MM Keeravani Remuneration: ದುಬಾರಿ ಸಂಭಾವನೆ ಪಡೆಯುವ ಎಂಎಂ ಕೀರವಾಣಿ; ಆಸ್ಕರ್​ ಪ್ರಶಸ್ತಿ ಗೆದ್ದ ಬಳಿಕ ಹೆಚ್ಚಿತು ಬೇಡಿಕೆ

| Updated By: Digi Tech Desk

Updated on: Mar 13, 2023 | 2:03 PM

Oscar Awards 2023 | MM Keeravani: ಆಸ್ಕರ್​ ಪ್ರಶಸ್ತಿ ಪುರಸ್ಕೃತ ಎಂ.ಎಂ. ಕೀರವಾಣಿ ಅವರಿಗೆ ಸಖತ್​ ಜನಪ್ರಿಯತೆ ಸಿಕ್ಕಿದೆ. ಅದಕ್ಕೆ ತಕ್ಕಂತೆಯೇ ಸಂಭಾವನೆಯನ್ನೂ ಅವರು ಹೆಚ್ಚಿಸಿಕೊಳ್ಳಲಿದ್ದಾರೆ.

MM Keeravani Remuneration: ದುಬಾರಿ ಸಂಭಾವನೆ ಪಡೆಯುವ ಎಂಎಂ ಕೀರವಾಣಿ; ಆಸ್ಕರ್​ ಪ್ರಶಸ್ತಿ ಗೆದ್ದ ಬಳಿಕ ಹೆಚ್ಚಿತು ಬೇಡಿಕೆ
ಎಂಎಂ ಕೀರವಾಣಿ
Follow us on

ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (MM Keeravani) ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಅವರ ಹೆಸರು ಶೈನ್​ ಆಗುತ್ತಿದೆ. ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು (Naatu Naatu Song) ಆಸ್ಕರ್​ ಪ್ರಶಸ್ತಿ ಪಡೆದಿದೆ. ಇದು ಇಡೀ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ತಂದಿದೆ. ಸಿನಿಮಾ ಸಂಗೀತ ಲೋಕದಲ್ಲಿ ಎಂಎಂ ಕೀರವಾಣಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಪ್ರತಿ ಸಿನಿಮಾಗೆ ಅವರು ದುಬಾರಿ ಸಂಭಾವನೆ (MM Keeravani Remuneration) ಪಡೆಯುತ್ತಾರೆ. ಈಗ ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ ಗೆದ್ದಿರುವುದರಿಂದ ಅವರಿಗೆ ಇದ್ದ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ.

ನಿರ್ದೇಶಕ ಎಸ್.​ಎಸ್.​ ರಾಜಮೌಳಿ ಮತ್ತು ಎಂ.ಎಂ. ಕೀರವಾಣಿ ಅವರದ್ದು ಹಿಟ್​ ಕಾಂಬಿನೇಷನ್​. ಈವರೆಗೂ ರಾಜಮೌಳಿ ನಿರ್ದೇಶಿಸಿದ ಎಲ್ಲ ಸಿನಿಮಾಗಳಿಗೆ ಸಂಗೀತ ನೀಡಿದ್ದು ಕೀರವಾಣಿ ಅವರು. ‘ಬಾಹುಬಲಿ’, ‘ಆರ್​ಆರ್​ಆರ್’ ಚಿತ್ರದ ಹಾಡುಗಳು ಸಖತ್​ ಫೇಮಸ್​. ಬಹುಭಾಷೆಯಲ್ಲಿ ಡಿಮ್ಯಾಂಡ್​ ಸೃಷ್ಟಿಸಿಕೊಂಡಿರುವ ಕೀರವಾಣಿ ಅವರು ಪ್ರತಿ ಸಿನಿಮಾಗೆ 18 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿತ್ತು. ಈಗ ಅವರ ಸಂಬಳದಲ್ಲಿ ಗಣನೀಯವಾಗಿ ಏರಿಕೆ ಆಗಲಿದೆ.

ಇದನ್ನೂ ಓದಿ: Naatu Naatu Song: ‘ಮುಂದಿನ ಕಾಲಕ್ಕೂ ನೆನಪಿನಲ್ಲಿ ಉಳಿಯುವಂಥದ್ದು ನಾಟು ನಾಟು ಹಾಡು’: ಆಸ್ಕರ್​ ಗೆದ್ದಿದ್ದಕ್ಕೆ ಮೋದಿ ಪ್ರಶಂಸೆ

ಇದನ್ನೂ ಓದಿ
Oscar 2023 Winners List: ಈ ವರ್ಷ ಆಸ್ಕರ್ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ
Oscar 2023: ಆಸ್ಕರ್ ಗೆದ್ದು ಬೀಗಿದ ‘ನಾಟು ನಾಟು..’ ಹಾಡು; ರಾಜಮೌಳಿ ಚಿತ್ರಕ್ಕೆ ಮತ್ತೊಂದು ಕಿರೀಟ
The Elephant Whisperers: ಭಾರತಕ್ಕೆ ಆಸ್ಕರ್​: ‘ದಿ ಎಲಿಫೆಂಟ್​ ವಿಸ್ಪರರ್ಸ್​’ಗೆ ಅಕಾಡೆಮಿ ಪ್ರಶಸ್ತಿ 
Ram Charan: ‘ಭಾರತೀಯರಿಗೆ ಆಸ್ಕರ್​ ಪ್ರಶಸ್ತಿ ಅಂದ್ರೆ ಒಲಂಪಿಕ್ಸ್​ ಗೋಲ್ಡ್​ ಮೆಡಲ್​ ಇದ್ದಂಗೆ’: ರಾಮ್​ ಚರಣ್​

ಆಸ್ಕರ್​ ಪಡೆದವರಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುತ್ತದೆ. ಅವರ ಕೆಲಸಗಳು ವಿಶ್ವಾದ್ಯಂತ ಗಮನ ಸೆಳೆಯುತ್ತವೆ. ಹಾಗಾಗಿ ಈ ಪ್ರತಿಷ್ಠಿತ ಅವಾರ್ಡ್​ ಗಳಿಸಿದವರ ಮಾರುಕಟ್ಟೆ ಹಿರಿದಾಗುತ್ತದೆ. ಅವರಿಗೆ ವಿಶ್ವಮಟ್ಟದಲ್ಲಿ ಬೇಡಿಕೆ ಸೃಷ್ಟಿ ಆಗುತ್ತದೆ. ಈಗ ಎಂಎಂ ಕೀರವಾಣಿ ಅವರಿಗೂ ಅದೇ ರೀತಿ ಜನಪ್ರಿಯತೆ ಸಿಕ್ಕಿದೆ. ಅದಕ್ಕೆ ತಕ್ಕಂತೆಯೇ ಸಂಭಾವನೆಯನ್ನೂ ಹೆಚ್ಚಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: MM Keeravani’s Best Songs: ಆಸ್ಕರ್ ಗೆದ್ದ ಎಂಎಂ ಕೀರವಾಣಿಯ ಬೆಸ್ಟ್ ಹಾಡುಗಳು ಇವೇ ನೋಡಿ

ರಾಜಮೌಳಿ ಅವರು ಮುಂಬರುವ ದಿನಗಳಲ್ಲಿ ಹಾಲಿವುಡ್​ಗೆ ಲಗ್ಗೆ ಇಡುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಅವರು ಜಾಗತಿಕ ಮಟ್ಟದಲ್ಲಿ ಸಿನಿಮಾ ಮಾಡಿದರೆ ಆ ಚಿತ್ರಕ್ಕೂ ಕೂಡ ಎಂಎಂ ಕೀರವಾಣಿ ಅವರೇ ಸಂಗೀತ ನೀಡುತ್ತಾರೆ ಎಂಬುದು ಖಚಿತ. ಆಗ ಅವರ ವ್ಯಾಪ್ತಿ ಇನ್ನಷ್ಟು ಹಿರಿದಾಗುತ್ತದೆ. ಹಾಲಿವುಡ್​ ಪ್ರೊಡಕ್ಷನ್​ ಕಂಪನಿಗಳ ಜೊತೆ ಕೈ ಜೋಡಿಸಿದರೆ ನಿರೀಕ್ಷೆಗೂ ಮೀರಿದ ಸಂಭಾವನೆ ಎಂಎಂ ಕೀರವಾಣಿ ಅವರ ಕೈ ಸೇರಲಿದೆ.

ಇದನ್ನೂ ಓದಿ: MM Keeravani: ಕನ್ನಡ ಚಿತ್ರರಂಗಕ್ಕೂ ಇದೆ ಎಂಎಂ ಕೀರವಾಣಿ ಕೊಡುಗೆ; ಆಸ್ಕರ್​ ಗೆದ್ದ ಸಂಗೀತ ನಿರ್ದೇಶಕನಿಗೆ ಕರುನಾಡ ನಂಟು

ಆಸ್ಕರ್​ ಪ್ರಶಸ್ತಿ ಮಾತ್ರವಲ್ಲದೇ, ಒಮ್ಮೆ ರಾಷ್ಟ್ರ ಪ್ರಶಸ್ತಿ, 8 ಬಾರಿ ಫಿಲ್ಮ್​ಫೇರ್​ ಪ್ರಶಸ್ತಿ, 11 ಬಾರಿ ‘ನಂದಿ ಅವಾರ್ಡ್ಸ್​’ ಪಡೆದುಕೊಂಡ ಖ್ಯಾತಿ ಎಂಎಂ ಕೀರವಾಣಿ ಅವರಿಗೆ ಸಲ್ಲುತ್ತದೆ. ಸಂಗೀತ ನಿರ್ದೇಶನದ ಜೊತೆಗೆ ಗೀತರಚನಕಾರನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ತಮಿಳು, ಹಿಂದಿ ಹಾಗೂ ಕನ್ನಡದ ಕೆಲವು ಸಿನಿಮಾಗಳಿಗೂ ಕೂಡ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:15 pm, Mon, 13 March 23