Jr. NTR: ಅಂತೂ ಇಂತೂ NTR30 ಚಿತ್ರಕ್ಕೆ ಶುರುವಾಯ್ತು ಶೂಟಿಂಗ್; ವೇದಿಕೆ ಮೇಲೆ ಅಪರೂಪದ ಸಮಾಗಮ
ಕೊನೆಗೂ NTR30 ಸಿನಿಮಾ ಸೆಟ್ಟೇರಿದೆ. ಇಂದು (ಮಾರ್ಚ್ 23) ಹೈದರಾಬಾದ್ನಲ್ಲಿ ಸಿನಿಮಾ ಪೂಜೆ ಕಾರ್ಯಕ್ರಮ ನಡೆದಿದೆ.
‘ಆರ್ಆರ್ಆರ್’ ಸಿನಿಮಾ (RRR Movie) ತೆರೆಕಂಡು ಮಾರ್ಚ್ 24ಕ್ಕೆ ಒಂದು ವರ್ಷ ಆಗಲಿದೆ. ಈ ಸಿನಿಮಾ ಮಾಡಿದ ಸಾಧನೆ ತುಂಬಾನೇ ದೊಡ್ಡದು. ‘ನಾಟು ನಾಟು..’ ಹಾಡು (Naatu Naatu Song) ಆಸ್ಕರ್ ಗೆದ್ದು ದಾಖಲೆ ಬರೆಯಿತು. ರಾಜಮೌಳಿ, ಜೂನಿಯರ್ ಎನ್ಟಿಆರ್, ರಾಮ್ ಚರಣ್ ಈ ಚಿತ್ರದ ಯಶಸ್ಸನ್ನು ಎಂಜಾಯ್ ಮಾಡುತ್ತಿದ್ದಾರೆ. ಈಗ ಈ ಚಿತ್ರದ ಪ್ರಮುಖರು ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಜೂ. ಎನ್ಟಿಆರ್ ಅವರ 30ನೇ ಸಿನಿಮಾಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮ ಅಪರೂಪದ ಸಮಾಗಮಕ್ಕೆ ಸಾಕ್ಷಿ ಆಯಿತು. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೈದರಾಬಾದ್ನಲ್ಲಿ ಪೂಜೆ
ಕಳೆದ ಒಂದು ವರ್ಷದಲ್ಲಿ ಜೂನಿಯರ್ ಎನ್ಟಿಆರ್ ‘ಆರ್ಆರ್ಆರ್’ ಚಿತ್ರದ ಸಕ್ಸಸ್ನ ಎಂಜಾಯ್ ಮಾಡಿದ್ದಾರೆ. ಇದರ ಜೊತೆಗೆ ಅವರ ಕುಟುಂಬದಲ್ಲಿ ಕೆಲ ಕಹಿ ಘಟನೆ ನಡೆಯಿತು. ಈ ಕಾರಣಕ್ಕೆ ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳೋಕೆ ಅವರಿಗೆ ಸಾಧ್ಯವಾಗಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇತ್ತು. ಕೊನೆಗೂ ಹೊಸ ಸಿನಿಮಾ ಸೆಟ್ಟೇರಿದೆ. ಇಂದು (ಮಾರ್ಚ್ 23) ಹೈದರಾಬಾದ್ನಲ್ಲಿ ಸಿನಿಮಾ ಪೂಜೆ ಕಾರ್ಯಕ್ರಮ ನಡೆದಿದೆ.
ಅಪರೂಪದ ಸಮಾಗಮ
ರಾಜಮೌಳಿ, ಪ್ರಶಾಂತ್ ನೀಲ್, ಪ್ರಕಾಶ್ ರಾಜ್ ಮೊದಲಾದವರು ಈ ಕಾರ್ಯಕ್ರಮಕ್ಕೆ ಆಗಮಿಸಿದರು. ‘ಆರ್ಆರ್ಆರ್’ ಚಿತ್ರದ ಮೂಲಕ ರಾಜಮೌಳಿ ಜನಪ್ರಿಯತೆ ಹೆಚ್ಚಿತು. ‘ಕೆಜಿಎಫ್ 2’ ಮೂಲಕ ಪ್ರಶಾಂತ್ ನೀಲ್ ದೊಡ್ಡ ಯಶಸ್ಸು ಪಡೆದರು. ಇಬ್ಬರ ಸಮಾಗಮ ಇಲ್ಲಿ ಆಯಿತು. ಇಬ್ಬರು ಸ್ಟಾರ್ ಡೈರೆಕ್ಟರ್ಗಳು ಶೇಕ್ಹ್ಯಾಂಡ್ ಮಾಡಿದರು.
ಇದನ್ನೂ ಓದಿ: NTR 30: ಮಾರ್ಚ್ 23ರಂದು ಜೂನಿಯರ್ ಎನ್ಟಿಆರ್ ಹೊಸ ಸಿನಿಮಾಗೆ ಅದ್ದೂರಿ ಮುಹೂರ್ತ
ಮುಂಬೈನಿಂದ ಬಂದ ಜಾನ್ವಿ
‘ಎನ್ಟಿಆರ್30’ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿ. ಅವರು ಈ ಚಿತ್ರದ ಮುಹೂರ್ತಕ್ಕಾಗಿ ಮುಂಬೈನಿಂದ ಆಗಮಿಸಿದ್ದಾರೆ. ಅವರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುತ್ತಿರೋದು ಇದೇ ಮೊದಲು. ಅವರು ಕಾರ್ಯಕ್ರಮದಲ್ಲಿ ಭಾಗಿ ಆದರು.
ಫ್ಯಾನ್ಸ್ಗೆ ಖುಷಿ
ಜೂನಿಯರ್ ಎನ್ಟಿಆರ್ ಮುಂದಿನ ಚಿತ್ರದ ಬಗ್ಗೆ ಫ್ಯಾನ್ಸ್ ಅಪ್ಡೇಟ್ ಕೇಳುತ್ತಲೇ ಇದ್ದರು. ಕಾರ್ಯಕ್ರಮ ಒಂದರಲ್ಲಿ ವೇದಿಕೆ ಏರಿದ್ದ ಅವರಿಗೆ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡುವಂತೆ ಫ್ಯಾನ್ಸ್ ಕಡೆಯಿಂದ ಇತ್ತೀಚೆಗೆ ಒತ್ತಾಯ ಬಂದಿತ್ತು. ಇದು ಅವರಿಗೆ ಸಿಟ್ಟು ತರಿಸಿತ್ತು. ‘ನೀವು ನನ್ನನ್ನು ಮತ್ತೊಮ್ಮೆ ಅಪ್‌ಡೇಟ್‌ಗಾಗಿ ಕೇಳಿದರೆ ನಾನು ಆ ಸಿನಿಮಾನ ಮಾಡುತ್ತಿಲ್ಲ ಎಂದು ಹೇಳುತ್ತೇನೆ. ನೀವು ಮತ್ತೆ ಮತ್ತೆ ಅದನ್ನೇ ಪ್ರಶ್ನಿಸಿದರೆ ನಾನು ಸಿನಿಮಾ ಮಾಡುವುದನ್ನೇ ನಿಲ್ಲಿಸುತ್ತೇನೆ’ ಎಂದು ಏರು ಧ್ವನಿಯಲ್ಲೇ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:37 pm, Thu, 23 March 23