Sandeep Nahar ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟ ಸಂದೀಪ್ ನಾಹರ್ ತನ್ನ ಡೆತ್​ನೋಟ್​ನಲ್ಲಿ ಬರೆದಿಟ್ಟಿದ್ರು ನೋವಿನ ಕಥೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನ ಮರೆಯೋ ಮುನ್ನವೇ ಮತ್ತೊಬ್ಬ ಬಾಲಿವುಡ್ ನಟ ಸಾವಿಗೆ ಶರಣಾಗಿದ್ದಾರೆ. ಅದ್ರಲ್ಲೂ ಸುಶಾಂತ್ ಜೊತೆ ನಟಿಸಿದ್ದವರೇ ಆತ್ಮಹತ್ಯೆಗೆ ಶರಣಾಗಿರೋದು ಬಾಲಿವುಡ್​ಗೆ ಭಾರಿ ಆಘಾತ ಮೂಡಿಸಿದೆ.

Sandeep Nahar ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟ ಸಂದೀಪ್ ನಾಹರ್ ತನ್ನ ಡೆತ್​ನೋಟ್​ನಲ್ಲಿ ಬರೆದಿಟ್ಟಿದ್ರು ನೋವಿನ ಕಥೆ
ನಟ ಸಂದೀಪ್ ನಾಹರ್
Follow us
ಆಯೇಷಾ ಬಾನು
|

Updated on:Feb 16, 2021 | 7:33 AM

ಎಂ.ಎಸ್.ಧೋನಿ ಅನ್​ಟೋಲ್ಡ್ ಸ್ಟೋರಿಯ ಪ್ರಮುಖ ಪಾತ್ರಧಾರಿಯಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಕೆಲವೇ ತಿಂಗಳುಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ರು. ಇದ್ರಿಂದ ಬಾಲಿವುಡ್ ಒಂದು ಕ್ಷಣ ಆಘಾತಕ್ಕೆ ಒಳಗಾಗಿತ್ತು. ಆದ್ರೆ, ಈ ಪ್ರಕರಣ ಹಲವು ತಿರುವುಗಳನ್ನ ಪಡೆದುಕೊಂಡಿತ್ತು. ಈ ಪ್ರಕರಣ ಮರೆಯೋ ಮುನ್ನವೇ ಅದೇ ಚಿತ್ರದಲ್ಲಿ ಸುಶಾಂತ್ ಜೊತೆ ಸಹ ನಟನಾಗಿದ್ದ ಸಂದೀಪ್ ನಾಹರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಬಾಲಿವುಡ್ ಅಂಗಳದಲ್ಲಿ ಭಾರಿ ಆಘಾತಕ್ಕೆ ಕಾರಣವಾಗಿದೆ.

ಡೆತ್​ನೋಟ್​ನಲ್ಲಿ ಕೌಟುಂಬಿಕ ಕಲಹ ತೆರೆದಿಟ್ಟ ಸ್ಯಾಂಡಿ ಎಂ.ಎಸ್.ಧೋನಿ, ಕೇಸರಿಯಂತಾ ಚಿತ್ರಗಳು, ಆಲ್ಟ್ ಬಾಲಾಜಿಯ ಕೆಹೆನೋ ಕೋ ಹಮ್​ಸಫರ್ ಹೈ ವೆಬ್​ ಸಿರೀಸ್​ನಲ್ಲಿ ನಟಿಸಿ, ಬಾಲಿವುಡ್ ಪ್ರಿಯರ ಮನ ಗೆದ್ದಿದ್ದ ಸಂದೀಪ್ ನಾಹರ್ ನಿನ್ನೆ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ವಿಷಯ ಗೊತ್ತಾಗ್ತಿದ್ದಂತೆ ಅವರ ಪತ್ನಿ ಕಂಚನ್ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ, ಅಷ್ಟೊತ್ತಿಗಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ ಅಂತಾ ವೈದ್ಯರು ಹೇಳಿದ್ದಾರೆ. ತಕ್ಷಣ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋದ್ರೂ.. ಅಲ್ಲೂ ಇದೇ ಉತ್ತರ ಸಿಕ್ಕಿದೆ. ಬಳಿಕ ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ಅವರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳೋ ಮುನ್ನ ಸಂದೀಪ್ ಡೆತ್​ನೋಟ್ ಬರೆಯೋ ಜೊತೆಗೆ ಫೇಸ್​ಬುಕ್ ಲೈವ್ ಕೂಡ ಮಾಡಿದ್ದಾರೆ. ಇದರಲ್ಲಿ ತನ್ನ ಪತ್ನಿ ಮತ್ತು ಅತ್ತೆ ತನಗೆ ಯಾವ ರೀತಿ ಕಿರುಕುಳ ನೀಡ್ತಿದ್ರು.. ಏನೇನೋ ಬೆದರಿಕೆಗಳನ್ನ ಹಾಕ್ತಿದ್ರು. ಕಳೆದ 2 ವರ್ಷದಿಂದ ಎಲ್ಲವನ್ನ ಸಹಿಸಿಕೊಂಡು ಬಂದಿದ್ದೆ. ಇದಕ್ಕೂ ಮುನ್ನವೇ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದಿದ್ದೆ. ಆದ್ರೆ, ಪರಿಸ್ಥಿತಿ ಸುಧಾರಿಸಬಹುದು ಅಂತಾ ನಾನು ಬಹಳ ದಿನ ಕಾದೆ. ಯಾವುದೇ ಪ್ರಯೋಜನ ಆಗದೇ ಇರೋ ಕಾರಣ ನಾನು ಸಾವಿಗೆ ಶರಣಾಗ್ತಿದ್ದೇನೆ. ನಾನು ಸತ್ತ ಬಳಿಕ ನನ್ನ ಪತ್ನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಡಿ ಅಂತಾ ಡೆತ್​ನೋಟ್​ನಲ್ಲಿ ಮತ್ತು ಫೇಸ್​ಬುಕ್ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ.

ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ ಅಂತಾ ಜನರಿಗೆ ತಿಳಿ ಹೇಳಬೇಕಾದವರೇ ಈ ರೀತಿ ಒಬ್ಬರ ಹಿಂದೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ತಿರೋದು ವಿಪರ್ಯಾಸವೇ ಸರಿ. ಏನೇ ಆಗಲಿ ಮತ್ತಷ್ಟು ದಿನ ಜನ ರಂಜಿಸಬೇಕಿದ್ದ ಯುವ ಕಲಾವಿದ ಇಹಲೋಕ ತ್ಯಜಿಸಿರೋದು ದುರಂತವೇ ಸರಿ.

ಇದನ್ನೂ ಓದಿ: Sandeep Nahar ಸುಶಾಂತ್ ಸಿಂಗ್‌ ಜೊತೆ ‘M.S.ಧೋನಿ’ ಸಿನಿಮಾದಲ್ಲಿ ನಟಿಸಿದ್ದ ಸಂದೀಪ್‌ ನಹಾರ್‌ ಅನುಮಾನಾಸ್ಪದವಾಗಿ ಸಾವು

Published On - 6:59 am, Tue, 16 February 21

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ