಗಿನ ಸಂಬಂಧದ ಬಗ್ಗೆ ಮೃಣಾಲ್ ಹಿಂದೆ ಬಹಿರಂಗವಾಗಿ ಮಾತನಾಡಿದ್ದರು. ಇಬ್ಬರೂ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆದರೆ ಕುಟುಂಬದ ವಿರೋಧದ ಕಾರಣ 2015 ರಲ್ಲಿ ಇಬ್ಬರೂ ಬೇರ್ಪಟ್ಟಿದ್ದರು. ಇದೀಗ ಯಶಸ್ವಿ ಜೈಸ್ವಾಲ್ ವಿಚಾರದಲ್ಲೂ ಸುಳ್ಳು ಸುದ್ದಿ ಹರಡಿದವರಿಗೆ ಮೃಣಾಲ್ ಕಟ್ಟುನಿಟ್ಟಾಗಿ ಉತ್ತರ ನೀಡಿದ್ದಾರೆ.ಈ ಮೊದಲು ತಮಿಳು ನಟ ಧನುಶ್ ಜೊತೆ ಅವರು ಹೆಸರು ತಳುಕು ಹಾಕಿಕೊಂಡಿತ್ತು. ಕೊನೆಗೂ ಅದು ಸುಳ್ಳಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:30 pm, Sun, 9 August 26

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us