Ileana D’Cruz: ಅಡ್ವಾನ್ಸ್​ ಹಣ ಪಡೆದು ಮೋಸ ಮಾಡಿದ ಆರೋಪ; ತಮಿಳು ಚಿತ್ರರಂಗದಲ್ಲಿ ನಟಿ ಇಲಿಯಾನಾ ಬ್ಯಾನ್​?

|

Updated on: Mar 10, 2023 | 3:28 PM

Tamil Film Industry | Kollywood News: ತಮಿಳು ಚಿತ್ರರಂಗದ ಜೊತೆ ಇಲಿಯಾನಾ ಡಿಕ್ರೂಜ್ ಅವರು ಒಡನಾಟ ಇಟ್ಟುಕೊಂಡಿದ್ದಾರೆ. ಆದರೆ ಈಗ ಅವರನ್ನು ಬ್ಯಾನ್​ ಮಾಡಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ.

Ileana DCruz: ಅಡ್ವಾನ್ಸ್​ ಹಣ ಪಡೆದು ಮೋಸ ಮಾಡಿದ ಆರೋಪ; ತಮಿಳು ಚಿತ್ರರಂಗದಲ್ಲಿ ನಟಿ ಇಲಿಯಾನಾ ಬ್ಯಾನ್​?
ಇಲಿಯಾನಾ ಡಿಕ್ರೂಜ್
Follow us on

ಖ್ಯಾತ ನಟಿ ಇಲಿಯಾನಾ ಡಿಕ್ರೂಜ್​ (Ileana D’Cruz) ಅವರು ಸಿನಿಮಾಗಳ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರ ಅಭಿಮಾನಿಗಳಿಗೆ ಬೇಸರ ಆಗುವಂತಹ ಒಂದು ಸುದ್ದಿ ಕೇಳಿಬಂದಿದೆ. ತಮಿಳು ಚಿತ್ರರಂಗದಲ್ಲಿ (Tamil Film Industry) ಇಲಿಯಾನಾ ಡಿಕ್ರೂಜ್​ ಅವರನ್ನು ಬ್ಯಾನ್​ ಮಾಡಲಾಗಿದೆ ಎಂದು ವರದಿ ಆಗಿದೆ. ಈ ಬಗ್ಗೆ ಯಾರೂ ಕೂಡ ಅಧಿಕೃತ ಹೇಳಿಕೆ ನೀಡಿಲ್ಲ. ಹಾಗಿದ್ದರೂ ಕೂಡ ತಮಿಳಿನ ಕೆಲವು ವೆಬ್​ಸೈಟ್​ಗಳಲ್ಲಿ ಈ ಸುದ್ದಿ ಪ್ರಕಟ ಆಗಿದೆ. ಕಾಲಿವುಡ್​ನ (Kollywood) ನಿರ್ಮಾಪಕರೊಬ್ಬರಿಂದ ಅಡ್ವಾನ್ಸ್​ ಹಣ ಪಡೆದು, ಶೂಟಿಂಗ್​ಗೆ ಹಾಜರಾಗದ ಹಿನ್ನೆಲೆಯಲ್ಲಿ ಇಲಿಯಾನಾ ಡಿಕ್ರೂಜ್​ ಅವರನ್ನು ಬ್ಯಾನ್​ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಬಾಲಿವುಡ್​ನಲ್ಲಿ ಇಲಿಯಾನಾ ಡಿಕ್ರೂಜ್​ ಅವರು ಹಲವು ಸಿನಿಮಾಗಳನ್ನು ಮಾಡಿದ್ದಾರೆ. ‘ಬರ್ಫಿ’, ‘ಬಾದ್​ಶಾಹೋ’, ‘ದಿ ಬಿಗ್​ ಬುಲ್​’, ‘ರುಸ್ತುಂ’ ಮುಂತಾದ ಸಿನಿಮಾಗಳಲ್ಲಿ ಅವರ ನಟನೆಯಲ್ಲಿ ನೋಡಿ ಫ್ಯಾನ್ಸ್​ ಇಷ್ಟಪಟ್ಟಿದ್ದಾರೆ. ದಕ್ಷಿಣ ಭಾರತದಲ್ಲೂ ಇಲಿಯಾನಾ ಡಿಕ್ರೂಜ್​ ಅವರು ನಟಿಸುವ ಮೂಲಕ ಇಲ್ಲಿನ ಅಭಿಮಾನಿಗಳಿಗೆ ಹತ್ತಿರ ಆಗಿದ್ದಾರೆ. ಆದರೆ ಅಡ್ವಾನ್ಸ್​ ಹಣ ಪಡೆದ ಮೋಸ ಮಾಡಿದ ಆರೋಪ ಅವರ ವಿರುದ್ಧ ಕೇಳಿಬಂದಿದೆ. ಅವರು ಶೂಟಿಂಗ್​ಗೆ ಬಾರದ ಕಾರಣ ನಿರ್ಮಾಪಕರಿಗೆ ಸಾಕಷ್ಟು ನಷ್ಟ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ: ನಟಿ ಇಲಿಯಾನಾ ಪ್ರೆಗ್ನೆಂಟ್​ ಆಗಿ ಗರ್ಭಪಾತ ಮಾಡಿಸಿಕೊಂಡಿದ್ದು ನಿಜವೇ? ಎಲ್ಲದಕ್ಕೂ ಸಿಕ್ತು ಈಗ ಉತ್ತರ

ಇದನ್ನೂ ಓದಿ
Ileana Dcruz: ಆಸ್ಪತ್ರೆಗೆ ದಾಖಲಾದ ಇಲಿಯಾನಾ ಡಿಕ್ರೂಸ್​; ಫೋಟೋ ಮೂಲಕ ಮಾಹಿತಿ ತಿಳಿಸಿದ ಖ್ಯಾತ ನಟಿ
ಕತ್ರಿನಾ ಸಹೋದರನ ಜತೆ ಇಲಿಯಾನಾ ಡಿಕ್ರೂಜ್ ಡೇಟಿಂಗ್? ಒಂದು ಫೋಟೋ ಮೂಲಕ ಹೊರಬಿತ್ತು ಸತ್ಯ
ನಟಿ ಇಲಿಯಾನಾ ಪ್ರೆಗ್ನೆಂಟ್​ ಆಗಿ ಗರ್ಭಪಾತ ಮಾಡಿಸಿಕೊಂಡಿದ್ದು ನಿಜವೇ? ಎಲ್ಲದಕ್ಕೂ ಸಿಕ್ತು ಈಗ ಉತ್ತರ
ನಟಿ ಇಲಿಯಾನ‌ ಪತಿ ಆ್ಯಂಡ್ಯೂ ನೀಬೋನ್ ಬ್ರೇಕಪ್ ಆಗಿದ್ಯಾಕೆ?

ಇಲಿಯಾನಾ ಡಿಕ್ರೂಜ್​ ವಿರುದ್ಧ ಆರೋಪ ಮಾಡಿರುವ ನಿರ್ಮಾಪಕರು ಯಾರು? ಅವರು ಒಪ್ಪಿಕೊಂಡಿದ್ದ ಸಿನಿಮಾ ಯಾವುದು ಎಂಬಿತ್ಯಾದಿ ವಿವರಗಳು ಇನ್ನಷ್ಟೇ ಹೊರಬರಬೇಕಿದೆ. ಈ ಆರೋಪಗಳ ಬಗ್ಗೆ ಶೀಘ್ರದಲ್ಲೇ ಇಲಿಯಾನಾ ಡಿಕ್ರೂಜ್​ ಅವರು ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಸಕ್ರಿಯರಾಗಿದ್ದಾರೆ. ಅಲ್ಲಿಯೇ ಅವರು ಸ್ಪಷ್ಟನೆ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ಕತ್ರಿನಾ ಸಹೋದರನ ಜತೆ ಇಲಿಯಾನಾ ಡಿಕ್ರೂಜ್ ಡೇಟಿಂಗ್? ಒಂದು ಫೋಟೋ ಮೂಲಕ ಹೊರಬಿತ್ತು ಸತ್ಯ

ತಮಿಳು ಚಿತ್ರರಂಗದ ಜೊತೆ ಇಲಿಯಾನಾ ಡಿಕ್ರೂಜ್ ಅವರು ಒಡನಾಟ ಇಟ್ಟುಕೊಂಡಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಕಾಲಿವುಡ್​ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. 2012ರಲ್ಲಿ ತೆರೆಕಂಡಿದ್ದ ‘ನನ್ಬನ್​’ ಸಿನಿಮಾದಲ್ಲಿನ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆ ಬಳಿಕ ಅವರು ತಮಿಳು ಸಿನಿಮಾದಲ್ಲಿ ಬಣ್ಣ ಹಚ್ಚಿಲ್ಲ.

ಆಸ್ಪತ್ರೆಗೆ ದಾಖಲಾಗಿದ್ದ ಇಲಿಯಾನಾ ಡಿಕ್ರೂಜ್​:

ಕೆಲವೇ ದಿನಗಳ ಹಿಂದೆ ಇಲಿಯಾನಾ ಡಿಕ್ರೂಜ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ಬೆಡ್​ನಲ್ಲಿ ಮಲಗಿರುವ  ಅವರು ತಮ್ಮ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರು. ಅವುಗಳನ್ನು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಹೆಲ್ತ್​ ಬಗ್ಗೆ ಅಪ್​ಡೇಟ್​ ನೀಡಿದ್ದರು. ಈಗ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.