Mukul Dev Death: ಉಪೇಂದ್ರ ಚಿತ್ರದಲ್ಲಿ ವಿಲನ್ ಆಗಿದ್ದ ಜನಪ್ರಿಯ ನಟ ಮುಕುಲ್ ದೇವ್ ನಿಧನ       

ಪ್ರಸಿದ್ಧ ಕನ್ನಡ ನಟ ಉಪೇಂದ್ರ ಅಭಿನಯದ 'ರಜಿನಿ' ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದ ಮುಕುಲ್ ದೇವ್ ಅವರು 54 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದೆಹಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಹಿಂದಿ, ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

Mukul Dev Death: ಉಪೇಂದ್ರ ಚಿತ್ರದಲ್ಲಿ ವಿಲನ್ ಆಗಿದ್ದ ಜನಪ್ರಿಯ ನಟ ಮುಕುಲ್ ದೇವ್ ನಿಧನ       
ಮುಕುಲ್ ದೇವ್

Updated on: May 24, 2025 | 12:56 PM

ಕನ್ನಡದ ನಟ ಉಪೇಂದ್ರ (Upendra) ಅಭಿನಯದ ‘ರಜಿನಿ’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದ ಮುಕುಲ್ ದೇವ್ ಅವರು ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 54 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ಸಮಯದಿಂದ ಅನಾಅರೋಗ್ಯದಿಂದ ಬಳಲುತ್ತಿದ್ದ ಅವರು, ದೆಹಲಿಯಲ್ಲಿ ನಿಧನ ಹೊಂದಿದ್ದಾರೆ. ಬದುಕಿ ಬಾಳಬೇಕಿದ್ದ ಅವರು ಎಲ್ಲರನ್ನು ಬಿಟ್ಟು ಹೋಗಿರೋದು ಕುಟುಂಬದವರಿಗೆ, ಅಭಿಮಾನಿಗಳಿಗೆ, ಸಹ ಕಲಾವಿದರಿಗೆ. ಅವರ ಸಾವಿಗೆ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಮುಕುಲ್ ದೇವ್ ಅನಾರೋಗ್ಯದಿಂದ ಬಳಲುತ್ತಿದ್ದರು. ದೆಹಲಿಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾದರು ಎಂದು ತಿಳಿದುಬಂದಿದೆ. 1970ರ ಸೆಪ್ಟೆಂಬರ್ 17ರಂದು ದೆಹಲಿಯಲ್ಲಿ ಅವರು ಜನಿಸಿದರು. ಮುಕುಲ್ ದೇವ್ 1996ದ ‘ದಸ್ತಕ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.

ಇದನ್ನೂ ಓದಿ
‘ಕಾಂತಾರ: ಚಾಪ್ಟರ್ 1’ ಅಡಚಣೆ; ಅಂದುಕೊಂಡ ದಿನಾಂಕದಲ್ಲೇ ಚಿತ್ರ ರಿಲೀಸ್
ಮಹೇಶ್ ಬಾಬು ಕುಟುಂಬದಲ್ಲಿ ಕೊವಿಡ್; ಅಭಿಮಾನಿಗಳಲ್ಲಿ ಹೆಚ್ಚಿತು ಆತಂಕ
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
25ನೇ ವಯಸ್ಸಿಗೆ ಕಾಲಿಟ್ಟ ಸುಹಾನ; ಶಾರುಖ್ ಮಗಳ ಬಳಿ ಇದೆ ದುಬಾರಿ ವಸ್ತುಗಳು

ಇದನ್ನೂ ಓದಿ: ಪಾಕಿಸ್ತಾನದಿಂದ ಬಂದು ಭಾರತದಲ್ಲಿ ಸೂಪರ್ ಸ್ಟಾರ್ ಆದ ಈ ಕಲಾವಿದ ಗೊತ್ತೇ?

ಮುಕುಲ್ ದೇವ್ ಅವರು 2009ರಲ್ಲಿ ರಿಲೀಸ್ ಆದ ‘ರಜನಿ’ ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ಈ ಚಿತ್ರದಲ್ಲಿ ಅವರು ವಿಲನ್ ಪಾತ್ರ ಮಾಡಿದ್ದರು. 2016ರಲ್ಲಿ ಕನ್ನಡದಲ್ಲಿ ರಿಲೀಸ್ ಆದ ‘ನಾಗರಹಾವು’ ಸಿನಿಮಾ ಮಾಡಿದರು. ಅವರು ಹಿಂದಿ, ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದರು. ಅವರು ಖಡಕ್ ವಿನ್ ಆಗಿ ಫೇಮಸ್ ಆಗಿದ್ದರು. 2022ರಲ್ಲಿ ರಿಲೀಸ್ ಆದ ‘ಅಂತ್ ದಿ ಎಂಡ್’ ಅವರು ನಟಿಸಿದ ಕೊನೆಯ ಸಿನಿಮಾ. ಇದಲ್ಲದೆ, ಧಾರಾವಾಹಿ ಹಾಗೂ ವೆಬ್ ಸೀರಿಸ್​ಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ.

‘ನನಗಾಗುತ್ತಿರುವ ಭಾವನೆಗಳನ್ನು ಪದಗಳಲ್ಲಿ ಹೇಳುವುದು ಅಸಾಧ್ಯ. ಮುಕುಲ್ ಒಬ್ಬ ಸಹೋದರ, ಕಲಾವಿದ, ಅವರ ಉತ್ಸಾಹ ಅಪ್ರತಿಮ. ಅವರು ತುಂಬಾ ಬೇಗ ನಮ್ಮನ್ನು ಬಿಟ್ಟು ಹೋದರು. ಅವರ ಕುಟುಂಬ ಮತ್ತು ಈ ನಷ್ಟದಿಂದ ದುಃಖಿಸುತ್ತಿರುವ ಎಲ್ಲರಿಗೂ ಶಕ್ತಿ ಸಿಗಲಿ. ನನ್ನ ಪ್ರೀತಿ ಪಾತ್ರನಾದ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾವು ಮತ್ತೆ ಭೇಟಿಯಾಗುವವರೆಗೆ, ಓಂ ಶಾಂತಿ’ ಎಂದು ಮನೋಜ್ ಬಾಜ್​ಪಾಯಿ ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.