Hi Nanna: ‘ಹಾಯ್ ನಾನ್ನ’ ಎನ್ನುತ್ತಿದ್ದಾರೆ ನಾನಿ-ಮೃಣಾಲ್ ಠಾಕೂರ್; ತಂದೆ-ಮಗಳ ಬಾಂಧವ್ಯವೇ ಈ ಚಿತ್ರದ ಹೈಲೈಟ್
Mrunal Thakur: ನಾನಿ ನಟನೆಯ 30ನೇ ಚಿತ್ರಕ್ಕೆ ‘ಹಾಯ್ ನಾನ್ನ’ ಎಂದು ಶೀರ್ಷಿಕೆ ಇಡಲಾಗಿದೆ. ನಾನಿ ಮತ್ತು ಮೃಣಾಲ್ ಠಾಕೂರ್ ಕಾಂಬಿನೇಷನ್ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ.
ಮಾರ್ಚ್ ತಿಂಗಳಲ್ಲಿ ತೆರೆಕಂಡ ‘ದಸರಾ’ ಸಿನಿಮಾ ಗಮನ ಸೆಳೆಯಿತು. ಆ ಚಿತ್ರದ ಮೂಲಕ ಗೆಲುವು ಪಡೆದ ತೆಲುಗಿನ ‘ನ್ಯಾಚುರಲ್ ಸ್ಟಾರ್’ ನಾನಿ (Nani) ಅವರು ಈಗ ಹೊಸ ಸಿನಿಮಾದ ಕೆಲಸಗಳಲ್ಲಿ ಬ್ಯಸಿ ಆಗಿದ್ದಾರೆ. ಅವರು ಅಭಿನಯಿಸುತ್ತಿರುವ 30ನೇ ಸಿನಿಮಾಗೆ ಶೀರ್ಷಿಕೆ ಫಿಕ್ಸ್ ಆಗಿದೆ. ಆ ಬಗ್ಗೆ ಮಾಹಿತಿ ನೀಡಲಾಗಿದೆ. ಚಿಕ್ಕದೊಂದು ಝಲಕ್ ಮೂಲಕ ಚಿತ್ರತಂಡವು ಟೈಟಲ್ ಅನಾವರಣ ಮಾಡಿದೆ. ಈ ಸಿನಿಮಾದಲ್ಲಿ ನಾನಿ ಜೊತೆ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ (Mrunal Thakur) ಅವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಹಾಯ್ ನಾನ್ನ’ (Hi Nanna) ಎಂದು ಶೀರ್ಷಿಕೆ ಇಡಲಾಗಿದೆ.
ಅಂದಹಾಗೆ, ಇದು ಪ್ಯಾನ್ ಇಂಡಿಯಾ ಸಿನಿಮಾ. ತೆಲುಗಿನಲ್ಲಿ ‘ಹಾಯ್ ನಾನ್ನ’ ಎಂದರೆ ‘ಹಾಯ್ ಅಪ್ಪ’ ಎಂದರ್ಥ. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಒಂದೇ ಶೀರ್ಷಿಕೆ ಇರಲಿ ಎಂಬ ಉದ್ದೇಶದಿಂದ ಚಿತ್ರತಂಡವು ತಮಿಳು, ಮಲಯಾಳಂ, ಕನ್ನಡ ಭಾಷೆಯಲ್ಲಿ ‘ಹಾಯ್ ನಾನ್ನ’ ಎಂದೇ ಶೀರ್ಷಿಕೆ ಇಟ್ಟಿದೆ. ಟಾಲಿವುಡ್ನ ‘ಮೆಗಾ ಸ್ಟಾರ್’ ಚಿರಂಜೀವಿ ಅವರ ಆಶೀರ್ವಾದ ಪಡೆದು ಆರಂಭ ಆಗಿರುವ ಈ ಸಿನಿಮಾಗೆ ಶೌರ್ಯುವ್ ಅವರು ನಿರ್ದೇಶನ ಮಾಡುತ್ತಿದ್ದಾರೆ.
View this post on Instagram
ಶೌರ್ಯುವ್ ಅವರಿಗೆ ನಿರ್ದೇಶಕನಾಗಿ ‘ಹಾಯ್ ನಾನ್ನ’ ಮೊದಲ ಸಿನಿಮಾ ಆಗಲಿದೆ. ಹೊಸ ನಿರ್ದೇಶಕನ ಜೊತೆ ಸೇರಿ ನಾನಿ ಮತ್ತು ಮೃಣಾಲ್ ಠಾಕೂರ್ ಅವರು ಕೆಲಸ ಮಾಡುತ್ತಿದ್ದಾರೆ. ಶೀರ್ಷಿಕೆ ನೋಡಿದರೆ ಸಾಕು ಈ ಸಿನಿಮಾದ ಕಥೆ ಏನೆಂದು ಊಹಿಸಬಹುದು. ಇದೊಂದು ಎಮೋಷನಲ್ ಫ್ಯಾಮಿಲಿ ಎಂಟರ್ಟೇನ್ಮೆಂಟ್ ಇರುವ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ತಂದೆ ಮತ್ತು ಮಗಳ ಬಾಂಧವ್ಯದ ಸುತ್ತ ಹೆಣೆಯಲಾದ ಕಥೆಯನ್ನು ‘ಹಾಯ್ ನಾನ್ನ’ ಚಿತ್ರ ಒಳಗೊಂಡಿದೆ.
Mrunal Thakur: ಹೆಚ್ಚಾಯ್ತು ‘ಸೀತಾ ರಾಮಂ’ ನಟಿಯ ಸಂಬಳ; ಮೃಣಾಲ್ ಠಾಕೂರ್ಗೆ ಈಗ ಸಿಗುತ್ತಿರುವ ಹಣ ಎಷ್ಟು?
ಮೋಹನ್ ಚೆರುಕುರಿ, ಮೂರ್ತಿ ಕಲಗಾರ, ಡಾ. ವಿಜೇಂದ್ರ ರೆಡ್ಡಿ ಅವರು ‘ವೈರ ಎಂಟರ್ಟೇನ್ಮೆಂಟ್’ ಬ್ಯಾನರ್ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಸಾನೂ ಜಾನ್ ವರ್ಗೀಸ್ ISC ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ. ‘ಹೃದಯಂ’ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಅವರು ಸಂಗೀತ ನಿರ್ದೇಶನ ಮಾಡುತ್ತಿರುವುದು ವಿಶೇಷ. ಸಂಕಲನದ ಜವಾಬ್ದಾರಿಯನ್ನು ಪ್ರವೀಣ್ ಆಂಥೋನಿ ಅವರು ನಿಭಾಯಿಸುತ್ತಿದ್ದಾರೆ. ನಾನಿ ಮತ್ತು ಮೃಣಾಲ್ ಠಾಕೂರ್ ಕಾಂಬಿನೇಷನ್ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.