ಹೇಗಿದೆ ‘ಡಾಕೂ ಮಹಾರಾಜ್’, ಸಿನಿಮಾ ನೋಡಿದವರು ಹೇಳಿರುವುದೇನು?
Daaku Maharaaj: ನಂದಮೂರಿ ಬಾಲಕೃಷ್ಣ ನಟನೆಯ ‘ಡಾಕೂ ಮಹಾರಾಜ್’ ಸಿನಿಮಾ ಇಂದು (ಜನವರಿ 12) ಬಿಡುಗಡೆ ಆಗಿದೆ. ಸಿನಿಮಾದ ಅರ್ಲಿ ಮಾರ್ನಿಂಗ್ ಶೋಗಳು ಹಲೆವೆಡೆ ಪ್ರದರ್ಶನಗೊಂಡಿವೆ. ಮೊದಲ ಶೋ ಸಿನಿಮಾ ನೋಡಿದ ಮಂದಿ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟ್ಟರ್ ವಿಮರ್ಶೆ ಪ್ರಕಾರ ‘ಡಾಕೂ ಮಹಾರಾಜ್’ ಸಿನಿಮಾ ಹೇಗಿದೆ?
ನಂದಮೂರಿ ಬಾಲಕೃಷ್ಣ ನಟನೆಯ ‘ಡಾಕೂ ಮಹಾರಾಜ್’ ಸಿನಿಮಾ ಇಂದು (ಜನವರಿ 12) ಬಿಡುಗಡೆ ಆಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸಿನಿಮಾ ತೆರೆಗೆ ಅಪ್ಪಳಿಸಿದೆ. ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ ಆಗಿ ಎರಡು ದಿನದ ಬಳಿ ಬಾಲಕೃಷ್ಣ ನಟನೆಯ ‘ಡಾಕೂ ಮಹಾರಾಜ್’ ಸಿನಿಮಾ ತೆರೆಗೆ ಬರುತ್ತಿದ್ದು. ಸಿನಿಮಾದ ಟ್ರೈಲರ್ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ‘ಡಾಕೂ ಮಹಾರಾಜ್’ ಸಿನಿಮಾದ ಅರ್ಲಿ ಮಾರ್ನಿಂಗ್ ಶೋಗಳು ಬೆಂಗಳೂರು ಸೇರಿದಂತೆ ಹಲವೆಡೆ ಪ್ರದರ್ಶನ ಕಂಡಿದ್ದವು. ಸಿನಿಮಾ ನೋಡಿದ ಮಂದಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು, ಸಿನಿಮಾದ ಟ್ವಿಟ್ಟರ್ ವಿಮರ್ಶೆ.
‘ಮೈನವಿರೇಳಿಸುವ ಸಿನಿಮಾ. ನಿರ್ಮಾಪಕ ನಾಗ ವಂಶಿ ಸರಿಯಾಗಿ ಭವಿಷ್ಯ ನುಡಿದಿದ್ದಾರೆ. ಇಂಟರ್ವೆಲ್ ಸೀನ್ಗೆ ಚಿತ್ರಮಂದಿರದ ಸೀಟುಗಳು ಕಿತ್ತು ಹೋಗುವಂತೆ ಅಬ್ಬರ ಎದ್ದಿತ್ತು. ತಮನ್ ಕೊಟ್ಟಿರುವ ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ನಿರ್ದೇಶನ ಅತ್ಯುತ್ತಮವಾಗಿದೆ. ‘ಜೈ ಬಾಲಯ್ಯ’ ಎಂದಿದ್ದಾರೆ ಟ್ವಿಟ್ಟರ್ ಬಳಕೆದಾರ ಈಶ್ವರ್ ತಡಿಪಲ್ಲಿ.
#DaakuMaharaaj Cinematography @KVijayKartik 🔥🔥👌 Forest scenes ki ayite pekadesadu.@MusicThaman pre interval to interval, transformation scenes duty🙏. @dirbobby best work.Emotions kuda correct meter lo set ayyay.
— azmacha (@SujithSai2) January 11, 2025
ಸುಜಿತ್ ಸಾಯಿ ಎಂಬುವರು ಟ್ವೀಟ್ ಮಾಡಿ, ‘ವಿಜಯ್ ಕಾರ್ತಿಕ್ ಅವರ ಸಿನಿಮಾಟೊಗ್ರಫಿ ಅತ್ಯುತ್ತಮವಾಗಿದೆ. ಅರಣ್ಯದಲ್ಲಿ ನಡೆಯುವ ಚೇಸ್, ಫೈಟ್ ದೃಶ್ಯಗಳು ಅತ್ಯುತ್ತಮವಾಗಿವೆ. ಇಂಟರ್ವೆಲ್ ದೃಶ್ಯದಲ್ಲಿ ತಮನ್ ನೀಡಿರುವ ಸಂಗೀತ ಅತ್ಯುತ್ತಮವಾಗಿದೆ. ಸಿನಿಮಾದ ಬರುವ ಆಕ್ಷನ್, ಚೇಸ್ನಷ್ಟೆ ಭಾವುಕ ದೃಶ್ಯಗಳು ಸಹ ಸಖತ್ ಆಗಿ ಸೂಟ್ ಆಗಿವೆ’ ಎಂದಿದ್ದಾರೆ ಸುಜಿತ್ ಸಾಯಿ.
ಇದನ್ನೂ ಓದಿ:ನಂದಮೂರಿ ಬಾಲಕೃಷ್ಣಗೆ ಇಲ್ಲ ಸಚಿವ ಸ್ಥಾನ, ಅಭಿಮಾನಿಗಳ ಬೇಸರ
ಗೋಕುಲ್ ಹೆಸರಿನ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು, ‘ರಜನೀಕಾಂತ್ಗೆ ‘ಜೈಲರ್’ ಸಿನಿಮಾ ಹೇಗೋ, ರಜನೀಕಾಂತ್ಗೆ ‘ಜೈಲರ್’ ಸಿನಿಮಾ ಹಾಗೆ’ ಎಂದಿದ್ದಾರೆ. ಸಿನಿ ವರ್ಲ್ಡ್ ಹೆಸರಿನ ಮತ್ತೊಂದು ಟ್ವಿಟ್ಟರ್ ಖಾತೆಯಲ್ಲಿ ‘ಡಾಕೂ ಮಹಾರಾಜ್ ಸಿನಿಮಾದ ಪ್ರಮುಖ ಅಂಶವೆಂದರೆ ಈ ಸಿನಿಮಾದಲ್ಲಿ ಅನವಶ್ಯಕವಾದದ್ದು ಏನೂ ಇಲ್ಲ. ನೋಡಲು ಮುಜುಗರ ಆಗುವ ಲವ್ ಸ್ಟೋರಿ ಇಲ್ಲ. ಅನವಶ್ಯಕ ಕಾಮಿಡಿ ಇಲ್ಲ. ಅನವಶ್ಯಕ ಎಲಿವೇಷನ್ ಸೀನ್ಗಳು ಇಲ್ಲ’ ಎಂದಿದ್ದಾರೆ.
Pure goosebumps ❤️🔥❤️🔥❤️🔥 #DaakuMaharaaj #DaakuMahaaraaj @vamsi84 man what you predict is 1000% correct!! Kurcholemu tagalapadipothunai theatres with this episode. @MusicThaman god of background!!! #JaiBalayya anthe!! Direction thope ❤️ pic.twitter.com/2v53taUFmq
— Telugabbai_ikada (@EshwarTadepalli) January 12, 2025
‘ಡಾಕೂ ಮಹಾರಾಜ್’ ಸಿನಿಮಾ ಅನ್ನು ಬಾಬಿ ಕೊಲ್ಲಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ನಾಗ ವಂಶಿ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಬಾಲಕೃಷ್ಣ ಎರಡು ಶೇಡ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಊರ್ವಶಿ ರೌಟೆಲಾ ಸಹ ಇದ್ದಾರೆ. ಬಾಲಕಿಯೊಬ್ಬಾಕೆಯನ್ನು ಕಾಪಾಡುವ ಪಾತ್ರದಲ್ಲಿ ಬಾಲಕೃಷ್ಣ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:17 am, Sun, 12 January 25