AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತಾಂಡೇಲ್’ ಚಿತ್ರ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಗಳಿಸಿದ್ದೆಷ್ಟು? ನಾಗ ಚೈತನ್ಯಗೆ ಸಿಕ್ತಾ ಗೆಲುವು?

ನಾಗ ಚೈತನ್ಯ ಅಭಿನಯದ ‘ತಾಂಡೇಲ್’ ಸಿನಿಮಾ ಫೆಬ್ರವರಿ 7 ರಂದು ಬಿಡುಗಡೆಯಾಗಿ ದೊಡ್ಡ ಯಶಸ್ಸು ಕಂಡಿತು. ಮೊದಲ ದಿನವೇ 21.27 ಕೋಟಿ ರೂಪಾಯಿಗಳನ್ನು ಗಳಿಸಿ ಬಾಕ್ಸ್ ಆಫೀಸ್ ರೆಕಾರ್ಡ್ ಸೃಷ್ಟಿಸಿದೆ. ಭಾರತದಾದ್ಯಂತ ಭರ್ಜರಿ ಪ್ರೇಕ್ಷಕರನ್ನು ಸೆಳೆದ ಈ ಚಿತ್ರಕ್ಕೆ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

‘ತಾಂಡೇಲ್’ ಚಿತ್ರ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಗಳಿಸಿದ್ದೆಷ್ಟು? ನಾಗ ಚೈತನ್ಯಗೆ ಸಿಕ್ತಾ ಗೆಲುವು?
ತಾಂಡೇಲ್
ರಾಜೇಶ್ ದುಗ್ಗುಮನೆ
|

Updated on: Feb 08, 2025 | 5:53 PM

Share

ನಾಗ ಚೈತನ್ಯ ನಟನೆಯ ‘ತಾಂಡೇಲ್’ ಸಿನಿಮಾ ಫೆಬ್ರವರಿ 7ರಂದು ರಿಲೀಸ್ ಆಯಿತು. ಈ ಚಿತ್ರ ಭರ್ಜರಿ ಮೆಚ್ಚುಗೆ ಪಡೆದಿದೆ. ನಾಗ ಚೈತನ್ಯ ಅವರ ನಟನೆಯನ್ನು ಎಲ್ಲರೂ ಕೊಂಡಾಡಿದ್ದಾರೆ. ಈ ಚಿತ್ರ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂಬುದರ ವಿವರವನ್ನು ನಿರ್ಮಾಪಕರು ಹಂಚಿಕೊಂಡಿದ್ದಾರೆ. ಮೊದಲ ದಿನವೇ ಚಿತ್ರ ಗಮನ ಸೆಳೆದಿದೆ. ಈ ಮೂಲಕ ನಾಗ ಚೈತನ್ಯ ಗೆಲುವಿನ ನಗೆ ಬೀರಿದ್ದಾರೆ.

‘ತಾಂಡೇಲ್’ ಚಿತ್ರ ಮೊದಲ 21.27 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿ ಆಗಿದೆ. ಈ ಚಿತ್ರ ಮೊದಲ ದಿನವೇ ದೊಡ್ಡ ಗಳಿಕೆ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಚಿತ್ರವು ಮತ್ತಷ್ಟು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ವೀಕೆಂಡ್​ನಲ್ಲಿ ಚಿತ್ರಕ್ಕೆ ಎಷ್ಟು ದೊಡ್ಡ ಮೊತ್ತ ಹರಿದುಬರುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.

sacnilk ವರದಿ ಪ್ರಕಾರ ಈ ಚಿತ್ರ ಭಾರತದಲ್ಲಿ 10 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತೆಲುಗಿನಲ್ಲಿ 9.8 ಕೋಟಿ ರೂಪಾಯಿ, ತಮಿಳಿನಲ್ಲಿ 5 ಲಕ್ಷ ರೂಪಾಯಿ, ಹಿಂದಿಯಲ್ಲಿ ಚಿತ್ರ 15 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರಕ್ಕೆ ತಮಿಳಿಗಿಂತ ಹಿಂದಿಯಲ್ಲೇ ಹೆಚ್ಚಿನ ಪ್ರಶಂಸೆ ಸಿಕ್ಕಿದೆ.

‘ತಾಂಡೇಲ್’ ಚಿತ್ರವನ್ನು ಅಲ್ಲು ಅರ್ಜುನ್ ಪ್ರೆಸೆಂಟ್ ಮಾಡಿದ್ದಾರೆ. ಈ ಚಿತ್ರವನ್ನು ‘ಗೀತಾ ಆರ್ಟ್ಸ್’ ಮೂಲಕ ಬನ್ನಿ ವಾಸ್ ನಿರ್ಮಾಣ ಮಾಡಿದ್ದಾರೆ. ನಾಗ ಚೈತನ್ಯ ವೃತ್ತಿ ಜೀವನದ ದೊಡ್ಡ ಬ್ಲಾಕ್​ಬಸ್ಟರ್ ಹಿಟ್ ಚಿತ್ರ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ನಾನು ಕೂಡ ಒಡೆದ ಕುಟುಂಬದ ಮಗು’; ಟೀಕಿಸಿದವರಿಗೆ ನಾಗ ಚೈತನ್ಯ ಉತ್ತರ

ನಾಗ ಚೈತನ್ಯ ಅವರು ತಾಂಡೇಲ್ ರಾಜು ಹೆಸರಿನ ಪಾತ್ರ ಮಾಡಿದ್ದಾರೆ. ತಾಂಡೇಲ ಎಂದರೆ ಮೀನು ಹಿಡಿಯ ಹೋಗುವ ದೋಣಿಯ ಕ್ಯಾಪ್ಟನ್. ಇವರು ಒಮ್ಮೆ ಅಂತಾರಾಷ್ಟ್ರೀಯ ಜಲ ಗಡಿ ದಾಟುತ್ತಾರೆ. ಈ ವೇಳೆ ಪಾಕ್ ನೌಕಾ ಪಡೆ ಇವರನ್ನು ಬಂಧಿಸುತ್ತದೆ. ಈ ರೀತಿಯಲ್ಲಿ ಕಥೆ ಸಾಗುತ್ತದೆ. ಸಾಯಿ ಪಲ್ಲವಿ ಸತ್ಯಾ ಹೆಸರಿನ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.