AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

26 ವರ್ಷಗಳ ಬಳಿಕ ದಕ್ಷಿಣಕ್ಕೆ ಬರುತ್ತಿದ್ದಾರೆ ಬಾಲಿವುಡ್​​ ಹಿರಿಯ ನಟ

Naseeruddin Shah: ಬಾಲಿವುಡ್​​ನ ಸ್ಟಾರ್ ನಟರು ಸಹ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಲು ನಾ ಮುಂದು-ತಾ ಮುಂದು ಎಂದು ಬರುತ್ತಿದ್ದಾರೆ. ದಕ್ಷಿಣದ ಕಡೆಗೆ ತಲೆಯೇ ಹಾಕದಿದ್ದ ಸಲ್ಮಾನ್ ಖಾನ್, ಆಮಿರ್ ಖಾನ್, ಹೃತಿಕ್ ರೋಷನ್ ಅವರುಗಳೇ ಬಂದು ದಕ್ಷಿಣದಲ್ಲಿ ನಟಿಸಿ ಹೋಗಿದ್ದಾರೆ. ಇದೀಗ ಬಾಲಿವುಡ್​​ನಲ್ಲಿ ಅತ್ಯುತ್ತಮ ನಟ ಎಂಬ ಗೌರವ ಇರುವ ಹಿರಿಯ ನಟರೊಬ್ಬರು ಇದೀಗ ಬರೋಬ್ಬರಿ 26 ವರ್ಷಗಳ ಬಳಿಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಯಾರದು?

26 ವರ್ಷಗಳ ಬಳಿಕ ದಕ್ಷಿಣಕ್ಕೆ ಬರುತ್ತಿದ್ದಾರೆ ಬಾಲಿವುಡ್​​ ಹಿರಿಯ ನಟ
Naseerudhin Shah
ಮಂಜುನಾಥ ಸಿ.
|

Updated on: Jul 09, 2026 | 7:10 PM

Share

ಬಾಲಿವುಡ್ (Bollywood) ನಟರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದು ಇತ್ತೀಚೆಗಂತೂ ಬಹಳ ಹೆಚ್ಚಾಗಿದೆ. ಬಾಲಿವುಡ್​​ನ ಸ್ಟಾರ್ ನಟರು ಸಹ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಲು ನಾ ಮುಂದು-ತಾ ಮುಂದು ಎಂದು ಬರುತ್ತಿದ್ದಾರೆ. ದಕ್ಷಿಣದ ಕಡೆಗೆ ತಲೆಯೇ ಹಾಕದಿದ್ದ ಸಲ್ಮಾನ್ ಖಾನ್, ಆಮಿರ್ ಖಾನ್, ಹೃತಿಕ್ ರೋಷನ್ ಅವರುಗಳೇ ಬಂದು ದಕ್ಷಿಣದಲ್ಲಿ ನಟಿಸಿ ಹೋಗಿದ್ದಾರೆ. ಇದೀಗ ಬಾಲಿವುಡ್​​ನಲ್ಲಿ ಅತ್ಯುತ್ತಮ ನಟ ಎಂಬ ಗೌರವ ಇರುವ ಹಿರಿಯ ನಟರೊಬ್ಬರು ಇದೀಗ ಬರೋಬ್ಬರಿ 26 ವರ್ಷಗಳ ಬಳಿಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಅವರೇ ನಾಸಿರುದ್ಧೀನ್ ಶಾ.

ಬಾಲಿವುಡ್​​ನ ಅತ್ಯುತ್ತಮ ಪ್ರತಿಭೆಗಳಲ್ಲಿ ನಸಿರುದ್ಧೀನ್ ಶಾ ಪ್ರಮುಖರು. ನಾಟಕರಂಗದಿಂದ ಸಿನಿಮಾಕ್ಕೆ ಬಂದ ನಸೀರುದ್ಧೀನ್ ಶಾ ತಮ್ಮ ನಟನೆಯಿಂದ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಕಮರ್ಶಿಯಲ್, ಆರ್ಟ್, ಬಿಜ್ ಯಾವ ರೀತಿಯ ಸಿನಿಮಾ ಆದರೂ ಲೀಲಾಜಾಲವಾಗಿ ನಟಿಸಬಲ್ಲ ನಸೀರುದ್ಧೀನ್ ಶಾ ಈ ವರೆಗೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಲಿವುಡ್​​ನಲ್ಲೂ ಸಹ ನಟಿಸಿ ಬಂದಿದ್ದಾರೆ. ಅವರೀಗ 26 ವರ್ಷಗಳ ಬಳಿಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಅಂದಹಾಗೆ ನಸಿರುದ್ಧೀನ್ ಶಾ ಅವರು ಕನ್ನಡದ ಎರಡು ಸಿನಿಮಾನಲ್ಲೂ ನಟಿಸಿದ್ದಾರೆ.

ಇದೀಗ ನಸಿರುದ್ಧೀನ್ ಶಾ ಅವರು ತಮಿಳಿನ ‘ಓಂ’ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಓಂ ಸಿನಿಮಾನಲ್ಲಿ ಧನುಶ್ ನಾಯಕನಾಗಿ ನಟಿಸುತ್ತಿದ್ದು, ಸಿನಿಮಾ ನಿರ್ದೇಶನ ಮಾಡಲಿರುವುದು ರಾಜಕುಮಾರ್ ಪೆರಿಸ್ವಾಮಿ. ಈ ಹಿಂದೆ ‘ಅಮರನ್’ ಹೆಸರಿನ ಸೂಪರ್ ಹಿಟ್ ಸಿನಿಮಾ ನಿರ್ದೇಶಿಸಿದ್ದ ರಾಜಕುಮಾರ್ ಪೆರಿಸ್ವಾಮಿ ಅವರು ಈಗ ಧನುಶ್ ನಟನೆಯ ‘ಓಂ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ:ಶ್ರೀನಗರ ಕಿಟ್ಟಿ ನಟನೆಯ ‘ವೇಷಗಳು’ ಸಿನಿಮಾದ ವಿಶೇಷ ಹಾಡು ಬಿಡುಗಡೆ

ನಸಿರುದ್ಧೀನ್ ಶಾ ಅವರು ಈ ಹಿಂದೆ 2000 ರಲ್ಲಿ ಬಿಡುಗಡೆ ಆಗಿದ್ದ ಕಮಲ್ ಹಾಸನ್ ನಟಿಸಿ ನಿರ್ದೇಶನ ಮಾಡಿದ್ದ ‘ಹೇ ರಾಮ್’ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾನಲ್ಲಿ ಶಾರುಖ್ ಖಾನ್ ಸಹ ನಟಿಸಿದ್ದಾರೆ. ಆ ಸಿನಿಮಾದ ಬಳಿಕ ನಸಿರುದ್ಧೀನ್ ಶಾ ಅವರು ದಕ್ಷಿಣದ ಇನ್ಯಾವ ಸಿನಿಮಾಗಳಲ್ಲಿಯೂ ನಟಿಸಿರಲಿಲ್ಲ. ಇದೀಗ 26 ವರ್ಷಗಳ ಬಳಿಕ ಅವರು ದಕ್ಷಿಣ ಭಾರತ ಚಿತ್ರರಂಗಕ್ಕೆ ಮರಳಿದ್ದಾರೆ.

ನೂರಾರು ಸಿನಿಮಾಗಳಲ್ಲಿ ನಟಿಸಿ, ಹಲವಾರು ಪ್ರಶಸ್ತಿಗಳನ್ನು ಗಳಿಸಿರುವ ನಸಿರುದ್ಧೀನ್ ಶಾ ಅವರು ಕನ್ನಡದ ಒಂದು ಸಿನಿಮಾನಲ್ಲಿಯೂ ನಟಿಸಿದ್ದಾರೆ. ಗಿರೀಶ್ ಕಾರ್ನಾಡ್ ಮತ್ತು ಬಿವಿ ಕಾರಂತರು ನಿರ್ದೇಶನ ಮಾಡಿದ್ದ 1977 ರಲ್ಲಿ ತೆರೆ ಕಂಡಿದ್ದ ಕ್ರಾಂತಿಕಾರಿ ಸಿನಿಮಾ ‘ತಬ್ಬಲಿಯು ನೀನಾದೆ ಮಗನೆ’ ಸಿನಿಮಾನಲ್ಲಿ ನಸಿರುದ್ಧೀನ್ ಶಾ ನಟಿಸಿದ್ದರು. ಅದೇ ಸಿನಿಮಾನಲ್ಲಿ ಬಾಲಿವುಡ್ ನಟರಾದ ಓಂ ಪುರಿ, ಮಾನು ಅವರುಗಳು ಸಹ ನಟಿಸಿದ್ದರು. ಅದಾದ ಬಳಿಕ 1990 ರಲ್ಲಿ ಬಿಡುಗಡೆ ಆದ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಮನೆ’ ಸಿನಿಮಾನಲ್ಲಿಯೂ ನಾಸಿರುದ್ಧೀನ್ ಶಾ ನಟಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us