ನಿನಗೆ ಹೆಮ್ಮೆ ಆಗುವಂತೆ ಮಾಡುತ್ತೇನೆ ವಿಜು: ದೇವರಕೊಂಡಗೆ ರಶ್ಮಿಕಾ ಭರವಸೆ
ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರಿಗೆ ಪ್ರೀತಿಯಿಂದ ವಿಜು ಅಂತ ಕರೆಯುತ್ತಾರೆ. ಇಬ್ಬರ ನಡುವೆ ಆತ್ಮೀಯತೆ ಹೆಚ್ಚಿದೆ. ರಶ್ಮಿಕಾ ಹೊಸ ಚಿತ್ರಕ್ಕೆ ವಿಜಯ್ ವಿಶ್ ಮಾಡಿದ್ದಾರೆ. ಅದರಿಂದ ಖುಷಿಯಾದ ರಶ್ಮಿಕಾ ಮಂದಣ್ಣ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಇದು ಫ್ಯಾನ್ಸ್ ಗಮನ ಸೆಳೆದಿದೆ.

ತೆಲುಗು ನಟ ವಿಜಯ್ ದೇವರಕೊಂಡ (Vijay Devarakonda) ಮತ್ತು ನಟಿ ರಶ್ಮಿಕಾ ಮಂದಣ್ಣ ನಡುವೆ ಎಷ್ಟು ಆತ್ಮೀಯತೆ ಇದೆ ಎಂಬುದನ್ನು ಹೊಸದಾಗಿ ಹೇಳುವ ಅಗತ್ಯ ಇಲ್ಲ. ಅಭಿಮಾನಿಗಳಿಗೆ ಎಲ್ಲವೂ ತಿಳಿದಿದೆ. ಹಲವು ವರ್ಷಗಳಿಂದ ಅವರು ಒಟ್ಟಿಗೆ ಸುತ್ತಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಮತ್ತು ವೈಯಕ್ತಿಕ ಬದುಕಿನಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದಾರೆ. ಆದರೆ ತಮ್ಮಿಬ್ಬರ ರಿಲೇಷನ್ಶೀಪ್ ಬಗ್ಗೆ ಅವರು ಬಹಿರಂಗವಾಗಿ ಹೇಳಿಕೆ ನೀಡಿಲ್ಲ ಅಷ್ಟೇ. ಆದರೂ ಅವರ ವರ್ತನೆಗಳನ್ನು ನೋಡಿದರೆ ಎಲ್ಲವೂ ಸ್ಪಷ್ಟವಾಗುತ್ತದೆ. ಈಗ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇನ್ನೊಂದು ಸುಳಿವು ನೀಡಿದ್ದಾರೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರ ಹೊಸ ಸಿನಿಮಾ ‘ಮೈಸಾ’ ಅನೌನ್ಸ್ ಆಯಿತು. ಈ ಸಿನಿಮಾದ ಫಸ್ಟ್ಲುಕ್ ಪೋಸ್ಟರ್ ಕೂಡ ಬಿಡುಗಡೆ ಆಗಿದೆ. ಇದರಲ್ಲಿ ರಶ್ಮಿಕಾ ಅವರು ತುಂಬ ಡಿಫರೆಂಟ್ ಆದಂತಹ ಪಾತ್ರ ಮಾಡುತ್ತಿದ್ದಾರೆ. ಇದು ಮಹಿಳಾಪ್ರಧಾನ ಸಿನಿಮಾ ಆಗಿರಲಿದ್ದು, ರಶ್ಮಿಕಾ ಅಭಿಮಾನಿಗಳಿಗೆ ಕಾತರ ಹೆಚ್ಚಾಗಿದೆ. ಅನೇಕ ಸೆಲೆಬ್ರಿಟಿಗಳು ರಶ್ಮಿಕಾಗೆ ವಿಶ್ ಮಾಡಿದ್ದಾರೆ. ವಿಜಯ್ ದೇವರಕೊಂಡ ಕೂಡ ಈ ಪೋಸ್ಟರ್ ನೋಡಿ ಪ್ರತಿಕ್ರಿಯಿಸಿದ್ದಾರೆ.
‘ಮೈಸಾ’ ಸಿನಿಮಾದ ಪೋಸ್ಟರ್ ಶೇರ್ ಮಾಡಿಕೊಂಡ ವಿಜಯ್ ದೇವರಕೊಂಡ ಅವರು ‘ಇದು ಸಖತ್ ಆಗಿರಲಿದೆ’ ಎಂದು ಬರೆದುಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ ಮಂದಣ್ಣ ಅವರು, ‘ವಿಜು, ಇದರಿಂದ ನಿನಗೆ ಹೆಮ್ಮೆ ಆಗುವಂತೆ ಮಾಡುತ್ತೇನೆ ಅಂತ ಭರವಸೆ ನೀಡುತ್ತೇನೆ’ ಎಂದರು. ಇದು ಅಭಿಮಾನಿಗಳ ಗಮನ ಸೆಳೆದಿದೆ.
ವಿಜಯ್ ದೇವರಕೊಂಡ ಅವನ್ನು ರಶ್ಮಿಕಾ ಮಂದಣ್ಣ ಅವರು ಪ್ರೀತಿಯಿಂದ ವಿಜು ಎಂದು ಕರೆಯುತ್ತಾರೆ. ಇಬ್ಬರ ನಡುವೆ ಎಷ್ಟು ಪ್ರೀತಿ ಇದೆ ಎಂಬುದಕ್ಕೆ ಇದು ಕೂಡ ಸಾಕ್ಷಿ ಒದಗಿಸುವಂತಿದೆ. ಅನೇಕ ಬಾರಿ ಅವರು ಒಟ್ಟಿಗೆ ಸುತ್ತಾಡಿದ್ದಾರೆ. ವಿಜಯ್ ದೇವರಕೊಂಡ ಮನೆಯಲ್ಲೇ ರಶ್ಮಿಕಾ ಮಂದಣ್ಣ ಹಬ್ಬ ಆಚರಿಸಿದ್ದರು. ಆದರೂ ಕೂಡ ಸಾರ್ವಜನಿಕವಾಗಿ ತಮ್ಮ ಪ್ರೀತಿಯನ್ನು ಅವರು ಹೇಳಿಕೊಂಡಿಲ್ಲ.
ಇದನ್ನೂ ಓದಿ: ಮುಖಕ್ಕೆ ರಕ್ತ, ಕಣ್ಣಲ್ಲಿ ಬೆಂಕಿ; ‘ಮೈಸಾ’ ಚಿತ್ರದಲ್ಲಿ ರಶ್ಮಿಕಾ ಬೆಚ್ಚಿಬೀಳಿಸೋ ಅವತಾರ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಮೊದಲು ಒಟ್ಟಿಗೆ ನಟಿಸಿದ್ದು ‘ಗೀತ ಗೋವಿಂದಂ’ ಸಿನಿಮಾದಲ್ಲಿ. ಆ ಬಳಿಕ ಅವರಿಬ್ಬರ ನಡುವೆ ಆತ್ಮೀಯತೆ ಬೆಳೆಯಿತು. ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲೂ ಅವರು ಜೋಡಿಯಾಗಿ ಕಾಣಿಸಿಕೊಂಡರು. ನಂತರದ ದಿನಗಳಲ್ಲಿ ಅವರಿಬ್ಬರ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.