AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧನ್ಯತಾಗೆ ಪ್ರಪೋಸ್ ಮಾಡೋ ವಿಡಿಯೋ ಹಂಚಿಕೊಂಡ ಡಾಲಿ ಧನಂಜಯ್

ಡಾಲಿ ಧನಂಜಯ್ ಅವರು ಫೆಬ್ರವರಿ 16 ರಂದು ಮೈಸೂರಿನಲ್ಲಿ ವೈದ್ಯೆ ಧನ್ಯತಾ ಅವರನ್ನು ಮದುವೆಯಾಗುತ್ತಿದ್ದಾರೆ. ಈ ಜೋಡಿ ತಮ್ಮ ನಿಶ್ಚಿತಾರ್ಥದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕನ್ನಡ ಚಿತ್ರರಂಗದ ಹಾಗೂ ದಕ್ಷಿಣ ಭಾರತದ ಹಲವು ಗಣ್ಯರು ಈ ಮದುವೆಗೆ ಆಗಮಿಸುತ್ತಿದ್ದಾರೆ. ಧನಂಜಯ್ ಅವರ ಬ್ಯಾಚುಲರ್ ಜೀವನದಿಂದ ದಾಂಪತ್ಯ ಜೀವನಕ್ಕೆ ಪರಿವರ್ತನೆಯನ್ನು ತೋರಿಸುವ ವಿಡಿಯೋ ಸಾಕಷ್ಟು ಜನರ ಗಮನ ಸೆಳೆದಿದೆ.

ಧನ್ಯತಾಗೆ ಪ್ರಪೋಸ್ ಮಾಡೋ ವಿಡಿಯೋ ಹಂಚಿಕೊಂಡ ಡಾಲಿ ಧನಂಜಯ್
ಧನ್ಯತಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 09, 2025 | 6:30 AM

Share

ಡಾಲಿ ಧನಂಜಯ್ ಅವರು ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಇದಕ್ಕಾಗಿ ವೇದಿಕೆ ಕೂಡ ಸಿದ್ಧವಾಗಿದೆ. ಮೈಸೂರಿನಲ್ಲಿ ಫೆಬ್ರವರಿ 16ರಂದು ಧನಂಜಯ್ ಅವರು ಮದುವೆ ಆಗುತ್ತಿದ್ದಾರೆ. ಧನ್ಯತಾ ಅವರು ವೃತ್ತಿಯಲ್ಲಿ ವೈದ್ಯೆ. ಧನಂಜಯ್ ಬಾಳಲ್ಲಿ ಡಾಕ್ಟರ್ ಆಗಮನ ಆಗಿರೋದು ಫ್ಯಾನ್ಸ್​ಗೆ ಖುಷಿ ಕೊಟ್ಟಿದೆ. ಧನಂಜಯ್ ಅಭಿಮಾನಿಗಳಿಗೆ ಆಮಂತ್ರಣ ನೀಡುತ್ತಿರುವ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಧನ್ಯತಾಗೆ ಉಂಗುರ ಕೂಡ ಹಾಕಿದ್ದಾರೆ.

ಧನಂಜಯ್ ಅವರು ಇಷ್ಟು ವರ್ಷ ಬ್ಯಾಚಲುರ್ ಆಗಿದ್ದರು. ಈಗ ಅವರು ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಬಗ್ಗೆ ಧನ್ಯತಾ ಹಾಗೂ ಧನಂಜಯ್ ಅವರು ಇತ್ತೀಚೆಗೆ ಸುದ್ದಿಗೋಷ್ಠಿ ಮಾಹಿತಿ ನೀಡಿದ್ದಾರೆ. ಮೈಸೂರಿನಲ್ಲಿ ಧನಂಜಯ್ ವಿವಾಹ ಆಗುತ್ತಿದ್ದಾರೆ. ಈ ಮದುವೆಗೆ ಅನೇಕ ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ. ಈಗ ಅವರು ಒಂದು ವಿಡಿಯೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಡಾಲಿ ಹಳೆಯ ಲವ್​ಸ್ಟೋರಿ ಕೇಳಿ ಧನ್ಯತಾ ರಿಯಾಕ್ಷನ್ ಹೇಗಿತ್ತು? ವಿವರಿಸಿದ ಧನಂಜಯ್

ಧನಂಜಯ್ ಅವರು ಇಷ್ಟು ದಿನ ಬ್ಯಾಚುಲರ್ ಆಗಿದ್ದರು. ಈಗ ಹಂಚಿಕೊಂಡಿರೋ ವಿಡಿಯೋದಲ್ಲಿ ಇದನ್ನು ತೋರಿಸಲಾಗಿದೆ. ಧನಂಜಯ್ ಆಪ್ತ ನಾಗಭೂಷಣ್ ಧ್ವನಿಯಲ್ಲಿ ವಿಡಿಯೋ ಮೂಡಿ ಬಂದಿದೆ. ಧನಂಜಯ್ ಬ್ಯಾಚುಲರ್ ಜೀವನ ಹೇಗಿತ್ತು ಎಂಬುದನ್ನು ವಿವರಿಸಿ, ನಂತರ ಅವರ ಬಾಳಲ್ಲಿ ಧನ್ಯತಾ ಎಂಟ್ರಿ ಕೊಟ್ಟರು ಎಂಬ ರೀತಿಯಲ್ಲಿ ತೋರಿಸಲಾಗಿದೆ. ಆ ಬಳಿಕ ಧನಂಜಯ್ ಅವರು ಜೀವನದಲ್ಲಿ ಸಂಗಾತಿ ಇದ್ದೇ ಇದೆ ಎಂದು ವಾದಿಸುತ್ತಾರೆ. ಇದರ ಜೊತೆಗೆ ಧನ್ಯತಾಗೆ ಉಂಗುರ ಹಾಕಿ ಗಮನ ಸೆಳೆಯುತ್ತಾರೆ.

ಡಾಲಿ ಧನಂಜಯ್ ಅವರು ಚಿತ್ರರಂಗದಲ್ಲಿ ಇರುವಾಗ ಧನ್ಯತಾ ಅವರು ಒಮ್ಮೆ ಅಭಿಮಾನಿಯಾಗಿ ಭೇಟಿ ಮಾಡಿದ್ದರು. ಆ ಬಳಿಕ ಧನಂಜಯ್ ಅವರನ್ನು ಇನ್​ಸ್ಟಾಗ್ರಾಮ್ ಮೂಲಕ ಸಂಪರ್ಕಿಸಿದರು ಧನ್ಯತಾ. ಸಿನಿಮಾ ಹಿಟ್ ಆದಾಗ ಅವರು ವಿಶ್ ಮಾಡುತ್ತಿದ್ದರಂತೆ. ಆ ಬಳಿಕ ಇಬ್ಬರೂ ಭೇಟಿ ಮಾಡಿ ಸುತ್ತಾಟ ನಡೆಸಿದರು. ಈಗ ಇವರು ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಈ ವಿವಾಹಕ್ಕೆ ಕನ್ನಡ ಚಿತ್ರರಂಗದವರಿಗೆ ಮಾತ್ರ ಅಲ್ಲದೆ, ‘ಪುಷ್ಪ 2’ ಚಿತ್ರದ ನಟ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ, ನಿರ್ದೇಶಕ ಸುಕುಮಾರ್​ ಅವರಿಗೂ ಆಹ್ವಾನ ಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು