ವಿಲನ್ ಪಾತ್ರದ ಮೂಲಕ ಜೂ.ಎನ್ಟಿಆರ್ ಎಂಟ್ರಿ; ಗಮನ ಸೆಳೆದ ‘ವಾರ್ 2’ ಟೀಸರ್
War 2 Movie Teaser: ‘ವಾರ್’ ಸಿನಿಮಾ 2019ರಲ್ಲಿ ರಿಲೀಸ್ ಆಗಿ ಗಮನ ಸೆಳೆಯಿತು. ಇದರ ಮುಂದುವರಿದ ಭಾಗವಾಗಿ ‘ವಾರ್ 2’ ಚಿತ್ರ ಮೂಡಿ ಬಂದಿದೆ. ಈ ಸಿನಿಮಾದ ಟೀಸರ್ ಜೂನಿಯರ್ ಎನ್ಟಿಆರ್ ಬರ್ತ್ಡೇ ಪ್ರಯುಕ್ತ ರಿಲೀಸ್ ಆಗಿದೆ. ಈ ಟೀಸರ್ ಪಾಸಿಟಿವ್ ರೆಸ್ಪಾನ್ಸ್ನ ಪಡೆದುಕೊಳ್ಳುತ್ತಾ ಇದೆ.

‘ವಾರ್ 2’ ಸಿನಿಮಾದಲ್ಲಿ (War 2 Movie) ಬಾಲಿವುಡ್ ಹೀರೋ ಹೃತಿಕ್ ರೋಷನ್ ಹಾಗೂ ಟಾಲಿವುಡ್ ಹೀರೋ ಜೂನಿಯರ್ ಎನ್ಟಿಆರ್ ಅವರ ಸಮಾಗಮ ಆಗಿದೆ. ಈ ಕಾರಣದಿಂದಲೇ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಸೃಷ್ಟಿ ಆಗಿದೆ. ಈಗ ಜೂನಿಯರ್ ಎನ್ಟಿಆರ್ ಬರ್ತ್ಡೇ (ಮೇ 20) ಪ್ರಯುಕ್ತ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಮೂಲಕ ಅಭಿಮಾನಿಗಳ ಬಹುದಿಗನಗಳ ಬೇಡಿಕೆ ಈಡೇರಿದಂತೆ ಆಗಿದೆ. ಈ ಟೀಸರ್ನಲ್ಲಿ ಹಲವು ವಿಚಾರಗಳನ್ನು ಹೇಳಲಾಗಿದೆ. ಜೂನಿಯರ್ ಎನ್ಟಿಆರ್ ಅವರು ವಿಲನ್ ಲುಕ್ನಲ್ಲಿ ಗಮನ ಸೆಳೆದಿದ್ದಾರೆ.
‘ವಾರ್ 2’ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಅವರು ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಉದ್ದಕ್ಕೂ ಭರ್ಜರಿ ಆ್ಯಕ್ಷನ್ ದೃಶ್ಯಗಳನ್ನು ತೋರಿಸಲಾಗಿದೆ. ಈ ಟೀಸರ್ ಬರ್ಜರಿ ಗಮನ ಸೆಳೆದಿದೆ. ಈ ವಿಡಿಯೋ ನೋಡಿದ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಜೂ.ಎನ್ಟಿಆರ್ ಅವರು ಇಷ್ಟು ದಿನಗಳ ಕಾಲ ಹೀರೋ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದರು. ಈಗ ಅವರು ಒಂದು ಭಿನ್ನ ಪಾತ್ರ ಆಯ್ದುಕೊಂಡಿದ್ದಾರೆ.
ಇದನ್ನೂ ಓದಿ: ಬದಲಾಯಿತು ಮಮಿತಾ ಬಿಜು ಅದೃಷ್ಟ; ಸ್ಟಾರ್ ಹೀರೋಗಳ ಚಿತ್ರಕ್ಕೆ ನಾಯಕಿ
‘ವಾರ್ 2’ ಸಿನಿಮಾಗೆ ಬರೋಬ್ಬರಿ 150 ದಿನಗಳ ಕಾಲ 6 ದೇಶಗಳಲ್ಲಿ ಶೂಟಿಂಗ್ ನಡೆಸಲಾಗಿದೆಯಂತೆ. ವಿವಿಧ ದೇಶಗಳಲ್ಲಿ ಸಿನಿಮಾದ ಕಥೆ ಸಾಗಲಿದೆ. ಈ ಟೀಸರ್ನಲ್ಲಿ ಆಗಸ್ಟ್ 14ರಂದು ಸಿನಿಮಾ ತೆರೆಗೆ ಬರಲಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿದೆ. ರಾ ಏಜೆಂಟ್ ಪಾತ್ರದಲ್ಲಿ ಹೃತಿಕ್ ಮಿಂಚಿದ್ದಾರೆ.
And so it begins, @tarak9999. Be prepared, there is no place for mercy. Welcome to Hell. Love, Kabir. #War2Teaser out NOW. #War2 only in theatres from 14th August. Releasing in Hindi, Telugu and Tamil. @advani_kiara #AyanMukerji @yrf #YRFSpyUniverse
Hindi -… pic.twitter.com/K2Tu7lNbik
— Hrithik Roshan (@iHrithik) May 20, 2025
2019ರಲ್ಲಿ ‘ವಾರ್’ ಸಿನಿಮಾ ರಿಲೀಸ್ ಆಯಿತು. ಇದರ ಮುಂದುವರಿದ ಭಾಗವಾಗಿ ‘ವಾರ್ 2’ ಚಿತ್ರ ರಿಲೀಸ್ ಆಗುತ್ತಿದೆ. ಯಶ್ ರಾಜ್ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಮೊದಲ ಭಾಗಕ್ಕೆ ಸಿದ್ದಾರ್ಥ್ ಆನಂದ್ ಅವರು ಆ್ಯಕ್ಷನ್ ಕಟ್ ಹೇಳಿದ್ದರು. ಈಗ ಎರಡನೇ ಭಾಗಕ್ಕೆ ಅಯಾನ್ ಮುಖರ್ಜಿ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.