MM Keeravani: ಆಸ್ಕರ್​ ವೇದಿಕೆಯಲ್ಲಿ ‘ನಾಟು ನಾಟು’ ಗೀತೆ ಹಾಡಲಿರುವ ಎಂಎಂ ಕೀರವಾಣಿ

|

Updated on: Feb 07, 2023 | 6:01 PM

Naatu Naatu Song | Oscar Awards 2023: ಮಾರ್ಚ್​ 12ರಂದು ಲಾಸ್​ ಏಂಜಲೀಸ್​ನಲ್ಲಿ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆ ವೇದಿಕೆಯಲ್ಲಿ ಪರ್ಫಾರ್ಮೆನ್ಸ್​ ನೀಡುವ ಅವಕಾಶ ಎಂಎಂ ಕೀರವಾಣಿ ಅವರಿಗೆ ಸಿಗುತ್ತಿದೆ.

MM Keeravani: ಆಸ್ಕರ್​ ವೇದಿಕೆಯಲ್ಲಿ ‘ನಾಟು ನಾಟು’ ಗೀತೆ ಹಾಡಲಿರುವ ಎಂಎಂ ಕೀರವಾಣಿ
ಎಂಎಂ ಕೀರವಾಣಿ
Follow us on

ಟಾಲಿವುಡ್​ನ ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (MM Keeravani) ಅವರಿಗೆ ವಿಶ್ವಾದ್ಯಂತ ಜನಪ್ರಿಯತೆ ಸಿಕ್ಕಿದೆ. ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ‘ಆರ್​ಆರ್​ಆರ್​’ ಸಿನಿಮಾದ ಎಲ್ಲ ಹಾಡುಗಳು ಜನಮನ ಗೆದ್ದವು. ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಗೆಲ್ಲುವ ಮೂಲಕ ಭಾರತಕ್ಕೆ ಎಂಎಂ ಕೀರವಾಣಿ ಖ್ಯಾತಿ ತಂದುಕೊಟ್ಟರು. ‘ನಾಟು ನಾಟು..’ ಹಾಡು (Naatu Naatu Song) ‘ಆಸ್ಕರ್​’ ಪ್ರಶಸ್ತಿಗೆ ನಾಮಿನೇಟ್​ ಆಗಿದೆ. ಅಷ್ಟೇ ಅಲ್ಲದೇ ಎಂಎಂ ಕೀರವಾಣಿ ಅವರಿಗೆ ಒಂದು ಬಂಪರ್​ ಅವಕಾಶ ಸಿಕ್ಕಿದೆ. ಆಸ್ಕರ್​ ಪ್ರಶಸ್ತಿ (Oscar Awards 2023) ಪ್ರದಾನ ಸಮಾರಂಭದಲ್ಲಿ ಈ ಗೀತೆಯನ್ನು ಹಾಡಲು ಅವರಿಗೆ ವೇದಿಕೆ ಒದಗಿಸಿಕೊಡಲಾಗುತ್ತಿದೆ. ಈ ಸುದ್ದಿ ಕೇಳಿ ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ.

ಮಾರ್ಚ್​ 12ರಂದು ಲಾಸ್​ ಏಂಜಲೀಸ್​ನಲ್ಲಿ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಹಾಲಿವುಡ್​ನ ಅನೇಕ ದಿಗ್ಗಜರು ಅದರಲ್ಲಿ ಭಾಗಿ ಆಗಲಿದ್ದಾರೆ. ಅವರೆಲ್ಲರ ಮುಂದೆ ಪರ್ಫಾರ್ಮೆನ್ಸ್​ ನೀಡುವ ಅವಕಾಶ ಎಂಎಂ ಕೀರವಾಣಿ ಅವರಿಗೆ ಸಿಗುತ್ತಿದೆ. ಈ ಬಗ್ಗೆ ಅವರು ಕೊಂಚ ನರ್ವಸ್​ ಆಗಿದ್ದಾರೆ. ಅದರ ಜೊತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಚಿಂತೆ ಕಾಡುತ್ತಿದೆ ಎಂದು ಅವರು ಹೇಳಿರುವುದಾಗಿ ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ.

ಇದನ್ನೂ ಓದಿ: MM Keeravani: ಕನ್ನಡದ ಚಿತ್ರಗಳಿಗೂ ಸಂಗೀತ ನೀಡಿರುವ ಗೋಲ್ಡನ್​ ಗ್ಲೋಬ್​ ವಿನ್ನರ್​ ಎಂಎಂ ಕೀರವಾಣಿ ಸಂಭಾವನೆ ಬಹುಕೋಟಿ

ಇದನ್ನೂ ಓದಿ
‘ಗೋಲ್ಡನ್​ ಗ್ಲೋಬ್​​’ ಬಳಿಕ ವಿದೇಶದಲ್ಲಿ ಮತ್ತೆರಡು ಪ್ರಶಸ್ತಿ ಬಾಚಿಕೊಂಡ ‘ಆರ್​ಆರ್​ಆರ್​’ ಚಿತ್ರ
Golden Globes 2023: ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ‘ಆರ್​ಆರ್​ಆರ್​’ ತಂಡ; ಇಲ್ಲಿದೆ ಫೋಟೋ ಗ್ಯಾಲರಿ
Golden Globes 2023: ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡ ಆರ್​ಆರ್​ಆರ್​ನ ನಾಟು ನಾಟು ಹಾಡು
RRR: ಜಪಾನ್​ನಲ್ಲಿ ಮೊದಲ ದಿನವೇ 1 ಕೋಟಿ ರೂಪಾಯಿ ಗಳಿಸಿದ ‘ಆರ್​ಆರ್​ಆರ್​’: ಜೋರಾಗಿದೆ ಕ್ರೇಜ್​

‘ನಾವು ಆಸ್ಕರ್​ ಗೆಲ್ಲುತ್ತೇವೆ ಎಂಬ ಬಗ್ಗೆ ನನಗೆ ಆತ್ಮವಿಶ್ವಾಸ ಇದೆ. ಆದರೆ ಅಷ್ಟು ಜನರ ಎದುರಿನಲ್ಲಿ ಪರ್ಫಾರ್ಮೆನ್ಸ್​ ನೀಡಲು ಸಾಕಷ್ಟು ತಯಾರಿ ಬೇಕು’ ಎಂದು ಎಂಎಂ ಕೀರವಾಣಿ ಹೇಳಿದ್ದಾರೆ. ಅವರ ದೇಹದ ತೂಕ ಹೆಚ್ಚಿದೆ. ಆ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ತುಂಬ ಸಮಯದಿಂದ ನಾನು ಆರೋಗ್ಯವನ್ನು ನಿರ್ಲಕ್ಷಿಸಿದೆ. ಗೋಲ್ಡನ್​ ಗ್ಲೋಬ್​ ಕಾರ್ಯಕ್ರಮದ ವೇದಿಕೆಯಲ್ಲಿ ನಿಂತುಕೊಂಡು ಮಾತನಾಡುವುದು ಕೂಡ ನನಗೆ ಸಮಸ್ಯೆ ಆಯಿತು’ ಎಂದು ಕೀರವಾಣಿ ಹೇಳಿದ್ದಾರೆ.

ಇದನ್ನೂ ಓದಿ: 2015ರಲ್ಲಿ ಚಿತ್ರರಂಗ ತೊರೆಯಬೇಕೆಂದುಕೊಂಡಿದ್ದ ಕೀರವಾಣಿ; ಆ ವರ್ಷ ನಡೆಯಿತು ಚಮತ್ಕಾರ

‘ನನ್ನ ದೇಹ ತೂಕದ ಬಗ್ಗೆ ನನಗೆ ಅರಿವು ಮೂಡಿದೆ. ನಾನು ಶೇಪ್​ ಕಳೆದುಕೊಂಡಿದ್ದೇನೆ. ದೇಹವು ಆರೋಗ್ಯಕರವಾಗಿ ಇಲ್ಲದಿದ್ದರೆ ಮನಸ್ಸು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ದೇಶಕ್ಕೆ ಹೆಮ್ಮೆ ತರುವಂತಹ ಇನ್ನಷ್ಟು ಹಾಡುಗಳನ್ನು ಕಂಪೋಸ್​ ಮಾಡಬೇಕಿದ್ದರೆ ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿ ಇರಬೇಕು’ ಎಂದು ಎಂಎಂ ಕೀರವಾಣಿ ಹೇಳಿದ್ದಾರೆ.

ಇದನ್ನೂ ಓದಿ: MM Keeravani: ‘ಗೋಲ್ಡನ್ ಗ್ಲೋಬ್’: ವೃತ್ತಿಜೀವನದ ಆರಂಭದಲ್ಲಿ ಚಾನ್ಸ್​ ನೀಡಿದ ಅರ್ಜುನ್ ಸರ್ಜಾಗೆ ಕೀರವಾಣಿ ಧನ್ಯವಾದ

ಚಿತ್ರರಂಗದಲ್ಲಿ ಎಂಎಂ ಕೀರವಾಣಿ ಅವರ ಅನುಭವ ಅಪಾರ. 1990ರಿಂದಲೂ ಅವರು ಸಕ್ರಿಯರಾಗಿದ್ದಾರೆ. ಹಲವಾರು ಸೂಪರ್​ ಹಿಟ್​ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡದ ‘ಅಳಿಮಯ್ಯ’, ‘ಅಪ್ಪಾಜಿ’, ‘ಭೈರವ’, ‘ಸ್ವಾತಿ’, ‘ಕರ್ನಾಟಕ ಸುಪುತ್ರ’, ‘ದೀಪಾವಳಿ’, ‘ಜಮೀನ್ದಾರ್ರು’ ಮುಂತಾದ ಸಿನಿಮಾಗಳಿಗೆ ಸಂಗೀತ ನೀಡಿದ್ದು ಎಂಎಂ ಕೀರವಾಣಿ ಅವರೇ. ತೆಲುಗಿನಿಂದ ರಿಮೇಕ್​ ಆದ ‘ಮರ್ಯಾದೆ ರಾಮಣ್ಣ’ ಹಾಗೂ ‘ವೀರ ಮದಕರಿ’ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದು ಕೂಡ ಎಂಎಂ ಕೀರವಾಣಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:01 pm, Tue, 7 February 23