
ಸಂಕ್ರಾಂತಿ ಹಬ್ಬ (Sankranti) ಬಂತೆಂದರೆ ಸಿನಿಪ್ರಿಯರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗುತ್ತದೆ. ಈ ಸಂದರ್ಭದಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತವೆ. ದೊಡ್ಡ ಬಜೆಟ್ ಚಿತ್ರಗಳು, ಸಣ್ಣ ಬಜೆಟ್ ಚಿತ್ರಗಳು ಈ ಸಂದರ್ಭದಲ್ಲಿ ಬಿಡುಗಡೆ ಕಾಣುತ್ತವೆ. ಅದರಲ್ಲೂ ಟಾಲಿವುಡ್ನಲ್ಲಿ (Tollywood) ಈ ಸಂದರ್ಭದಲ್ಲಿ ಭರ್ಜರಿ ಸ್ಪರ್ಧೆ ಏರ್ಪಡುತ್ತದೆ. ಸಂಕ್ರಾಂತಿಗೆ (Sankranti 2024) ಇನ್ನು ಮೂರು ತಿಂಗಳು ಬಾಕಿ ಇರುವಾಗಲೇ ಹೊಸ ಹೊಸ ಸಿನಿಮಾಗಳು ಜನವರಿ 12 ಹಾಗೂ 13ನ್ನು ಲಾಕ್ ಮಾಡುತ್ತಿವೆ. ಈ ರೇಸ್ಗೆ ಇನ್ನೂ ಕೆಲವು ಸಿನಿಮಾಗಳು ಸೇರ್ಪಡೆ ಆಗಿವೆ ಆ ಬಗ್ಗೆ ಇಲ್ಲಿದೆ ವಿವರ.
ಸೈಂಧವ್: ದಗ್ಗುಬಾಟಿ ವೆಂಕಟೇಶ್ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಇದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ನಟನೆಯ ‘ಸೈಂಧವ್’ ಸಿನಿಮಾ ತಂಡ ರಿಲೀಸ್ ದಿನಾಂಕ ಘೋಷಣೆ ಮಾಡಿದೆ. 2024ರ ಜನವರಿ 13ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಶೈಲೇಶ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನವಾಜುದ್ದೀನ್ ಸಿದ್ಧಿಕಿ, ರೂಹನಿ ಶರ್ಮಾ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ಸೋನಂ ಕಪೂರ್ ಬಗ್ಗೆ ರಾಣಾ ದಗ್ಗುಬಾಟಿ ಹೇಳಿಕೆ: ಪ್ರತಿಕ್ರಿಯೆ ನೀಡಿದ ದುಲ್ಕರ್ ಸಲ್ಮಾನ್
ಗುಂಟೂರು ಖಾರಂ: ಮಹೇಶ್ ಬಾಬು ನಟನೆಯ, ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನದ ‘ಗುಂಟೂರು ಖಾರಂ’ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರ ಜನವರಿ 12ರಂದು ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಶ್ರೀಲೀಲಾ ಹಾಗೂ ಮೀನಾಕ್ಷಿ ಚೌಧರಿ ನಾಯಕಿಯರು. ಈ ಸಿನಿಮಾದ ಟೀಸರ್ ಹಾಗೂ ಪೋಸ್ಟರ್ ಗಮನ ಸೆಳೆದಿದೆ. ಈ ಚಿತ್ರವನ್ನು ಕಠಿಣ ಪ್ರತಿಸ್ಪರ್ಧಿ ಎಂದು ಎಲ್ಲರೂ ಪರಿಗಣಿಸಿದ್ದಾರೆ.
ಜನವರಿಯಲ್ಲೂ ‘ಗುಂಟೂರು ಖಾರಂ’ ರಿಲೀಸ್ ಆಗೋದು ಅನುಮಾನ ಎಂದವರಿಗೆ ಮಹೇಶ್ ಬಾಬು ಉತ್ತರ
ನಾ ಸಾಮಿ ರಂಗ: ಇತ್ತೀಚೆಗೆ ಅಕ್ಕಿನೇನಿ ನಾಗಾರ್ಜುನ ಅವರು ಜನ್ಮದಿನ ಆಚರಿಸಿಕೊಂಡರು. ಈ ವೇಳೆ ‘ನಾ ಸಾಮಿ ರಂಗ’ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಯಿತು. ಇದರ ಜೊತೆಗೆ ಸಿನಿಮಾದ ರಿಲೀಸ್ ದಿನಾಂಕ ಕೂಡ ತಿಳಿಸಲಾಯಿತು. ಈ ಸಿನಿಮಾ ಸಂಕ್ರಾಂತಿಗೆ ರಿಲೀಸ್ ಆಗಲಿದೆ. ಈ ಚಿತ್ರದ ರಿಲೀಸ್ ದಿನಾಂಕ ಘೋಷಣೆ ಆಗಿಲ್ಲ. ಈ ಚಿತ್ರದಲ್ಲಿ ಆಶಿಶ್ ವಿದ್ಯಾರ್ಥಿ, ಯಶಸ್ವಿನಿ ಮೊದಲಾದವರು ನಟಿಸಿದ್ದಾರೆ. ಸುಬ್ರಹ್ಮಣ್ಯ ಪಚ್ಚ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಅಕ್ಕಿನೇನಿ ನಾಗೇಶ್ವರ ರಾವ್ ಪ್ರತಿಮೆ ಅನಾವರಣದ ವೇಳೆ ಟಾಲಿವುಡ್ ಸಂಭ್ರಮ
ಈಗಲ್: ರವಿತೇಜ ಅವರು ಟಾಲಿವುಡ್ನಲ್ಲಿ ಬೇಡಿಕೆ ಇಟ್ಟುಕೊಂಡಿದ್ದಾರೆ. ಸದಭಿರುಚಿ ಚಿತ್ರಗಳನ್ನು ಅವರು ನೀಡುತ್ತಾರೆ. ಅವರು ‘ಈಗಲ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕೂಡ ಮುಂದಿನ ವರ್ಷ ಜನವರಿ 12ರಂದು ಬಿಡುಗಡೆ ಆಗಲಿದೆ. ಸಂಕ್ರಾಂತಿಗೆ ಇನ್ನೂ ಮೂರು ತಿಂಗಳು ಬಾಕಿ ಇದೆ. ಈ ಸಂದರ್ಭದಲ್ಲಿ ರೇಸ್ಗೆ ಮತ್ತೊಂದಷ್ಟು ಸಿನಿಮಾಗಳು ಸೇರ್ಪಡೆ ಆಗಬಹುದು. ಕೆಲವು ಸಿನಿಮಾಗಳು ಹಿಂದೆ ಸರಿಯಬಹುದು. ಸದ್ಯಕ್ಕಂತೂ ಸ್ಪರ್ಧೆ ಸಖತ್ ಟಫ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.