Nagarjuna Birthday: ಖದರ್ ಮಾಸ್ ಲುಕ್​ನಲ್ಲಿ ನಾಗಾರ್ಜುನ; ‘ದಿ ಘೋಸ್ಟ್’ ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್

| Updated By: shivaprasad.hs

Updated on: Aug 29, 2021 | 1:46 PM

Nagarjuna: ಟಾಲಿವುಡ್​ನ ಖ್ಯಾತ ನಟ ನಾಗಾರ್ಜುನ ಅವರ 62ನೇ ಜನ್ಮದಿನದ ಸಂದರ್ಭದಲ್ಲಿ ತೆಲುಗು ಚಿತ್ರರಂಗದ ಖ್ಯಾತ ತಾರೆಯರು ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಹುಟ್ಟುಹಬ್ಬದಂದೇ ಅವರ ನೂತನ ‘ದಿ ಘೋಸ್ಟ್’ ಚಿತ್ರದ ಟೈಟಲ್ ರಿವೀಲ್ ಪೋಸ್ಟರ್ ಬಿಡುಗಡೆ ಮಾಡಿ ನಾಗಾರ್ಜುನ ಅವರಿಗೆ ಚಿತ್ರತಂಡ ಶುಭಾಶಯಗಳನ್ನು ತಿಳಿಸಿದೆ.

Nagarjuna Birthday: ಖದರ್ ಮಾಸ್ ಲುಕ್​ನಲ್ಲಿ ನಾಗಾರ್ಜುನ; ‘ದಿ ಘೋಸ್ಟ್’ ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್
ನಾಗಾರ್ಜುನ ನಟನೆಯ ನೂತನ ಚಿತ್ರದ ಪೋಸ್ಟರ್
Follow us on

ತೆಲುಗಿನ ಖ್ಯಾತ ನಟ ‘ಕಿಂಗ್’ ಎಂದು ಅಭಿಮಾನಿಗಳಿಂದ ಕರೆಯಲ್ಪಡುವ ನಾಗಾರ್ಜುನ ಅವರ ಜನ್ಮದಿನವಿಂದು. 62ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಅವರಿಗೆ ಟಾಲಿವುಡ್ ಚಿತ್ರರಂಗ ಶುಭಾಶಯಗಳನ್ನು ಕೋರಿದೆ. ಅವರ ನೂತನ ಚಿತ್ರದ ಟೈಟಲ್ ಪೋಸ್ಟರ್ ಕೂಡಾ ಬಿಡುಗಡೆ ಮಾಡಲಾಗಿದ್ದು, ನಾಗಾರ್ಜುನ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಿರ್ದೇಶಕ ಪ್ರವೀಣ್ ಸತ್ತಾರು ‘ದಿ ಘೋಸ್ಟ್’ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. ಈ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ನಾಗಾರ್ಜುನ ಅವರೊಂದಿಗೆ ಬಣ್ಣ ಹಚ್ಚಲಿದ್ದಾರೆ.

ಲಂಡನ್​ ನಗರದ ಹಿನ್ನೆಲೆಯಲ್ಲಿ ‘ದಿ ಘೋಸ್ಟ್’ ಚಿತ್ರದ ಕತೆ ಸಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗುಲ್ ಪನಾಗ್, ಅನಿಖಾ ಸುರೇಂದ್ರನ್ ಮೊದಲಾದವರು ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ನಾರಾಯಣ್ ದಾಸ್ ಕೆ ನಾರಂಗ್, ರಾಮ್ ಮೋಹನ್ ರಾವ್, ಶರತ್ ಮರರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್​ಎಲ್​ಪಿ ಹಾಗೂ ನಾರ್ಥ್​ಸ್ಟಾರ್ ಎಂಟರ್​ಟೇನ್​ಮೆಂಟ್ ಬ್ಯಾನರ್​ನಲ್ಲಿ ಚಿತ್ರ ತಯಾರಾಗಲಿದೆ.

ಚಿತ್ರದ ಪೋಸ್ಟರ್ ಇಲ್ಲಿದೆ:

ನಟ ನಾಗಾರ್ಜುನ್ ಅವರ ಹುಟ್ಟುಹಬ್ಬಕ್ಕೆ ಮೆಗಾಸ್ಟಾರ್ ಚಿರಂಜೀವಿ, ಸೊಸೆ ಸಮಂತಾ ಸೇರಿದಂತೆ ಖ್ಯಾತನಾಮರು ಶುಭಾಶಯಗಳನ್ನು ಕೋರಿದ್ದಾರೆ. ‘ನಿಮ್ಮ ಕುರಿತು ನನಗಿರುವ ಗೌರವವನ್ನು ಪದಗಳಲ್ಲಿ ತಿಳಿಸುವುದು ಅಸಾಧ್ಯ. ನಿಮಗೆ ಇಂದು ಮತ್ತು ಮುಂದೆ ಅಯಸ್ಸು, ಆರೋಗ್ಯ ಲಭಿಸಲಿ’ ಎಂದು ಸಮಂತಾ ಶುಭಹಾರೈಸಿದ್ದಾರೆ.

ಸಮಂತಾ ಅಕ್ಕಿನೇನಿ ಶುಭಾಶಯ ಕೋರಿದ್ದು ಹೀಗೆ:

ಮೆಗಾಸ್ಟಾರ್ ಚಿರಂಜೀವಿ ಶುಭಾಶಯ ಕೋರಿ ಮಾಡಿದ ಟ್ವೀಟ್:

ನಾಗಾರ್ಜುನ ಅವರಿಗೆ ಪುತ್ರರಾದ ನಾಗ ಚೈತನ್ಯ ಹಾಗೂ ನಿಖಿಲ್ ಅಕ್ಕಿನೇನಿ ಕೂಡಾ ಶುಭಾಶಯಗಳನ್ನು ತಿಳಿಸಿದ್ದು, ಈ ಕುರಿತು ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ. ನಾಗ ಚೈತನ್ಯ ತಂದೆ ನಾಗಾರ್ಜುನ ಅವರೊಂದಿಗೆ ‘ಬಂಗಾರ್ರಾಜು’ ಚಿತ್ರದಲ್ಲಿ ಮತ್ತೊಮ್ಮೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಚಿತ್ರದ ನೂತನ ಪೋಸ್ಟರ್ ಒಂದನ್ನು ಅವರು ಬಿಡುಗಡೆ ಮಾಡಿ, ಶುಭ ಕೋರಿದ್ದಾರೆ.

‘ನನ್ನ ರಾಜನಿಗೆ ಜನ್ಮದಿನದ ಶುಭಾಶಯಗಳು. ನಿಮ್ಮೊಂದಿಗೆ ತೆರೆಯನ್ನು ಮತ್ತೆ ಹಂಚಿಕೊಳ್ಳಲು ಎದುರುನೋಡುತ್ತಿದ್ದೇನೆ’ ಎಂದು ನಾಗ ಚೈತನ್ಯ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:

ಕ್ಯಾಬ್​ ಡ್ರೈವರ್​ಗಳ ಕಥೆ ಹೇಳುವ ‘ಯೆಲ್ಲೋ ಬೋರ್ಡ್​’; ಕಿಚ್ಚ ಶುಭಕೋರಿದ ಈ ಸಿನಿಮಾದಲ್ಲಿ ಏನಿದೆ ವಿಶೇಷ?

ತೆಲುಗಿನಲ್ಲಿ ‘ಪರಮ ಸುಂದರಿ’ ಯಾರು? ನಟಿ ಕೀರ್ತಿ ಸುರೇಶ್​ ಬಗ್ಗೆ ಕೇಳಿಬರುತ್ತಿದೆ ಗುಸುಗುಸು

(Nagarjuna and Kajal Agarwal starring The Ghost title reveal poster is released on Nagarjuna birthday)

Published On - 1:39 pm, Sun, 29 August 21