ಸೋನು ನಿಗಮ್ ವಿರುದ್ಧ ಕಾಪಿ ರೈಟ್ ಕೇಸ್ ಹಾಕಲು ಮುಂದಾಗಿದ್ದ ಎಪಿಜೆ ಅಬ್ದುಲ್ ಕಲಾಂ
ಸೋನು ನಿಗಮ್ ಅವರು ಭಾರತದ ಪ್ರಸಿದ್ಧ ಗಾಯಕರಾಗಿದ್ದಾರೆ. ಅವರು 'ಕಲ್ ಹೋ ನ ಹೋ' ಹಾಡಿಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಅಬ್ದುಲ್ ಕಲಾಂ ಅವರಿಂದ ಪ್ರಶಸ್ತಿ ಸ್ವೀಕರಿಸುವಾಗ ನಡೆದ ಮೋಜಿನ ಘಟನೆಯನ್ನೂ ಈ ಲೇಖನ ತಿಳಿಸುತ್ತದೆ. ಆಜಾನ್ ಕುರಿತು ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಮತ್ತು ಧ್ವನಿವರ್ಧಕ ಬಳಕೆಯ ಕುರಿತಾದ ಅವರ ದೃಷ್ಟಿಕೋನವನ್ನು ಈ ಲೇಖನ ವಿವರಿಸುತ್ತದೆ.

ಸೋನು ನಿಗಂ ಅವರು ಭಾರತ ಕಂಡ ಶ್ರೇಷ್ಠ ಗಾಯಕರಲ್ಲಿ ಒಬ್ಬರು. ಅವರು ಹಲವು ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ. ಅವರಿಗೆ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿತ್ತು. ‘ಕಲ್ ಹೋನ ಹೋ’ ಚಿತ್ರದ ಹಾಡಿಗೆ ಸೋನು ನಿಗಂ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ್ದರು. ಸೋನು ನಿಗಮ್ ಅವರು ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಂದ ಅವಾರ್ಡ್ ಸ್ವೀಕರಿಸಿದ್ದರು. ವೇದಿಕೆ ಮೇಲೆ ಒಂದು ಫನ್ ಘಟನೆ ನಡೆದಿತ್ತು. ಅದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳೋಣ.
‘ಆಪ್ ಕಿ ಅದಾಲತ್’ ಕಾರ್ಯಕ್ರಮಕ್ಕೆ ಸೋನು ನಿಗಂ ಆಗಮಿಸಿದ್ದರು. ಆ್ಯಂಕರ್ ರಜತ್ ಶರ್ಮಾ ಅವರು ಸೋನು ನಿಗಮ್ ಅವರ ಜೊತೆ ಸಾಕಷ್ಟು ವಿಚಾರ ಮಾತನಾಡಿದ್ದರು. ಈ ವೇಳೆ ಅಬ್ದುಲ್ ಕಲಾಂ ಅವರಿಂದ ಅವಾರ್ಡ್ ಸ್ವೀಕರಿಸಿದ ವಿಚಾರವನ್ನೂ ಪ್ರಶ್ನೆ ಮಾಡಿದ್ದರು. ‘ನನಗೆ ಕಲ್ ಹೋ ನ ಹೋಗೆ ಅವಾರ್ಡ್ ಸಿಗುತ್ತದೆ ಎಂದು ಭಾವಿಸಿರಲಿಲ್ಲ. ನಾನು ವೇದಿಕೆ ಏರಿದಾಗ ಅಬ್ದುಲ್ ಕಲಾಂ ಅವರ ಹೇರ್ಸ್ಟೈಲ್ ನನ್ನ ಹೇರ್ಸ್ಟೈಲ್ ರೀತಿಯೇ ಇತ್ತು’ ಎಂದಿದ್ದಾರೆ ಸೋನು ನಿಗಮ್. ಹೀಗಾಗಿ, ‘ಸೇಮ್ ಸೇಮ್ ಹೇರ್ಸ್ಟೈಲ್’ ಎಂದು ವೇದಿಕೆ ಮೇಲೆ ಸೋನು ಹೇಳಿದ್ದರು. ಇದಕ್ಕೆ ಫನ್ ಆಗಿ ಉತ್ತರಿಸಿದ್ದ ಕಲಾಂ, ‘ಕಾಪಿ ರೈಟ್.. ಕಾಪಿ ರೈಟ್’ ಎಂದಿದ್ದರು.
ಅಬ್ದುಲ್ ಕಲಾಂ ಅವರು ಯಾವಾಗಲೂ ಫನ್ ಆಗಿ ಇರಲು ಇಷ್ಟಪಡುತ್ತಿದ್ದರು. ಸಣ್ಣವರು ದೊಡ್ಡವರು ಹೀಗೆ ಎಲ್ಲರ ಬಳಿಯೂ ಅವರು ಸಮಾನವಾಗಿ ಬೆರೆಯುತ್ತಿದ್ದರು. ಅವರನ್ನು ಈಗಲೂ ಅನೇಕರು ನೆನಪಿಸಿಕೊಳ್ಳುತ್ತಾರೆ. ಅವರ ಹೇರ್ಸ್ಟೈಲ್ ಎಲ್ಲರ ಗಮನ ಸೆಳೆದಿತ್ತು.
‘ಆಜಾನ್’ ಹಾಕುವ ಬಗ್ಗೆ ಸೋನು ನಿಗಮ್ ವಿರೋಧ ಹೊರಹಾಕಿದ್ದರು. ಈ ಬಗ್ಗೆ ಕೇಳಿದ ಪ್ರಶ್ನೆಗೆ ಮಾತನಾಡಿದ್ದ ಅವರು, ‘ನಾನು ಮೊಹಮ್ಮದ್ ರಫಿ ಸಾಹಬ್ ಅವರನ್ನು ನನ್ನ ಸಂಗೀತ ತಂದೆ ಎಂದು ಪರಿಗಣಿಸಿದ್ದೇನೆ. ಮುಸ್ಲಿಂ ಗುರುಗಳಿಂದ ಸಂಗೀತ ಕಲಿತಿದ್ದೇನೆ. ನಾನು ಜಾತ್ಯತೀತ ಎಂದು ಸಾಬೀತುಪಡಿಸುವ ಅಗತ್ಯವಿಲ್ಲ’ ಎಂದಿದ್ದರು ಅವರು.
‘ನನ್ನ ಬಾಲ್ಯದಲ್ಲಿ ದೇವಸ್ಥಾನದ ಹೊರಗೆ ಧ್ವನಿವರ್ಧಕದಲ್ಲಿ ಆರತಿ ಮತ್ತು ಭಜನೆಯನ್ನು ಮಾಡುತ್ತಿದ್ದರು. ಆ ಸಮಯದಲ್ಲಿ, ನಾನು ಚಿಕ್ಕವನಿದ್ದಾಗ, ನನಗೆ ಯಾವುದೇ ಬುದ್ಧಿವಂತಿಕೆ ಇರಲಿಲ್ಲ. ಇಂದು ಆಜಾನ್ ಸಮಸ್ಯೆ ಇದೆ ಎಂದಲ್ಲ. ಈ ರೀತಿಯ ಧ್ವನಿವರ್ಧಕಗಳಿಂದ ಜನರಿಗೆ ತೊಂದರೆಯಾಗುತ್ತದೆ ಎಂಬ ಆಲೋಚನೆ ಬಾಲ್ಯದಿಂದಲೂ ಇತ್ತು’ ಎಂದಿದ್ದರು ಅವರು.
ಇದನ್ನೂ ಓದಿ: ಅರಿಜಿತ್ಗೆ ಪದ್ಮಶ್ರೀ, ಸೋನು ನಿಗಮ್ಗೆ ಹೊಟ್ಟೆ ಉರಿ? ವಿಡಿಯೋದಲ್ಲೇನಿದೆ?
‘ಕೆಲವು ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಜನರು ರಸ್ತೆಯಲ್ಲಿ ಜಮಾಯಿಸಿದಾಗ ಆಂಬ್ಯುಲೆನ್ಸ್ ಸಿಕ್ಕಿಹಾಕಿಕೊಳ್ಳುವುದನ್ನು ನೋಡಲು ತುಂಬಾ ದುಃಖವಾಗುತ್ತದೆ. ಯಾವುದೇ ಧರ್ಮದವರು ಧ್ವನಿವರ್ಧಕಗಳನ್ನು ತಪ್ಪಾಗಿ ಬಳಸಬಾರದು ಎಂದು 2013ರಲ್ಲಿ ಕಾನೂನು ಮಾಡಲಾಗಿದೆ. ಬಿಜೆಪಿಯನ್ನು ಮೆಚ್ಚಿಸಲು ನಾನು ಈ ಹೇಳಿಕೆ ನೀಡಿದ್ದೇನೆ ಎಂದು ಯಾರಾದರೂ ಭಾವಿಸಿದರೆ ನಾನೇನೂ ಮಾಡಲು ಸಾಧ್ಯವಿಲ್ಲ. ನನ್ನ ಹೇಳಿಕೆಯನ್ನು ಜನರು ಸಾಮಾಜಿಕ ದೃಷ್ಟಿಕೋನದಿಂದ ನೋಡಬೇಕೇ ಹೊರತು ಧಾರ್ಮಿಕ ದೃಷ್ಟಿಕೋನದಿಂದಲ್ಲ’ ಎಂದಿದ್ದರು ಸೋನು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:00 am, Sat, 15 February 25