ಪಿಆರ್ ಕೆಲಸಕ್ಕೆ ನಾಗ ಚೈತನ್ಯ ತಿಂಗಳಿಗೆ ಖರ್ಚು ಮಾಡ್ತಾರೆ ದೊಡ್ಡ ಮೊತ್ತ
ನಾಗ ಚೈತನ್ಯ ಅವರ ‘ತಾಂಡೇಲ್’ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಚಿತ್ರದ ಮೊದಲ ದಿನದ ಗಳಿಕೆ ಅಭೂತಪೂರ್ವ ಆಗಿದೆ. ಪಿಆರ್ಗೆ ತಿಂಗಳಿಗೆ 1 ರಿಂದ 3 ಲಕ್ಷ ರೂಪಾಯಿ ಖರ್ಚು ಮಾಡುವುದು ಅವಶ್ಯಕ ಎಂದು ಅವರು ಹೇಳಿದ್ದಾರೆ. ಚಿತ್ರದ ಪ್ರಚಾರ ಮತ್ತು ಧನಾತ್ಮಕ ಚಿತ್ರಣ ನಿರ್ಮಾಣಕ್ಕೆ ಪಿಆರ್ ತಂಡ ಮಹತ್ವದ ಪಾತ್ರ ವಹಿಸುತ್ತದೆ ಎಂಬುದು ಅವರ ಅಭಿಪ್ರಾಯ.

ನಾಗ ಚೈತನ್ಯ ಅವರು ‘ತಾಂಡೇಲ್’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರ ಮೊದಲ ದಿನ ಭರ್ಜರಿ ಗಳಿಕೆ ಮಾಡಿದೆ. ಅವರ ನಟನೆಯ ಸಿನಿಮಾ ಒಂದು ಇಷ್ಟು ದೊಡ್ಡ ಮಟ್ಟದಲ್ಲಿ ಓಪನಿಂಗ್ ಕಂಡಿದ್ದು ಇದೇ ಮೊದಲು ಎನ್ನಲಾಗಿದೆ. ಈ ವಿಚಾರ ಅವರಿಗೆ ಖುಷಿ ಕೊಟ್ಟಿದೆ. ಈ ಮಧ್ಯೆ ಅವರು ಪಿಆರ್ ವಿಚಾರಕ್ಕೆ ವರ್ಷಕ್ಕೆ ಎಷ್ಟು ರೂಪಾಯಿ ಖರ್ಚು ಮಾಡುತ್ತಾರೆ ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ.
ಪ್ರತಿ ಸೆಲೆಬ್ರಿಟಿಗಳು ತಮ್ಮದೇ ಆದ ಪಿಆರ್ ತಂಡ ಹೊಂದಿರುತ್ತಾರೆ. ಇದರ ಮೂಲಕ ಸಿನಿಮಾ ಪ್ರಚಾರ ಮಾಡುತ್ತಾರೆ. ಅಲ್ಲದೆ, ವೈಯಕ್ತಿಕ ವಿಚಾರ ಬಂದರೆ ಅದರ ಬಗ್ಗೆ ಸ್ಪಷ್ಟನೆ ನೀಡುವ ಕೆಲಸ ಮಾಡುತ್ತಾರೆ. ಇದು ಕನ್ನಡದಲ್ಲಿ ಕಡಿಮೆ ಇದ್ದರೂ ಬಾಲಿವುಡ್ನಲ್ಲಿ ಈ ಪದ್ಧತಿ ಜೋರಾಗಿ ಬಳಕೆಯಲ್ಲಿ ಇದೆ. ಇದು ಟಾಲಿವುಡ್ಗೂ ಬಂದಿದೆ. ಇದಕ್ಕೆ ನಾಗ ಚೈತನ್ಯ ಅವರು ಖರ್ಚು ಮಾಡುವ ಹಣ ಎಷ್ಟು ಎಂದು ಹೇಳಿದ್ದಾರೆ.
ಇತ್ತೀಚೆಗೆ ಸಂದರ್ಶನ ಒಂದರಲ್ಲಿ ನಾಗ ಚೈತನ್ಯ ಮಾತನಾಡಿದ್ದಾರೆ. ‘ಪಿಆರ್ ಏಜೆನ್ಸಿಗೆ ನೀವು ತಿಂಗಳಿಗೆ 1ರಿಂದ 3 ಲಕ್ಷ ರೂಪಾಯಿ ಹಣವನ್ನು ಸ್ಪೆಂಡ್ ಮಾಡುತ್ತಿಲ್ಲ ಎಂದರೆ ನೀವು ಮೂರ್ಖರು’ ಎಂದು ನಾಗ ಚೈತನ್ಯ ಅವರು ಹೇಳಿದ್ದಾರೆ. ‘ಸಿನಿಮಾ ರಿಲೀಸ್ ಸಂದರ್ಭದಲ್ಲಿ ತಂಡದವರು ನಿಮ್ಮ ಸಿನಿಮಾ ಪ್ರಚಾರ ಮಾಡುತ್ತಾರೆ, ಚಿತ್ರದ ಬಗ್ಗೆ ಪಾಸಿಟಿವಿಟಿ ಹಬ್ಬಿಸುತ್ತಾರೆ’ ಎಂದು ಅವರು ಹೇಳಿದ್ದಾರೆ.
‘ನಾನು ತಾಂಡೇಲ್ ಚಿತ್ರಕ್ಕಾಗಿ ಎರಡು ವರ್ಷ ವ್ಯಯಿಸಿದ್ದೇನೆ. ಸಿನಿಮಾ ರಿಲೀಸ್ ಸಂದರ್ಭದಲ್ಲಿ ಪಿಆರ್ ಮಾಡಿಲ್ಲ ಎಂದರೆ ಸಿನಿಮಾ ಬೀಳಬಹುದು’ ಎಂದು ನಾಗ ಚೈತನ್ಯ ಅವರು ಹೇಳಿದ್ದಾರೆ. ಪಿಆರ್ ತಂಡದ ಮೂಲಕ ಚಿತ್ರಕ್ಕೆ ಒಂದಷ್ಟು ಪ್ರಚಾರ ಮಾಡುತ್ತಾರೆ ಎಂಬ ಖುಷಿ ಅವರದ್ದು.
ಇದನ್ನೂ ಓದಿ: ‘ನಾನು ಕೂಡ ಒಡೆದ ಕುಟುಂಬದ ಮಗು’; ಟೀಕಿಸಿದವರಿಗೆ ನಾಗ ಚೈತನ್ಯ ಉತ್ತರ
‘ತಾಂಡೇಲ್’ ಚಿತ್ರ ಫೆಬ್ರವರಿ 7ರಂದು ಬಿಡುಗಡೆ ಕಂಡಿದೆ. ತೆಲುಗು ಜೊತೆಗೆ ಇತ ಭಾಷೆಯಲ್ಲೂ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಲ್ಲಿ ನಾಗ ಚೈತನ್ಯ ಅವರು ಮೀನುಗಾರನ ಪಾತ್ರ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ನಾಗ ಚೈತನ್ಯ ಅವರು ಈ ಚಿತ್ರದ ಮೂಲಕ ಹಲವು ವರ್ಷಗಳ ಬಳಿಕ ದೊಡ್ಡ ಗೆಲುವು ಕಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.