AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಂ ಇಂಡಿಯಾ ಕ್ರಿಕೆಟರ್​ ಜೊತೆ ಕಿರುತೆರೆ ನಟಿ ರಿಧಿಮಾ ಮದುವೆ? ವಯಸ್ಸಿನ ಅಂತರ 9 ವರ್ಷ

ರಿಧಿಮಾ ಬಣ್ಣದ ಲೋಕಕ್ಕೆ ಬಂದು 8 ವರ್ಷಗಳು ಕಳೆದಿವೆ. ‘ಬಹು ಹಮಾರಿ ರಜ್ನಿ ಕಾಂತ್’ ಅವರ ನಟನೆಯ ಮೊದಲ ಧಾರಾವಾಹಿ. ಇದು 2016ರಲ್ಲಿ ಪ್ರಸಾರ ಕಂಡಿತು. ಆ ಬಳಿಕ ಅವರು ಹಲವು ಹಿಂದಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅವರಿಗೆ ಕೆಲವು ಅವಾರ್ಡ್​ಗಳು ಬಂದಿವೆ. ಅವರ ಮದುವೆ ವಿಚಾರ ಚರ್ಚೆ ಜೋರಾಗಿದೆ.

ಟೀಂ ಇಂಡಿಯಾ ಕ್ರಿಕೆಟರ್​ ಜೊತೆ ಕಿರುತೆರೆ ನಟಿ ರಿಧಿಮಾ ಮದುವೆ? ವಯಸ್ಸಿನ ಅಂತರ 9 ವರ್ಷ
ರಿಧಿಮಾ-ಶುಭ್​ಮನ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Jun 01, 2024 | 9:34 AM

Share

ಕಿರುತೆರೆ ನಟಿ ರಿಧಿಮಾ ಪಂಡಿತ್ (Ridhima Pandit) ಹಾಗೂ ಟೀಂ ಇಂಡಿಯಾ ಆಟಗಾರ ಶುಭ್​ಮನ್ ಗಿಲ್ ವಿವಾಹ ಆಗಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿದೆ. ಈ ಗಾಳಿ ಸುದ್ದಿಯನ್ನು ಮೊದಲು ಹರಿಬಿಟ್ಟವರು ಯಾರು ಎಂಬುದು ಗೊತ್ತಿಲ್ಲ. ಆದರೆ, ಈ ಬಗ್ಗೆ ಚರ್ಚೆಯಂತೂ ಜೋರಿದೆ. 2024ರ ಡಿಸೆಂಬರ್​ನಲ್ಲಿ ಇವರ ಮದುವೆ ನಡೆಯಲಿದೆ ಎಂದು ಕೂಡ ಹೇಳಲಾಗಿತ್ತು. ಅಚ್ಚರಿ ಎಂದರೆ ಇಬ್ಬರ ಮಧ್ಯೆ ವಯಸ್ಸಿನ ಅಂತರ 9 ವರ್ಷ. ರಿಧಿಮಾಗೆ 33 ವರ್ಷ. ಶುಭ್​ಮನ್​ಗೆ 24 ವರ್ಷ. ಈ ಮದುವೆ ವದಂತಿಗೆ ರಿಧಿಮಾ ಅವರೇ ಸ್ಪಷ್ಟನೆ ನೀಡಿದ್ದಾರೆ. ಇದರಲ್ಲಿ ಯಾವುದೇ ಸತ್ಯ ಇಲ್ಲ ಎಂದಿದ್ದಾರೆ.

ರಿಧಿಮಾ ಬಣ್ಣದ ಲೋಕಕ್ಕೆ ಬಂದು 8 ವರ್ಷಗಳು ಕಳೆದಿವೆ. ‘ಬಹು ಹಮಾರಿ ರಜ್ನಿ ಕಾಂತ್’ ಅವರ ನಟನೆಯ ಮೊದಲ ಧಾರಾವಾಹಿ. ಇದು 2016ರಲ್ಲಿ ಪ್ರಸಾರ ಕಂಡಿತು. ಆ ಬಳಿಕ ಅವರು ಹಲವು ಹಿಂದಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅವರಿಗೆ ಕೆಲವು ಅವಾರ್ಡ್​ಗಳು ಬಂದಿವೆ. ರಿಧಿಮಾಗೆ 33 ವರ್ಷ ವಯಸ್ಸು. ಅವರು ಶುಭ್​ಮನ್ ಜೊತೆ ಮದುವೆ ಆಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ಅವರು ಸುಳ್ಳು ಎಂದಿದ್ದಾರೆ.

‘ನಾನು ಮುಂಜಾನೆ ಎದ್ದೆ. ನನಗೆ ಪತ್ರಕರ್ತರಿಂದ ಹಲವು ಫೋನ್​ಕಾಲ್​ಗಳು ಬಂದವು. ನನ್ನ ಮದುವೆ ಬಗ್ಗೆ ಪ್ರಶ್ನೆ ಕೇಳಲಾಯಿತು. ಒಂದೊಮ್ಮೆ ನನ್ನ ಜೀವನದಲ್ಲಿ ಏನಾದರೂ ಮುಖ್ಯವಾದುದ್ದು ಘಟಿಸುತ್ತಿದೆ ಎಂದಾದರೆ ನಾನೇ ಬಂದು ಘೋಷಣೆ ಮಾಡುತ್ತೇನೆ. ಈಗ ಹರಿದಾಡುತ್ತಿರುವುದರಲ್ಲಿ ಯಾವುದೇ ನಿಜವಿಲ್ಲ’ ಎಂದಿದ್ದಾರೆ ಅವರು.

ರಿಧಿಮಾ ಪಂಡಿತ್ ಅವರ ಈ ಸ್ಪಷ್ಟನೆಯಿಂದ ಶುಭ್​ಮನ್ ಗಿಲ್ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಇದಕ್ಕೆ ಕಾರಣವೂ ಇದೆ. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡಲ್ಕೂರ್ ಜೊತೆ ಶುಭ್​ಮನ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಒಂದೇ ಹೋಟೆಲ್​ನಲ್ಲಿ ಇವರು ಕೆಲವು ಬಾರಿ ಕಾಣಿಸಿಕೊಂಡಿದ್ದು ಇದೆ. ಈ ಕಾರಣಕ್ಕೆ ಅವರು ಸಾಕಷ್ಟು ಚರ್ಚೆ ಆಗಿದ್ದರು. ರಿಧಿಮಾ ಜೊತೆಗಿನ ಮದುವೆ ವಿಚಾರದ ಬಳಿಕ ಶುಭ್​ಮನ್ ಹಾಗೂ ಸಾರಾ ಅವರದ್ದು ಬ್ರೇಕಪ್ ಆಯಿತೇ ಎನ್ನುವ ಪ್ರಶ್ನೆ ಮೂಡಿತ್ತು.

ಇದನ್ನೂ ಓದಿ: ಟಿ20 ವಿಶ್ವಕಪ್ ತಂಡದಲ್ಲಿಲ್ಲ ಸ್ಥಾನ: ಸ್ಫೋಟಕ ಶತಕದ ನಂತರ ಶುಭ್​ಮನ್ ಗಿಲ್ ಸಂಭ್ರಮಿಸಿದ್ದು ಹೇಗೆ ನೋಡಿ

ಶುಭ್​ಮನ್ ಅವರ ಹೆಸರು ಈ ರೀತಿ ಚರ್ಚೆ ಆಗುತ್ತಿರುವುದು ಇದೇ ಮೊದಲೇನು ಅಲ್ಲ. ‘ರಶ್ಮಿಕಾ ಮಂದಣ್ಣ ಮೇಲೆ ನನಗೆ ಕ್ರಶ್ ಇದೆ’ ಎಂದು ಅವರು ಹೇಳಿಕೊಂಡಿದ್ದಾಗಿ ವರದಿ ಆಗಿತ್ತು. ಆ ಬಳಿಕ ಅವರು ಆ ಹೇಳಿಕೆಯನ್ನೇ ಅಲ್ಲಗಳೆದರು. ಆ ರೀತಿಯ ಹೇಳಿಕೆಯನ್ನು ನಾನು ನೀಡಲೇ ಇಲ್ಲ ಎಂದು ಅವರು ಹೇಳಿಕೊಂಡಿದ್ದರು. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:05 am, Sat, 1 June 24