AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀವು ನನ್ನ ಜಗತ್ತನ್ನು ಬೆಳಗಿದಿರಿ’; ಮಹೇಶ್​ ಬಾಬು ಬರ್ತ್​​ಡೇಗೆ ನಮ್ರತಾ ಭಾವನಾತ್ಮಕ ವಿಶ್

ಮಹೇಶ್​ ಬಾಬು ವೃತ್ತಿಜೀವನಕ್ಕೆ ನಮ್ರತಾ ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರು ಪತಿಗೆ ಭವನಾತ್ಮಕ ಪತ್ರ ಬರೆದಿದ್ದು, ‘ನೀವು ನನ್ನ ಜಗತ್ತನ್ನು ಬೆಳಗಿದಿರಿ’ ಎಂದಿದ್ದಾರೆ.

‘ನೀವು ನನ್ನ ಜಗತ್ತನ್ನು ಬೆಳಗಿದಿರಿ’; ಮಹೇಶ್​ ಬಾಬು ಬರ್ತ್​​ಡೇಗೆ ನಮ್ರತಾ ಭಾವನಾತ್ಮಕ ವಿಶ್
ನಮ್ರತಾ-ಮಹೇಶ್
TV9 Web
| Edited By: |

Updated on:Aug 09, 2022 | 6:04 PM

Share

ಮಹೇಶ್ ಬಾಬು (Mahesh Babu) ಅವರು ಇಂದು (ಆಗಸ್ಟ್ 9) 47ನೇ ವರ್ಷದ ಬರ್ತ್​​ಡೇ ಆಚರಿಸಿಕೊಂಡಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಹುಟ್ಟುಹಬ್ಬದ ಶುಭಾಶಯ ಬರುತ್ತಿದೆ. ಮಹೇಶ್ ಬಾಬು ಅವರು ಈ ವಯಸ್ಸಿನಲ್ಲೂ ಯಂಗ್​ ಆ್ಯಂಡ್ ಎನರ್ಜಿಟಿಕ್ ಆಗಿದ್ದಾರೆ. ವರ್ಷ ಕಳೆದಂತೆ ಅವರು ಇನ್ನೂ ಯಂಗ್ ಆಗುತ್ತಿದ್ದಾರೆ. ಮಹೇಶ್ ಬಾಬು ಸ್ಟಾರ್ ಹೀರೋ ಆದರೂ ಅವರಿಗೆ ಕುಟುಂಬವೇ ಜಗತ್ತು. ಕುಟುಂಬಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಬರ್ತ್​ಡೇ ಅಂಗವಾಗಿ ಅವರ ಪತ್ನಿ ನಮ್ರತಾ ಅವರು ಭಾವನಾತ್ಮಕ ಪತ್ರ ಹಂಚಿಕೊಂಡಿದ್ದಾರೆ.

ನಮ್ರತಾ ಹಾಗೂ ಮಹೇಶ್ ಬಾಬು ಅವರದ್ದು ಪ್ರೇಮ ವಿವಾಹ. ಮಹೇಶ್ ಬಾಬು ಅವರಿಗೆ ನಮ್ರತಾ ಬಗ್ಗೆ ಸಾಕಷ್ಟು ಪ್ರೀತಿ ಇದೆ. ಮಹೇಶ್​ ಬಾಬು ಕೂಡ ನಮ್ರತಾ ಹಾಗೂ ಕುಟುಂಬ ಮೇಲೆ ಅಪಾರ ಪ್ರೀತಿ ತೋರುತ್ತಾರೆ. ಮಹೇಶ್​ ಬಾಬು ವೃತ್ತಿಜೀವನಕ್ಕೆ ನಮ್ರತಾ ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರು ಪತಿಗೆ ಭವನಾತ್ಮಕ ಪತ್ರ ಬರೆದಿದ್ದು, ‘ನೀವು ನನ್ನ ಜಗತ್ತನ್ನು ಬೆಳಗಿದಿರಿ’ ಎಂದಿದ್ದಾರೆ.

‘ನೀವು ನನ್ನ ಜಗತ್ತನ್ನು ಬೆಳಗಿದಿರಿ. ಹ್ಯಾಪಿ ಬರ್ತ್​ಡೇ ಎಂಬಿ (ಮಹೇಶ್ ಬಾಬು). ಒಟ್ಟಾಗಿ ಕಳೆಯಲು ಇನ್ನಷ್ಟು ವರ್ಷಗಳು ಇವೆ. ಲವ್​ ಯೂ. ಈಗಲೂ, ಎಂದೆಂದಿಗೂ’ ಎಂದು ನಮ್ರತಾ ಬರೆದುಕೊಂಡಿದ್ದಾರೆ. ಅವರ ಪೋಸ್ಟ್​ಗೆ ನಾನಾ ಸೆಲೆಬ್ರಿಟಿಗಳು ಕಮೆಂಟ್ ಮಾಡಿ, ಮಹೇಶ್ ಬಾಬುಗೆ ಬರ್ತ್​​ಡೇ ವಿಶ್ ತಿಳಿಸಿದ್ದಾರೆ.

ಇದನ್ನೂ ಓದಿ
Image
ಸ್ವಿಜರ್​ಲ್ಯಾಂಡ್​ನಲ್ಲಿ ಕುಟುಂಬದ ಜತೆ ಸಮಯ ಕಳೆದ ಸಿತಾರಾ, ನಮ್ರತಾ; ಮಹೇಶ್ ಬಾಬು ಎಲ್ಲಿ ಎಂದ ಫ್ಯಾನ್ಸ್
Image
‘ಸಮಂತಾ ಆಂಟಿ ನನ್ನ ಬೆಸ್ಟ್​ ಫ್ರೆಂಡ್​’ ಎಂದ ಮಹೇಶ್​ ಬಾಬು ಪುತ್ರಿ ಸಿತಾರಾ; ವಿಡಿಯೋ ವೈರಲ್​
Image
ಹಿಂದಿ ಚಿತ್ರರಂಗದ ಎಂಟ್ರಿ ಬಗ್ಗೆ ಮಹೇಶ್​ ಬಾಬುಗೆ ಪದೇಪದೇ ಪ್ರಶ್ನೆ; ಅವರು ಕೊಟ್ಟ ಖಡಕ್ ಉತ್ತರ ಹೇಗಿತ್ತು ನೋಡಿ
Image
‘ಹೆಚ್ಚೆಚ್ಚು ಹೆಮ್ಮೆ ಪಡುವಂತೆ ಮಾಡುತ್ತಿದ್ದೀಯ’; ಮಗಳು ಸಿತಾರಾ ಬಗ್ಗೆ ಮಹೇಶ್​ ಬಾಬು ವಿಶೇಷ ಮಾತು

ಮಹೇಶ್ ಬಾಬು ಹಾಗೂ ನಮ್ರತಾ 2005, ಫೆಬ್ರವರಿ 10ರಂದು ಮದುವೆ ಆದರು. ಮದುವೆ ಬಳಿಕ ನಮ್ರತಾ ನಟನೆಯಿಂದ ಅಂತರ ಕಾಯ್ದುಕೊಂಡರು. ಈ ದಂಪತಿಗೆ ಸಿತಾರಾ ಹಾಗೂ ಗೌತಮ್ ಹೆಸರಿನ ಮಕ್ಕಳು ಇದ್ದಾರೆ.

ಇದನ್ನೂ ಓದಿ: ಅಪ್ಪನಿಗಾಗಿ ಪಾಪರಾಜಿ ಕೆಲಸ ಮಾಡಿದ ಮಹೇಶ್ ಬಾಬು ಮಗ ಗೌತಮ್

ಮಹೇಶ್ ಬಾಬು ಅವರು ಕುಟುಂಬದ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕುಟುಂಬದ ಎಲ್ಲಾ ಸದಸ್ಯರು ಈ ವೇಳೆ ಹಾಜರಿ ಹಾಕಿದ್ದರು.  ಮಹೇಶ್ ಬಾಬು ತಮ್ಮ 28ನೇ ಚಿತ್ರಕ್ಕಾಗಿ ರೆಡಿ ಆಗಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದಾದ ಬಳಿಕ ಅವರು ರಾಜಮೌಳಿ ಜತೆ ಕೈ ಜೋಡಿಸಲಿದ್ದಾರೆ.

Published On - 5:50 pm, Tue, 9 August 22

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!