AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ವಿಜಯ್ ಹುಟ್ಟುಹಬ್ಬ: ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್

Vijay Thalapathy: ನಟ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರ ಜನ್ಮದಿನ ಹತ್ತಿರವಿದೆ. ಜೂನ್ 22 ರಂದು ವಿಜಯ್ ಹುಟ್ಟುಹಬ್ಬ ಇದ್ದು, ವಿಜಯ್ ಅವರ ಅಭಿಮಾನಿಗಳ ಪಾಲಿಗೆ ಈ ಹುಟ್ಟುಹಬ್ಬ ತುಸು ಭಿನ್ನ ಆಗಿರಲಿದೆ. ಈ ಹುಟ್ಟುಹಬ್ಬಕ್ಕೆ ವಿಜಯ್ ನಟನಾಗಿಲ್ಲ ಬದಲಿಗೆ ರಾಜ್ಯದ ಸಿಎಂ ಆಗಿದ್ದಾರೆ. ಆದರೆ ವಿಜಯ್ ಅವರ ಅಭಿಮಾನಿಗಳಿಗೆ, ವಿಜಯ್ ಹುಟ್ಟುಹಬ್ಬದಂದು ಸಂಭ್ರಮಿಸಲು ಕಾರಣವೊಂದು ದೊರೆತಿದೆ. ವಿಜಯ್ ಅವರ ಹಳೆಯ ಸೂಪರ್ ಹಿಟ್ ಸಿನಿಮಾ ಒಂದು ಅವರ ಹುಟ್ಟುಹಬ್ಬದಂದು ಬಿಡುಗಡೆ ಆಗಲಿದೆ.

ಸಿಎಂ ವಿಜಯ್ ಹುಟ್ಟುಹಬ್ಬ: ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್
Thalapathy Vijay
ಮಂಜುನಾಥ ಸಿ.
|

Updated on: Jun 12, 2026 | 3:05 PM

Share

ನಟ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ (Vijay) ಅವರ ಜನ್ಮದಿನ ಹತ್ತಿರವಿದೆ. ಜೂನ್ 22 ರಂದು ವಿಜಯ್ ಹುಟ್ಟುಹಬ್ಬ ಇದ್ದು, ವಿಜಯ್ ಅವರ ಅಭಿಮಾನಿಗಳ ಪಾಲಿಗೆ ಈ ಹುಟ್ಟುಹಬ್ಬ ತುಸು ಭಿನ್ನ ಆಗಿರಲಿದೆ. ಈ ಹುಟ್ಟುಹಬ್ಬಕ್ಕೆ ವಿಜಯ್ ನಟನಾಗಿಲ್ಲ ಬದಲಿಗೆ ರಾಜ್ಯದ ಸಿಎಂ ಆಗಿದ್ದಾರೆ. ಆದರೆ ವಿಜಯ್ ಅವರ ಅಭಿಮಾನಿಗಳಿಗೆ, ವಿಜಯ್ ಹುಟ್ಟುಹಬ್ಬದಂದು ಸಂಭ್ರಮಿಸಲು ಕಾರಣವೊಂದು ದೊರೆತಿದೆ. ವಿಜಯ್ ಅವರ ಹಳೆಯ ಸೂಪರ್ ಹಿಟ್ ಸಿನಿಮಾ ಒಂದು ಅವರ ಹುಟ್ಟುಹಬ್ಬದಂದು ಬಿಡುಗಡೆ ಆಗಲಿದೆ.

ಜೂನ್ 22 ರಂದು ವಿಜಯ್ ಅವರ ಜನ್ಮದಿನವಿದ್ದು, ಆ ವಿಶೇಷ ದಿನವನ್ನು ಆಚರಿಸುವ ಸಲುವಾಗಿ ವಿಜಯ್ ಅವರ ಸೂಪರ್ ಹಿಟ್ ಸಿನಿಮಾ ‘ಮರ್ಸೆಲ್’ ಅನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರವು ಚೆನ್ನೈ ಮತ್ತು ಚೆಂಗಲ್ಪಟ್ಟುವಿನ ಆಯ್ದ ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗಲಿದೆ. ತಮಿಳುನಾಡಿನಾದ್ಯಂತ ಬಿಡುಗಡೆ ಆಗುತ್ತಿಲ್ಲ. ಆದರೂ ಸಹ ವಿಜಯ್ ಅವರ ಅಭಿಮಾನಿಗಳು ಬೇರೆ ಬೇರೆ ಕಡೆಗಳಿಂದ ಚೆನ್ನೈಗೆ ಆಗಮಿಸಿ ಸಿನಿಮಾ ನೋಡುವ ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಅಟ್ಲಿ ನಿರ್ದೇಶನದ ‘ಮೆರ್ಸಲ್’ ಚಿತ್ರದಲ್ಲಿ ವಿಜಯ್ ತಂದೆ ಮತ್ತು ಇಬ್ಬರು ಮಕ್ಕಳ ಪಾತ್ರಗಳಲ್ಲಿ ತ್ರಿಪಾತ್ರಾಭಿನಯ ಮಾಡಿದ್ದರು. ಈ ಚಿತ್ರವು ರೋಗಿಗಳಿಂದ ಕಡಿಮೆ ಶುಲ್ಕ ಪಡೆಯುವ ಸಹಾನುಭೂತಿಯುಳ್ಳ ವೈದ್ಯನ ಕಥೆಯನ್ನು ಒಳಗೊಂಡಿದೆ, ಜೊತೆಗೆ ಗುಪ್ತವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಾರೆ. ಆದರೆ ವಿಜಯ್ ಬಂಧನದ ಬಳಿಕ ಅವರ ಹಿಂದಿನ ಕತೆಗಳು ಹೊರಗೆ ಬರುತ್ತವೆ. ಒಟ್ಟಾರೆ ಸಖತ್ ಮಾಸ್ ಆದ ಸಿನಿಮಾ ‘ಮರ್ಸೆಲ್’ ಆಗಿತ್ತು. 2017 ರಲ್ಲಿ ಈ ಸಿನಿಮಾ ಬಿಡುಗಡೆ ಆದಾಗ ಸಾಕಷ್ಟು ವಿವಾದವೂ ಆಗಿತ್ತು. ಈಗ ಮತ್ತೆ ಅದೇ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ.

ಇದನ್ನೂ ಓದಿ:ಕೊಲ್ಲೂರಿಗೆ ಸಿಎಂ ವಿಜಯ್ ಭೇಟಿ ಹಿನ್ನೆಲೆ ಭಕ್ತರ ದರ್ಶನಕ್ಕೆ 1 ಗಂಟೆ ಬ್ರೇಕ್!

‘ಮರ್ಸೆಲ್’ ಸಿನಿಮಾ ಬಿಡುಗಡೆ ಆದಾಗ ಬಿಜೆಪಿಯು ಸಿನಿಮಾದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಬಿಜೆಪಿಯನ್ನು, ಕೇಂದ್ರ ಸರ್ಕಾರವನ್ನು ಟೀಕೆ ಮಾಡುವ ಅಂಶಗಳು ಸಿನಿಮಾನಲ್ಲಿವೆ ಎಂದಿದ್ದು, ಸಿನಿಮಾದ ನಿಷೇಧಕ್ಕೆ ಒತ್ತಾಯಿಸಲಾಗಿತ್ತು. ಆ ಸಮಯದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷರು, ವಿಜಯ್ ಅವರು ಕ್ರಿಶ್ಚಿಯನ್ ಆಗಿದ್ದು, ಇದೇ ಕಾರಣಕ್ಕೆ ಅವರು ಮೋದಿಯನ್ನು ಟೀಕಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಮರ್ಸಲ್ ಸಿನಿಮಾನಲ್ಲಿ ಕಾಜಲ್ ಅಗರ್ಲಾವ್, ಎಸ್​​ಜೆ ಸೂರ್ಯ, ಸಮಂತಾ ಋತ್ ಪ್ರಭು, ನಿತ್ಯಾ ಮೆನನ್, ವಡಿವೇಲು ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ಅನ್ನು ಅಟ್ಲಿ ನಿರ್ದೇಶನ ಮಾಡಿದ್ದು, ತೆಂಡಾಲ್ ಸ್ಟುಡಿಯೋ ನಿರ್ಮಾಣ ಮಾಡಿತ್ತು. ಇದೀಗ ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ‘ಮರ್ಸೆಲ್’ ಮರು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us