ಐಸ್ ಬಾತ್ ಮಾಡಿದ ನಟಿ ನೇಹಾ ಶರ್ಮಾ; ಎಲ್ಲರಿಗೂ ಬಟ್ಟೆಯ ಮೇಲೆ ಕಣ್ಣು

| Updated By: ರಾಜೇಶ್ ದುಗ್ಗುಮನೆ

Updated on: Jun 01, 2024 | 8:09 AM

ನೇಹಾ ಶರ್ಮಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2007ರಲ್ಲಿ. ‘ಚಿರುತಾ’ ಅವರ ನಟನೆಯ ಮೊದಲ ಸಿನಿಮಾ. ಇದು ತೆಲುಗು ಸಿನಿಮಾ ಆಗಿತ್ತು. ‘ತೆರಿ ಮೇರಿ ಕಹಾನಿ’ ಚಿತ್ರದ ಮೂಲಕ ಅವರು ಹಿಂದಿ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಸಾಕಷ್ಟು ಹಿಂದಿ ಚಿತ್ರಗಳಲ್ಲಿ ನೇಹಾ ಶರ್ಮಾ ನಟಿಸಿದ್ದಾರೆ. ಈಗ ನೇಹಾ ಶರ್ಮಾ ಅವರು ಬಿಡುವಿನಲ್ಲಿ ಐಸ್ ಬಾತ್ ಮಾಡಿದ್ದಾರೆ.

ಐಸ್ ಬಾತ್ ಮಾಡಿದ ನಟಿ ನೇಹಾ ಶರ್ಮಾ; ಎಲ್ಲರಿಗೂ ಬಟ್ಟೆಯ ಮೇಲೆ ಕಣ್ಣು
ನೇಹಾ
Follow us on

ಇತ್ತೀಚೆಗೆ ಬಾಲಿವುಡ್ ಸೆಲೆಬ್ರಿಟಿಗಳು ಐಸ್ ಬಾತ್ ಮಾಡೋಕೆ ಹೆಚ್ಚು ಆದ್ಯತೆ ಕೊಡುತ್ತಿದ್ದಾರೆ. ಟಬ್​ನಲ್ಲಿ ಐಸ್ ಇರುತ್ತದೆ. ಅದರಲ್ಲಿ ಅವರು ಕೆಲ ಹೊತ್ತು. ಇದರಿಂದ ದೇಹಕ್ಕೆ ಸಾಕಷ್ಟು ಲಾಭ ಇದೆ ಎನ್ನುತ್ತದೆ ವೈದ್ಯ ಲೋಕ. ಈಗ ನಟಿ ನೇಹಾ ಶರ್ಮಾ (Neha Sharma) ಅವರು ಕೂಡ ಐಸ್ ಬಾತ್ ಮಾಡಿದ್ದಾರೆ. ಈ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರ ಕಣ್ಣು ಅವರ ಬಟ್ಟೆಯ ಮೇಲೆ ಹೋಗಿದೆ.

ನೇಹಾ ಶರ್ಮಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2007ರಲ್ಲಿ. ‘ಚಿರುತಾ’ ಅವರ ನಟನೆಯ ಮೊದಲ ಸಿನಿಮಾ. ಇದು ತೆಲುಗು ಸಿನಿಮಾ ಆಗಿತ್ತು. ‘ತೆರಿ ಮೇರಿ ಕಹಾನಿ’ ಚಿತ್ರದ ಮೂಲಕ ಅವರು ಹಿಂದಿ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಸಾಕಷ್ಟು ಹಿಂದಿ ಚಿತ್ರಗಳಲ್ಲಿ ನೇಹಾ ಶರ್ಮಾ ನಟಿಸಿದ್ದಾರೆ. ಈ ವರ್ಷ ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಈಗ ನೇಹಾ ಶರ್ಮಾ ಅವರು ಬಿಡುವಿನಲ್ಲಿ ಐಸ್ ಬಾತ್ ಮಾಡಿದ್ದಾರೆ.

ಟಬ್ ಒಂದರಲ್ಲಿ ಐಸ್ ನೀರನ್ನು ಇಡಲಾಗಿದೆ. ಸ್ವಿಮ್ ಸ್ಯೂಟ್ ಹಾಕಿ ಅವರು ಐಸ್ ಬಾತ್ ಮಾಡಿದ್ದಾರೆ.  ಅವರಿಗೆ ಐಸ್​ನಲ್ಲಿ ಸ್ನಾನ ಮಾಡಬೇಕು ಎನ್ನುವ ಯಾವುದೇ ಉದ್ದೇಶ ಇರಲಿಲ್ಲ. ಆದರೆ, ಅವರ ಫ್ರೆಂಡ್ಸ್ ಇದಕ್ಕೆ ಒತ್ತಾಯ ಮಾಡಿದರು. ಮೊದಲ ಬಾರಿಗೆ ನೀರಿಗೆ ಇಳಿದ ಅವರು, ನಂತರ ಎದ್ದು ಬಂದರು. ಆದರೆ, ಅವರ ಫ್ರೆಂಡ್ಸ್ ಬಿಡಲಿಲ್ಲ. ಒತ್ತಾಯ ಮಾಡಿದರು. ಕೊನೆಗೆ ಅವರು ಸ್ನಾನ ಮಾಡೋಕೆ ಒಪ್ಪಿದರು. ಕೊನೆಗೂ ಅವರು ನೀರಿಗೆ ಇಳಿದರು. ಕೆಲ ಹೊತ್ತು ಅವರು ನೀರಿನಲ್ಲಿ ಮುಳುಗಿದ್ದರು.

ಇದನ್ನೂ ಓದಿ: ಹಾಟ್​ ಫೋಟೋ ಮೂಲಕ ಟೆಂಪ್ರೇಚರ್ ಹೆಚ್ಚಿಸಿದ ನಟಿ ನೇಹಾ ಶರ್ಮಾ

ನೇಹಾ ಶರ್ಮಾ ಅವರು ತಮ್ಮ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ನಿಜಕ್ಕೂ ಈ ಸ್ನಾನ ಅದ್ಭುತ. ಎಲ್ಲರೂ ಒಮ್ಮೆ ಮಾಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ. ಸದ್ಯ ಈ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ.

ಐಸ್​ ಬಾತ್​ನ ಲಾಭಗಳೇನು?

ಈ ಸ್ನಾನದಿಂದ ಸಾಕಷ್ಟು ಲಾಭಗಳಿವೆ. ನಿಮ್ಮ ದೇಹದ ಟೆಂಪ್ರೇಚರ್​ನ ಇದು ಕಡಿಮೆ ಮಾಡುತ್ತದೆ. ಇದರಿಂದ ರಕ್ತ ನಿಮ್ಮ ಕೋರ್​ಗೆ ಹೋಗುತ್ತದೆ. ಐಸ್ ಬಾತ್ ಬಳಿಕ ದೇಹದ ಟೆಂಪ್ರೇಚರ್ ಹೆಚ್ಚುತ್ತದೆ. ಆಗ ಮರಳಿ ರಕ್ತ ನಿಮ್ಮ ದೇಹದ ಟಿಶ್ಯೂಗಳಿಗೆ ಮರಳುತ್ತದೆ. ಈ ಸ್ನಾನದಿಂದ ದೇಹದಲ್ಲಿರುವ ನೋವು ಕಡಿಮೆ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.