ಚಿರಂಜೀವಿ ಮನೆಮಗಳ ಸಂಸಾರದಲ್ಲಿ ಬಿರುಗಾಳಿ; ಡಿವೋರ್ಸ್​ ಸುದ್ದಿಗೆ ಸಿಕ್ತು ಬಲವಾದ ಸಾಕ್ಷಿ

Niharika Konidela: ನಿಹಾರಿಕಾ ಕೊನಿಡೆಲಾ ಅವರು ಕೊನೆಗೂ ಗಟ್ಟಿ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತಿದೆ. ಈ ಬಗ್ಗೆ ಅವರು ಅಧಿಕೃತವಾಗಿ ಘೋಷಿಸುವುದೊಂದೇ ಬಾಕಿ ಇದೆ.

ಚಿರಂಜೀವಿ ಮನೆಮಗಳ ಸಂಸಾರದಲ್ಲಿ ಬಿರುಗಾಳಿ; ಡಿವೋರ್ಸ್​ ಸುದ್ದಿಗೆ ಸಿಕ್ತು ಬಲವಾದ ಸಾಕ್ಷಿ
ನಿಹಾರಿಕಾ ಕೊನಿಡೆಲ್ಲಾ

Updated on: Apr 11, 2023 | 10:49 AM

​ಸೆಲೆಬ್ರಿಟಿಗಳ ಬದುಕಿನಲ್ಲಿ ವಿಚ್ಛೇದನ ತೀರಾ ಕಾಮನ್​ ಎಂಬಂತಾಗಿದೆ. ಟಾಲಿವುಡ್​ ನಟಿ, ನಿರ್ಮಾಪಕಿ ನಿಹಾರಿಕಾ ಕೊನಿಡೆಲಾ (Niharika Konidela)  ಕೂಡ ಡಿವೋರ್ಸ್​ ಪಡೆಯುತ್ತಾರೆ ಎಂಬ ಸುದ್ದಿ ಹಬ್ಬಿದೆ. ಅದಕ್ಕೆ ಸಾಕ್ಷಿ ನೀಡುವಂತಹ ಘಟನೆಗಳು ಸಹ ನಡೆಯುತ್ತಿವೆ. ‘ಮೆಗಾ ಸ್ಟಾರ್​’ ಚಿರಂಜೀವಿ ಸಹೋದರ ನಾಗೇಂದ್ರ ಬಾಬು (Nagendra Babu) ಅವರ ಪುತ್ರಿಯಾದ ನಿಹಾರಿಕಾ ಅವರು 2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಆದರೆ ಅವರ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಈ ಬಗ್ಗೆ ಯಾರೂ ಕೂಡ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಆದರೂ ಸಹ ವಿಚ್ಛೇದನದ (Divorce) ವಾಸನೆ ಬರುತ್ತಿದೆ. ಅದಕ್ಕೆ ಕಾರಣ ಆಗಿರುವುದು ನಿಹಾರಿಕಾ ಕೊನಿಡೆಲಾ ಅವರ ಸೋಶಿಯಲ್​ ಮೀಡಿಯಾ ಚಟುವಟಿಕೆಗಳು. ಪತಿ ಜೊನ್ನಲಗಡ್ಡ ವೆಂಕಟ ಚೈತನ್ಯ ಅವರ ಇನ್​ಸ್ಟಾಗ್ರಾಮ್​ ಖಾತೆಯನ್ನು ನಿಹಾರಿಕಾ ಅನ್​ಫಾಲೋ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಗಂಡನಿಗೆ ಸಂಬಂಧಿಸಿದ ಎಲ್ಲ ಫೋಟೋಗಳನ್ನೂ ಡಿಲೀಟ್​ ಮಾಡಿದ್ದಾರೆ. ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ನಿಹಾರಿಕಾ ಕೊನಿಡೆಲಾ ಮತ್ತು ವೆಂಕಟ ಚೈತನ್ಯ ನಡುವೆ ವೈಮನಸ್ಸು ಉಂಟಾಗಿದೆ ಎಂಬುದಕ್ಕೆ ಒಂದಷ್ಟು ದಿನಗಳ ಹಿಂದೆಯೇ ಸಾಕ್ಷಿ ಸಿಕ್ಕಿತ್ತು. ವೆಂಕಟ ಚೈತನ್ಯ ಅವರು ನಿಹಾರಿಕಾರನ್ನು ಅನ್​ಫಾಲೋ ಮಾಡಿದ್ದರು. ಜೊತೆಗೆ ಮದುಗೆ ಹಾಗೂ ಎಂಗೇಜ್​ಮೆಂಟ್​ ಫೋಟೋಗಳನ್ನು ಡಿಲೀಟ್​ ಮಾಡಿದ್ದರು. ಆದರೂ ಕೂಡ ನಿಹಾರಿಕಾ ಅವರು ಸೈಲೆಂಟ್​ ಆಗಿದ್ದರು. ಆದರೆ ಈಗ ಅವರು ಕೂಡ ಗಂಡನನ್ನು ಅನ್​ಫಾಲೋ ಮಾಡಿ, ಫೋಟೋಸ್​ ತೆಗೆದುಹಾಕಿರುವುದು ಡಿವೋರ್ಸ್​ ಅನುಮಾನಕ್ಕೆ ಪುಷ್ಠಿ ನೀಡಿದೆ.

ಇದನ್ನೂ ಓದಿ: ಮೂರನೇ ಪತ್ನಿಗೆ ವಿಚ್ಛೇದನ ಕೊಡದೆ ನಾಲ್ಕನೇ ಮದುವೆ ಆದ ನರೇಶ್​; ಕಾನೂನು ತೊಡಕುಗಳೇನು?

ಇದನ್ನೂ ಓದಿ
ಸಲ್ಲು ಸಹೋದರ ಸೊಹೈಲ್​-ಸೀಮಾ ವಿಚ್ಛೇದನ; ರಾತ್ರೋರಾತ್ರಿ ಓಡಿಹೋಗಿ ಮದುವೆ ಆಗಿದ್ದ ಜೋಡಿಯ ಪ್ರೇಮ ಕಹಾನಿ ಇಲ್ಲಿದೆ
‘ಡಿವೋರ್ಸ್​ ಆಗಿರಬಹುದು, ಆದ್ರೆ ಜೊತೆಗಿದ್ದೇವೆ’; ಇಬ್ಬರು ಮಾಜಿ ಪತ್ನಿಯರ ಬಗ್ಗೆ ಮಾತಾಡಿದ ಆಮಿರ್​ ಖಾನ್​
ವಿಚ್ಛೇದನದ ಬಳಿಕ ಅಕ್ಕಿನೇನಿ ಕುಟುಂಬಕ್ಕೆ ಸಮಂತಾ ಹಿಂದಿರುಗಿಸಿದರು ಒಂದು ಪ್ರಮುಖ ವಸ್ತು; ಏನದು?
ಚಿತ್ರರಂಗದಲ್ಲಿ ಮುಂದುವರಿದ ವಿಚ್ಛೇದನ ಸರಣಿ; ಖ್ಯಾತ ನಿರ್ದೇಶಕನ ಡಿವೋರ್ಸ್​

ಮೆಗಾ ಸ್ಟಾರ್​ ಚಿರಂಜೀವಿ ಅವರದ್ದು ಪ್ರತಿಷ್ಠಿತ ಕುಟುಂಬ. ಈ ಫ್ಯಾಮಿಲಿಯ ಕೆಲವು ಹಿರಿಯರ ಸಮ್ಮುಖದಲ್ಲಿ ಸಂಧಾನ ಮಾತುಕಥೆ ಕೂಡ ನಡೆಯುತ್ತಿದ್ದು, ನಿಹಾರಿಕಾ ಹಾಗೂ ವೆಂಕಟ ಚೈತನ್ಯ ಮತ್ತೆ ಒಂದಾಗುವ ಸೂಚನೆ ಇದೆ ಎನ್ನಲಾಗಿತ್ತು. ಆದರೆ ಸಂಧಾನ ಸಫಲ ಆದಂತೆ ಕಾಣುತ್ತಿಲ್ಲ. ನಿಹಾರಿಕಾ ಕೊನಿಡೆಲಾ ಅವರು ಕೊನೆಗೂ ಗಟ್ಟಿ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತಿದೆ. ಈ ಬಗ್ಗೆ ಅವರು ಅಧಿಕೃತವಾಗಿ ಘೋಷಿಸುವುದೊಂದೇ ಬಾಕಿ ಇದೆ.

ಇದನ್ನೂ ಓದಿ: Niharika Konidela: ‘ನಿಹಾರಿಕಾಗೂ ಡ್ರಗ್ಸ್ ಪ್ರಕರಣಕ್ಕೂ ಸಂಬಂಧವಿಲ್ಲ’; ಚಿರು ಸಹೋದರ ನಾಗಬಾಬು ಹೇಳಿಕೆ

ತೆಲುಗು ಚಿತ್ರರಂಗದಲ್ಲಿ ನಟಿಯಾಗಿ, ನಿರ್ಮಾಪಕಿಯಾಗಿ ನಿಹಾರಿಕಾ ಕೊನಿಡೆಲಾ ಅವರು ತೊಡಗಿಕೊಂಡಿದ್ದಾರೆ. ‘ಒಕ ಮನಸು’, ‘ಸೂರ್ಯಕಾಂತಂ’, ‘ಹ್ಯಾಪಿ ವೆಡ್ಡಿಂಗ್​’ ಮುಂತಾದ ಸಿನಿಮಾಗಳಲ್ಲಿ ಅವರ ನಟಿಸಿದ್ದಾರೆ. 2015ರಲ್ಲಿ ಅವರು ‘ಪಿಂಕ್​ ಎಲಿಫೆಂಟ್​ ಪಿಕ್ಚರ್ಸ್​’ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದರು. ಇದರ ಹೊಸ ಕಚೇರಿಯನ್ನು ಅವರು ಇತ್ತೀಚೆಗೆ ತೆರೆದಿದ್ದಾರೆ. ನಟಿಯಾಗಿ ಅವರು ಕಮ್​ಬ್ಯಾಕ್​ ಮಾಡುತ್ತಾರೆ ಎಂದು ಕೂಡ ನಿರೀಕ್ಷಿಸಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:49 am, Tue, 11 April 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us