AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಟಂ ಸಾಂಗ್ ಮಾಡಲು ಒಪ್ಪಿಕೊಂಡ ಮೃಣಾಲ್ ಠಾಕೂರ್; ಅಭಿಮಾನಿಗಳಿಗೆ ಹಬ್ಬ

‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ಅವರು ಐಟಂ ಸಾಂಗ್ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ರಾಮ್ ಚರಣ್, ಅಲ್ಲು ಅರ್ಜುನ್ ಮುಂತಾದ ಸ್ಟಾರ್ ನಟರ ಸಿನಿಮಾಗಳಲ್ಲಿ ಡ್ಯಾನ್ಸ್ ಮಾಡಲು ಮೃಣಾಲ್ ಒಪ್ಪಿದ್ದಾರೆ. ತಮ್ಮ ಗ್ಲಾಮರ್ ಮೂಲಕ ಮೃಣಾಲ್ ಅವರು ಈ ಹಾಡುಗಳಿಗೆ ಕಳೆ ತುಂಬುತ್ತಾರೆ ಎಂಬುದು ಅಭಿಮಾನಿಗಳ ನಂಬಿಕೆ.

ಐಟಂ ಸಾಂಗ್ ಮಾಡಲು ಒಪ್ಪಿಕೊಂಡ ಮೃಣಾಲ್ ಠಾಕೂರ್; ಅಭಿಮಾನಿಗಳಿಗೆ ಹಬ್ಬ
Mrunal Thakur
ಮದನ್​ ಕುಮಾರ್​
|

Updated on: Mar 22, 2026 | 11:03 AM

Share

ಚಿತ್ರರಂಗದಲ್ಲಿ ಕೆಲವು ನಟಿಯರಿಗೆ ಒಂದು ಕಾಲಘಟ್ಟದಲ್ಲಿ ಅದೃಷ್ಟ ಒಲಿದು ಬರುತ್ತದೆ. ಸದ್ಯ ನಟಿ ಮೃಣಾಲ್ ಠಾಕೂರ್ (Mrunal Thakur) ಅಂತಹದ್ದೇ ಒಂದು ಸುವರ್ಣ ಯುಗದಲ್ಲಿದ್ದಾರೆ. ಇದುವರೆಗೆ ಮಧ್ಯಮ ಬಜೆಟ್ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದ ಈ ಸುಂದರಿ, ಇದೀಗ ಟಾಲಿವುಡ್‌ನ ಅತಿ ದೊಡ್ಡ ಸ್ಟಾರ್‌ ನಟರ ಚಿತ್ರಗಳಿಗೆ ಆಯ್ಕೆ ಆಗುತ್ತಿದ್ದಾರೆ. ನಟ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲಿ ಕಾಂಬಿನೇಷನ್​ನ ಸಿನಿಮಾಗೆ ಈಗ ಮೃಣಾಲ್ ಠಾಕೂರ್ ಎಂಟ್ರಿ ನೀಡಿದ್ದಾರೆ. ‘ಪೆದ್ದಿ’ (Peddi) ಚಿತ್ರದಲ್ಲೂ ಅವರು ನಟಿಸಲಿದ್ದಾರೆ.

‘ಪುಷ್ಪ 2’ ಸಿನಿಮಾದಿಂದ ಸೂಪರ್ ಸಕ್ಸಸ್ ಕಂಡ ಅಲ್ಲು ಅರ್ಜುನ್ ಅವರು ಈಗ ಸ್ಟಾರ್ ಡೈರೆಕ್ಟರ್ ಅಟ್ಲಿ ಜೊತೆ ಹೊಸ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಬಹುನಿರೀಕ್ಷಿತ ಚಿತ್ರದಲ್ಲಿ ಮೃಣಾಲ್ ಒಂದು ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಬಾಕಿ ಇದ್ದರೂ, ಮೂಲಗಳ ಪ್ರಕಾರ ಮೃಣಾಲ್ ಈಗಾಗಲೇ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ.

ಇದು ಮೃಣಾಲ್ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲಾಗಲಿದೆ. ಇಷ್ಟೇ ಅಲ್ಲದೇ, ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದಲ್ಲಿ ಕೂಡ ಮೃಣಾಲ್ ಠಾಕೂರ್ ಅವರು ಅಭಿಮಾನಿಗಳಿಗೆ ಕಿಕ್ ನೀಡಲಿದ್ದಾರೆ. ಹೌದು, ರಾಮ್ ಚರಣ್ ಅಭಿನಯದ, ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಚಿತ್ರದ ಒಂದು ವಿಶೇಷ ಹಾಡಿಗೆ ಮೃಣಾಲ್ ಹೆಜ್ಜೆ ಹಾಕಲಿದ್ದಾರೆ.

‘ಪೆದ್ದಿ’ ಸಿನಿಮಾದಲ್ಲಿ ಗ್ರಾಮೀಣ ಭಾಗದ ಕ್ರೀಡೆ ಮತ್ತು ರಾಜಕೀಯದ ಕಥೆ ಇರಲಿದೆ. ಈ ಚಿತ್ರದಲ್ಲಿ ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಮೃಣಾಲ್ ಅವರು ಸ್ಪೆಷಲ್ ಸಾಂಗ್​ನಲ್ಲಿ ಹೆಜ್ಜೆ ಹಾಕಲು ಒಪ್ಪಿದ್ದಾರೆ. ಈ ಹಾಡಿನಲ್ಲಿ ಅವರು ರಾಮ್ ಚರಣ್ ಮತ್ತು ಜಾನ್ವಿ ಇಬ್ಬರ ಜೊತೆಗೂ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಧನುಷ್ ಬಗ್ಗೆ ಮೊದಲ ಬಾರಿ ಅಸಲಿ ವಿಷಯ ಬಾಯಿಬಿಟ್ಟ ಮೃಣಾಲ್ ಠಾಕೂರ್

ಸ್ಟಾರ್ ಹೀರೋಯಿನ್​ಗಳು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುವಾಗ ವಿಶೇಷ ಹಾಡುಗಳಲ್ಲಿ ಕಾಣಿಸಿಕೊಳ್ಳುವುದು ಮಾಮೂಲಿ. ‘ಪುಷ್ಪ’ ಸಿನಿಮಾದಲ್ಲಿ ಸಮಂತಾ, ‘ಕೂಲಿ’ ಸಿನಿಮಾದಲ್ಲಿ ಪೂಜಾ ಹೆಗ್ಡೆ ಐಟಂ ಸಾಂಗ್ ಮಾಡಿದ ರೀತಿಯಲ್ಲೇ ಈಗ ಮೃಣಾಲ್ ಕೂಡ ಅವರು ‘ಪೆದ್ದಿ’ ಮತ್ತು AA22xA6 ಸಿನಿಮಾಗಳಲ್ಲಿ ಐಟಂ ಸಾಂಗ್ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us