ಪವನ್ ಕಲ್ಯಾಣ್ ನಟನೆಯ ‘ಒಜಿ’ ಚಿತ್ರಕ್ಕೆ ಸೊಳ್ಳೆ ಕಾಟ; ಶೂಟಿಂಗ್ ಸ್ಥಗಿತ

OG Movie: ಪವನ್ ಕಲ್ಯಾಣ್ ಅಭಿನಯದ ‘ಒಜಿ’ ಚಿತ್ರದ ಶೂಟಿಂಗ್ ಡೆಂಗ್ಯೂ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ನಟ ಇಮ್ರಾನ್ ಹಾಶ್ಮಿ ಅವರಿಗೆ ಡೆಂಗ್ಯೂ ತಗುಲಿರುವುದರಿಂದ ಶೂಟಿಂಗ್‌ಗೆ ಅಡ್ಡಿಯಾಗಿದೆ. ಅವರಿಗೆ ವೈದ್ಯಕೀಯ ಸಲಹೆಯಂತೆ ವಿಶ್ರಾಂತಿ ಅಗತ್ಯವಿದೆ. ಒಂದು ವಾರದವರೆಗೆ ಶೂಟಿಂಗ್ ಮುಂದೂಡಲಾಗಿದೆ ಎಂದು ವರದಿಯಾಗಿದೆ.

ಪವನ್ ಕಲ್ಯಾಣ್ ನಟನೆಯ ‘ಒಜಿ’ ಚಿತ್ರಕ್ಕೆ ಸೊಳ್ಳೆ ಕಾಟ; ಶೂಟಿಂಗ್ ಸ್ಥಗಿತ
ಪವನ್ ಕಲ್ಯಾಣ್-ಇಮ್ರಾನ್

Updated on: May 29, 2025 | 7:00 AM

ಸದ್ಯ ಎಲ್ಲ ಕಡೆಗಳಲ್ಲಿ ಮಳೆಯಾಗುತ್ತಿದೆ. ಇದರಿಂದ ಕೆಲವು ಕಡೆಗಳಲ್ಲಿ ನೀರು ನಿಂತು, ಅವುಗಳ ಮೇಲೆ ಸೊಳ್ಳೆಗಳು ಮೊಟ್ಟೆ ಇಟ್ಟು, ಅವು ಮರಿಯಾಗಿ, ಮನುಷ್ಯರಿಗೆ ಕಚ್ಚುತ್ತಿವೆ. ಇದರಿಂದ ಎಲ್ಲ ಕಡೆಗಳಲ್ಲಿ ಡೆಂಗ್ಯೂ ಹಚ್ಚುತ್ತಿದೆ. ಅನೇಕರು ಈ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೂ ಡೆಂಗ್ಯೂ ಸಮಸ್ಯೆ ಉಂಟಾಗುತ್ತಿದೆ. ಪವನ್ ಕಲ್ಯಾಣ್ ನಟನೆಯ ‘ಒಜಿ’ ಚಿತ್ರದ (OG Movie) ಕಲಾವಿದ ಇಮ್ರಾನ್ ಹಶ್ಮಿಗೂ ಈಗ ಇದೇ ರೋಗ ತಗುಲಿದೆ. ಇದರಿಂದ ಸಿನಿಮಾ ಶೂಟಿಂಗ್ ನಿಂತಿದೆ.

ಇಮ್ರಾನ್ ಹಶ್ಮಿಅವರ ಭಾಗದ ಶೂಟಿಂಗ್ ಗುರುಗ್ರಾಮದ ಆರೆ ಕಾಲೋನಿಯಲ್ಲಿ ನಡೆಯುತ್ತಿದೆ. ಈ ವೇಳೆ ಅವರಿಗೆ ಅನಾರೋಗ್ಯ ಉಂಟಾಗಿದೆ. ಅವರಿಗೆ ತೀವ್ರ ಜ್ವರ ಇತ್ತು. ಪರೀಕ್ಷೆ ನಡೆಸಿದಾಗ ಅವರಿಗೆ ಡೆಂಗ್ಯೂ ಪಾಸಿಟಿವ್ ಬಂದಿದೆ. ವೈದ್ಯರು ಕೆಲವು ದಿನ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಅಲ್ಲದೆ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಇದರಿಂದ ಅವರು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಬಂದಿದೆ.

ಇಮ್ರಾನ್ ಹಶ್ಮಿಅವರು ತಂಡಕ್ಕೆ ಈಗಾಗಲೇ ತಮ್ಮ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿರುವ ತಂಡದವರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಹೀಗಾಗಿ, ಅವರು ಒಂದು ವಾರ ವಿಶ್ರಾಂತಿ ಪಡೆಯೋ ಸಾಧ್ಯತೆ ಇದೆ. ಅಲ್ಲಿಯವರೆಗೆ ಶೂಟಿಂಗ್ ಮುಂದಕ್ಕೆ ಹಾಕಲಾಗಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ
ಕಮಲ್ ಹೇಳಿಕೆ ವಿರುದ್ಧ ಧ್ವನಿ ಎತ್ತಿದ ಅಹಿಂಸಾ ಚೇತನ್; ಸೆಲೆಬ್ರಿಟಿಗಳ ಮೌನ
ನಟಿ ದೀಪಿಕಾಗೆ ಕ್ಯಾನ್ಸರ್; ಹೊಟ್ಟೆಯಲ್ಲಿದೆ ಟೆನಿಸ್ ಬಾಲ್ ಆಕಾರದ ಗಡ್ಡೆ
RCB ಗೆಲುವಿನ ಖುಷಿಯಲ್ಲಿ ವಿರಾಟ್​ಗೆ ಮುತ್ತಿನ ಸುರಿಮಳೆ ಸುರಿಸಿದ ಅನುಷ್ಕಾ
ಕಮಲ್ ಹಾಸನ್ ವಿವಾದ: ಕನ್ನಡಿಗರ ಕೆರಳಿಸಿದ ನಟನ​ ಚಿತ್ರಕ್ಕೆ ಸಂಕಷ್ಟ

ಇದನ್ನೂ ಓದಿ: ಪವನ್ ಕಲ್ಯಾಣ್ ಸಿನಿಮಾ ಬಿಡುಗಡೆ ತಡೆಯಲು ಯತ್ನ? ತನಿಖೆಗೆ ಆದೇಶಿಸಿದ ಸಚಿವ

ಇಮ್ರಾನ್ ಹಶ್ಮಿ ಅವರು ಇಷ್ಟು ವರ್ಷ ಬಾಲಿವುಡ್​ನಲ್ಲಿ ಬ್ಯುಸಿ ಇದ್ದರು. ಅವರು ಇದೇ ಮೊದಲ ಬಾರಿಗೆ ‘ಒಜಿ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಒಜಿ ಎಂದರೆ ಒರಿಜಿನಲ್ ಗ್ಯಾಂಗ್​ಸ್ಟರ್ ಎಂಬ ಅರ್ಥವನ್ನು ಹೊಂದಿದೆ. ಈ ಚಿತ್ರಕ್ಕೆ ಪ್ರಿಯಾಂಕಾ ಮೋಹನ್ ಅವರು ಕಥಾ ನಾಯಕಿ. ಈ ಚಿತ್ರಕ್ಕೆ ‘ಸಾಹೋ’ ಚಿತ್ರದ ನಿರ್ದೇಶಕ ಸುಜೀತ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾಗೆ ‘ಡಿವಿವಿ ದಾನಯ್ಯ’ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ. ಅಂದಹಾಗೆ, ರಾಜಕೀಯ ಕೆಲಸದ ಕಾರಣಕ್ಕೆ ಪವನ್ ಕಲ್ಯಾಣ್ ಅವರಿಗೆ ಈ ಸಿನಿಮಾದ ಶೂಟ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ಈಗ ಅವರು ಬಿಡುವು ಮಾಡಿಕೊಂಡು ಈ ಚಿತ್ರಕ್ಕೆ ಸಮಯ ಮೀಸಲಿಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:58 am, Thu, 29 May 25