Oscar 2023 Nomination: ಆಸ್ಕರ್​ ನಾಮಿನೇಷನ್​ ಲಿಸ್ಟ್​ ಪ್ರಕಟ; ಭಾರತಕ್ಕೆ ಬಂಪರ್​ ಚಾನ್ಸ್​

|

Updated on: Jan 24, 2023 | 8:09 PM

Naatu Naatu Song | Oscar Nominations 2023: ಅಲಿಸನ್​ ವಿಲಿಯಮ್ಸ್​ ಮತ್ತು ರಿಝ್​ ಅಹ್ಮದ್​ ಅವರು ಈ ಬಾರಿಯ ಆಸ್ಕರ್​ ನಾಮಿನೇಷನ್​ ಲಿಸ್ಟ್​ ಪ್ರಕಟಿಸಿದರು. ‘ನಾಟು ನಾಟು’ ಹಾಡು, ‘ಆಲ್​ ದಟ್​ ಬ್ರೀಥ್ಸ್​’, ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಸಾಕ್ಷ್ಯಚಿತ್ರಗಳು ಭಾರತದಿಂದ ನಾಮಿನೇಟ್​ ಆಗಿವೆ.

Oscar 2023 Nomination: ಆಸ್ಕರ್​ ನಾಮಿನೇಷನ್​ ಲಿಸ್ಟ್​ ಪ್ರಕಟ; ಭಾರತಕ್ಕೆ ಬಂಪರ್​ ಚಾನ್ಸ್​
ಆಸ್ಕರ್ ಪ್ರಶಸ್ತಿ ನಾಮಿನೇಷನ್
Follow us on

ಭಾರಿ ಕೌತುಕ ಮೂಡಿಸಿದ್ದ ಆಸ್ಕರ್​ ಪ್ರಶಸ್ತಿ (Oscar 2023) ನಾಮಿನೇಷನ್ಪಟ್ಟಿ ಹೊರಬಿದ್ದಿದೆ. ಮಂಗಳವಾರ (ಜ.24) ಸಂಜೆ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್​ನಲ್ಲಿರುವ ಸ್ಯಾಮ್ಯುವೆಲ್ ಗೋಲ್ಡ್​​ವಿನ್ ಥಿಯೇಟರ್​ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಾಮಿನೇಷನ್​ (Oscar Nominations 2023) ಲಿಸ್ಟ್​ ಅನೌನ್ಸ್​ ಮಾಡಲಾಗಿದೆ. ಭಾರತದ ಒಂದಷ್ಟು ಸಿನಿಮಾಗಳು ಈ ಬಾರಿ ಶಾರ್ಟ್​ಲಿಸ್ಟ್​ ಆಗಿದ್ದರಿಂದ ನಾಮಿನೇಷನ್​ ಪ್ರಕ್ರಿಯೆ ಮೇಲೆ ಸಖತ್​ ನಿರೀಕ್ಷೆ ಮೂಡಿತ್ತು. ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ (Naatu Naatu) ಹಾಡು ಬೆಸ್ಟ್​ ಒರಿಜಿನಲ್​ ಸಾಂಗ್​ ವಿಭಾಗದಲ್ಲಿ ನಾಮಿನೇಟ್​ ಆಗಿದೆ. ಭಾರತದ ‘ಆಲ್​ ದಟ್​ ಬ್ರೀಥ್ಸ್​’, ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಕಿರುಚಿತ್ರಗಳು ಕೂಡ ನಾಮಿನೇಟ್​ ಆಗಿದ್ದು, ಭಾರತಕ್ಕೆ ಈ ಬಾರಿ ಆಸ್ಕರ್​ ಗೆಲ್ಲುವ ಚಾನ್ಸ್​ ದಟ್ಟವಾಗಿದೆ. ಅಲಿಸನ್​ ವಿಲಿಯಮ್ಸ್​ ಮತ್ತು ರಿಝ್​ ಅಹ್ಮದ್​ ಅವರು ಈ ಬಾರಿಯ ಆಸ್ಕರ್​ ನಾಮಿನೇಷನ್​ ಲಿಸ್ಟ್​ ಪ್ರಕಟಿಸಿದರು.

ಆಸ್ಕರ್​ಗೆ ‘ನಾಟು ನಾಟು..’ ನಾಮಿನೇಟ್​:

‘ನಾಟು ನಾಟು..’ ಹಾಡಿಗೆ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಅವರು ‘ಗೋಲ್ಡನ್​ ಗ್ಲೋಬ್​ 2023’ ಅವಾರ್ಡ್​ ಪಡೆದು ಭಾರತಕ್ಕೆ ಹೆಮ್ಮೆ ತಂದಿದ್ದರು. ಈಗ ಆಸ್ಕರ್​ ಪ್ರಶಸ್ತಿಗೆ ನಾಮಿನೇಟ್​ ಆಗಿರುವುದು ಭಾರತೀಯ ಸಿನಿಪ್ರಿಯರಿಗೆ ಸಂತಸ ಮೂಡಿಸಿದೆ. ಈ ಹಾಡಿಗೆ ಆಸ್ಕರ್​ ಪ್ರಶಸ್ತಿ ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

‘ಚೆಲ್ಲೋ ಶೋ’ ಚಿತ್ರಕ್ಕೆ ನಿರಾಸೆ:

ಆಸ್ಕರ್​ನ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ವಿಭಾಗಕ್ಕೆ ಭಾರತದಿಂದ ಗುಜರಾತಿ ಭಾಷೆಯ ‘ಚೆಲ್ಲೋ ಶೋ’ ಸಿನಿಮಾ ಅಧಿಕೃತವಾಗಿ ಆಯ್ಕೆ ಆಗಿತ್ತು. ‘ಫಿಲ್ಮ್​ ಫೆಡರೇಷನ್​ ಆಫ್​ ಇಂಡಿಯಾ’ ವತಿಯಿಂದ ಈ ಚಿತ್ರವನ್ನು ಆಯ್ಕೆ ಮಾಡಲಾಗಿತ್ತು.  ಆದರೆ ಅಂತಿಮ ಸುತ್ತಿನಲ್ಲಿ ನಾಮಿನೇಟ್​ ಆಗುವಲ್ಲಿ ‘ಚೆಲ್ಲೋ ಶೋ’ ಸಿನಿಮಾ ವಿಫಲವಾಗಿದೆ. ಇದು ಅನೇಕರಿಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ: Oscar 2023: ‘ಆಸ್ಕರ್​ ಪ್ರಶಸ್ತಿ ನನಗೆ ಮುಟ್ಟಲು ಕೊಡಿ ಪ್ಲೀಸ್’: ರಾಮ್​ ಚರಣ್​ ಬಳಿ ಶಾರುಖ್​ ಖಾನ್​ ಮನವಿ​

‘ವಿಕ್ರಾಂತ್​ ರೋಣ’, ‘ಕಾಂತಾರ’ ಚಿತ್ರಕ್ಕೆ ಆಸ್ಕರ್​ ಕನಸು ಭಗ್ನ:

ವಿಶ್ವದ 300ಕ್ಕೂ ಅಧಿಕ ಸಿನಿಮಾಗಳು ಈ ಬಾರಿ ಆಸ್ಕರ್​ ಪ್ರಶಸ್ತಿ ಸ್ಪರ್ಧೆಯಲ್ಲಿ ಹಣಾಹಣಿ ನಡೆಸುವ ಅರ್ಹತೆ ಪಡೆದಿದ್ದವು. ಆ ಪೈಕಿ ಕನ್ನಡದ ಸಿನಿಮಾಗಳಾದ ‘ಕಾಂತಾರ’, ‘ವಿಕ್ರಾಂತ್​ ರೋಣ’ ಚಿತ್ರಗಳು ಕೂಡ ಇದ್ದವು. ಈ ಚಿತ್ರಗಳು ಯಾವುದಾದರೂ ವಿಭಾಗದಲ್ಲಿ ನಾಮಿನೇಟ್​ ಆಗಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಅದೇ ರೀತಿ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಕೂಡ ಯಾವುದೇ ವಿಭಾಗದಲ್ಲೂ ನಾಮಿನೇಟ್​ ಆಗಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:23 pm, Tue, 24 January 23