AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನರೇಶ್​ಗಾಗಿ ಸೆಟ್​ನಲ್ಲಿ ಪವಿತ್ರಾ ಅಡುಗೆ; ನಿತ್ಯವೂ ಬರುತ್ತೆ 40 ಕೆಜಿ ಕಿಚನ್ ಸಾಮಗ್ರಿ

ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರು ತೆಲುಗು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಪವಿತ್ರಾ ಅವರು ನರೇಶ್ ಅವರ ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದಾರೆ. ಅವರು ಪ್ರತಿ ದಿನ ಚಿತ್ರೀಕರಣದ ಸೆಟ್‌ಗೆ 40 ಕಿಲೋಗ್ರಾಂಗಳಷ್ಟು ಅಡುಗೆ ಸಾಮಗ್ರಿಗಳನ್ನು ತರುತ್ತಾರೆ ಮತ್ತು ಸ್ವತಃ ಅಡುಗೆ ಮಾಡಿ ನರೇಶ್ ಅವರಿಗೆ ಬಡಿಸುತ್ತಾರೆ.

ನರೇಶ್​ಗಾಗಿ ಸೆಟ್​ನಲ್ಲಿ ಪವಿತ್ರಾ ಅಡುಗೆ; ನಿತ್ಯವೂ ಬರುತ್ತೆ 40 ಕೆಜಿ ಕಿಚನ್ ಸಾಮಗ್ರಿ
ಪವಿತ್ರಾ-ನರೇಶ್
ರಾಜೇಶ್ ದುಗ್ಗುಮನೆ
|

Updated on: Apr 24, 2025 | 8:02 AM

Share

ನರೇಶ್ ಹಾಗೂ ಪವಿತ್ರಾ ಲೋಕೇಶ್ (Pavitra Lokesh) ಅವರು ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಪವಿತ್ರಾ ಅವರು ಕನ್ನಡದಲ್ಲೂ ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರು ಪತಿಯ ವೃತ್ತಿ ಜೀವನಕ್ಕೆ, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಈಗ ನರೇಶ್ ಅವರು ಒಂದು ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಅವರು ಹೋದಲ್ಲೆಲ್ಲ 40 ಕೆಜಿ ಕಿಚನ್ ಸಾಮಗ್ರಿಗಳು ಕೂಡ ಬರುತ್ತಿವೆ. ಸೆಟ್​ನಲ್ಲಿ ಅವರಿಗಾಗಿ ವಿಶೇಷ ಅಡುಗೆ ಸಿದ್ಧವಾಗುತ್ತಿದೆ. ಇದನ್ನು ಮಾಡೋದು ಪವಿತ್ರಾ ಅವರೇ ಅನ್ನೋದು ವಿಶೇಷ.

ನರೇಶ್ ಅವರಿಗೆ ಈಗ 65 ವರ್ಷ. ಈ ವಯಸ್ಸಿನಲ್ಲಿ ಅವರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹೊರಗಿನ ಆಹಾರಗಳಿಗೆ ಅವರು ಸಂಪೂರ್ಣವಾಗಿ ಬ್ರೇಕ್ ಹಾಕಿದ್ದಾರೆ. ಇದರ ಜೊತೆಗೆ ಅವರು ಮಿಸ್ ಮಾಡದೆ ವಾಕಿಂಗ್ ಮಾಡುತ್ತಾರೆ. ಜಿಮ್​ನಲ್ಲಿ ವರ್ಕೌಟ್ ಮಾಡುತ್ತಾರೆ. ಇದರ ಜೊತೆಗೆ ಸೆಟ್​ನಲ್ಲೇ ಮನೆಯ ಊಟ ಸವಿಯುತ್ತಿದ್ದಾರೆ.

ಸೆಟ್​ಗೆ ನಿತ್ಯ ಕಿಚನ್ ಸಾಮಗ್ರಿಗಳು ಬರುತ್ತವೆ. ಇದರಲ್ಲಿ ಕುಕ್ಕರ್, ಮಿಕ್ಸಿ, ಮಸಾಲೆ ಪಾದರ್ಥ, ಒಲೆ, ಗೋಧಿ ಹಿಟ್ಟು, ಅಕ್ಕಿ, ಉಪ್ಪಿನಕಾಯಿ ಇತ್ಯಾದಿ ಸೇರಿವೆ. ಪತಿಗಾಗಿ ಪವಿತ್ರಾ ಕೂಡ ಜೊತೆಗೆ ಬರುತ್ತಿದ್ದು, ಸೆಟ್​ನಲ್ಲೇ ಅಡುಗೆ ಮಾಡಿ ಬಡಿಸುತ್ತಿದ್ದಾರೆ. ಈ ಮೂಲಕ ಪತಿಯ ಆರೋಗ್ಯದ ಬಗ್ಗೆ ಅವರು ಹೆಚ್ಚು ಗಮನ ಹರಿಸುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ
Image
ಮಂತ್ರಾಲಯದ ಗರ್ಭಗುಡಿಯಲ್ಲಿ ಮಲಗಿದ್ದ ರಾಜ್​ಕುಮಾರ್; ಆ ಬಳಿಕ ನಡೆದಿದ್ದು ಏನು
Image
ರಾಜ್​ಕುಮಾರ್ ಮೊದಲ ಆಡಿಷನ್ ಹೇಗಿತ್ತು? ವಿವರಿಸಿದ್ದ ಅಣ್ಣಾವ್ರು
Image
ಪಹಲ್ಗಾಮ್ ದಾಳಿ ಬಗ್ಗೆ ಪಾಕ್ ನಟನ ಅಭಿಪ್ರಾಯವೇನು? ದೂಷಿಸಿದ್ದು ಯಾರನ್ನು?
Image
ರಾಜ್​ಕುಮಾರ್ ಜನ್ಮದಿನಕ್ಕೆ ಶಿವಣ್ಣನ ಹೊಸ ಸಿನಿಮಾ ಘೋಷಣೆ; ಟೈಟಲ್ ಏನು?

ನರೇಶ್ ಅವರಿಗೆ ಇತ್ತೀಚೆಗೆ ಕೆಲವು ಬಾರಿ ಫುಡ್ ಪಾಯ್ಸನ್ ಆಗಿತ್ತು. ಇದರಿಂದ ಅವರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಆಗಿದೆ. ಈ ಕಾರಣದಿಂದಲೇ ಮನೆಯ ಊಟದ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ.

ಇದನ್ನೂ ಓದಿ: ಅಮ್ಮನ ಪಾದಗಳ ಚಿನ್ನದಲ್ಲಿ ಮಾಡಿಸಿದ್ದಾರೆ ಪವಿತ್ರಾ ಲೊಕೇಶ್ ಬಾಯ್​ಫ್ರೆಂಡ್ ನರೇಶ್

ನರೇಶ್ ಹಾಗೂ ಪವಿತ್ರಾ ಒಟ್ಟಿಗೆ ಸಿನಿಮಾ ಮಾಡಿದವರು. ಇವರು ಒಟ್ಟಿಗೆ ಇದ್ದಾರೆ ಎನ್ನುವ ವಿಚಾರ ಸಾಕಷ್ಟು ಚರ್ಚೆ ಆಯಿತು. ನರೇಶ್ ಪತ್ನಿ ರಮ್ಯಾ ರಘುಪತಿ ಅವರು ಪತಿಯ ಬಗ್ಗೆ ಸಾಕಷ್ಟು ಆಕ್ರೋಶ ಹೊರಹಾಕಿದ್ದರು. ‘ನನಗೆ ನರೇಶ್ ವಿಚ್ಛೇದನ ನೀಡಿಲ್ಲ. ಹೀಗಾಗಿ, ಪವಿತ್ರಾ ಅವರನ್ನು ವಿವಾಹ ಆಗಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ಆದರೆ, ನರೇಶ್ ಮದುವೆ ಮೇಲೆ ನಂಬಿಕೆ ಹೊಂದಿಲ್ಲ. ಇಬ್ಬರೂ ಹಾಯಾಗಿ ಒಟ್ಟಿಗೆ ವಾಸಿಸುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್