ಸರ್ಫಿರಾ: ಹೀನಾಯವಾಗಿ ಸೋತ ಅಕ್ಷಯ್​ ಕುಮಾರ್​ ಸಿನಿಮಾ ಶೀಘ್ರವೇ ಒಟಿಟಿಯಲ್ಲಿ ಲಭ್ಯ

‘ಸರ್ಫಿರಾ’ ಸಿನಿಮಾ ಒಟಿಟಿಗೆ ಬರುತ್ತಿದೆ. ಕೆಲವು ತಿಂಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದಾಗ ಈ ಸಿನಿಮಾಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಈಗ ಒಟಿಟಿಯಲ್ಲಾದರೂ ಜನಮೆಚ್ಚುಗೆ ಗಳಿಸುತ್ತಾ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಅಕ್ಷಯ್​ ಕುಮಾರ್​ ಅವರ ಫ್ಲಾಪ್ ಸಿನಿಮಾಗಳ ಪಟ್ಟಿಯಲ್ಲಿ ‘ಸರ್ಫಿರಾ’ ಕೂಡ ಇದೆ.

ಸರ್ಫಿರಾ: ಹೀನಾಯವಾಗಿ ಸೋತ ಅಕ್ಷಯ್​ ಕುಮಾರ್​ ಸಿನಿಮಾ ಶೀಘ್ರವೇ ಒಟಿಟಿಯಲ್ಲಿ ಲಭ್ಯ
ಅಕ್ಷಯ್​ ಕುಮಾರ್​
Follow us
ಮದನ್​ ಕುಮಾರ್​
|

Updated on: Sep 26, 2024 | 6:45 PM

ಈ ವರ್ಷ ಜುಲೈನಲ್ಲಿ ‘ಸರ್ಫಿರಾ’ ಸಿನಿಮಾ ಬಿಡುಗಡೆ ಆಗಿತ್ತು. ಅಕ್ಷಯ್​ ಕುಮಾರ್​ ಮುಖ್ಯ ಭೂಮಿಕೆ ನಿಭಾಯಿಸಿದ ಈ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡಲಾಗಿತ್ತು. ಆದರೆ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಗಳಿಸಿದ್ದು ಕೇವಲ 22 ಕೋಟಿ ರೂಪಾಯಿ. ಅಕ್ಷಯ್​ ಕುಮಾರ್​ ಅವರಂತಹ ಸ್ಟಾರ್ ನಟನ ಸಿನಿಮಾಗೆ ಇದು ಚಿಲ್ಲರೆ ಕಲೆಕ್ಷನ್​. ಬಾಕ್ಸ್​ ಆಫೀಸ್​ನಲ್ಲಿ ಮುಗ್ಗರಿಸಿದ ಈ ಸಿನಿಮಾ ಈಗ ಒಟಿಟಿಗೆ ಬರುತ್ತಿದೆ. ಆ ಬಗ್ಗೆ ಚಿತ್ರತಂಡದವರೇ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​’ ಒಟಿಟಿಯಲ್ಲಿ ಅಕ್ಟೋಬರ್​ 11ರಂದು ‘ಸರ್ಫಿರಾ’ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.

ಅಕ್ಷಯ್​ ಕುಮಾರ್​ ಅವರು ‘ಸರ್ಫಿರಾ’ ಸಿನಿಮಾವನ್ನು ಯಾಕೆ ಒಪ್ಪಿಕೊಂಡರು ಎಂಬುದು ಎಲ್ಲರಿಗೂ ಕಾಡುವ ಪ್ರಶ್ನೆ. ಯಾಕೆಂದರೆ ಅದು ತಮಿಳಿನ ‘ಸೂರರೈ ಪೋಟ್ರು’ ಸಿನಿಮಾದ ಹಿಂದಿ ರಿಮೇಕ್​. ಅದಾಗಲೇ ಹಿಂದಿಗೂ ಡಬ್​ ಆಗಿ ‘ಸೂರರೈ ಪೋಟ್ರು’ ಸಿನಿಮಾ ಒಟಿಟಿಯಲ್ಲಿ ಲಭ್ಯವಾಗಿತ್ತು. ಮತ್ತೆ ಅದೇ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್​ ಮಾಡುವುದಾಗಿ ತಿಳಿಸಿದಾಗಲೇ ಅದು ತಪ್ಪು ನಿರ್ಧಾರ ಎಂದು ಅನೇಕರು ಮಾತನಾಡಿಕೊಂಡಿದ್ದರು. ಆ ಮಾತು ನಿಜವಾಯಿತು. ಬಾಕ್ಸ್​ ಆಫೀಸ್​ನಲ್ಲಿ ‘ಸರ್ಫಿರಾ’ ಸಿನಿಮಾ ಹೀನಾಯವಾಗಿ ಸೋತಿತು.

ಬಡವರಿಗೆ ಕಡಿಮೆ ಬೆಲೆಯಲ್ಲಿ ವಿಮಾನಯಾನ ಸೌಲಭ್ಯ ನೀಡಲು ಪ್ರಯತ್ನಿಸಿದ ಕರ್ನಾಟಕದ ಕ್ಯಾಪ್ಟನ್​ ಗೋಪಿನಾಥ್ ಅವರ ಜೀವನದವನ್ನು ಆಧರಿಸಿ ‘ಸರ್ಫಿರಾ’ ಸಿನಿಮಾ ಮೂಡಿಬಂದಿದೆ. ಕ್ಯಾಪ್ಟನ್​ ಗೋಪಿನಾಥ್ ಅವರ ಪಾತ್ರಕ್ಕೆ ಅಕ್ಷಯ್​ ಕುಮಾರ್​ ಅವರು ಬಣ್ಣ ಹಚ್ಚಿದ್ದಾರೆ. ಉತ್ತಮ ಸಂದೇಶ ಇರುವ ಈ ಸಿನಿಮಾಗೆ ಬಾಕ್ಸ್​ ಆಫೀಸ್​​ನಲ್ಲಿ ಪ್ರೇಕ್ಷಕರ ಬೆಂಬಲ ಸಿಗಲಿಲ್ಲ. ಈಗ ಒಟಿಟಿಯಲ್ಲಾದರೂ ಈ ಸಿನಿಮಾ ಉತ್ತಮ ವೀಕ್ಷಣೆ ಕಾಣುತ್ತಾ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಅಕ್ಷಯ್​ ಕುಮಾರ್​ ಸಿನಿಮಾದ ನಿರ್ದೇಶಕನ 7.30 ಕೋಟಿ ರೂಪಾಯಿ ಸಂಭಾವನೆ ಹಣಕ್ಕೆ ಮೋಸ

ಅಕ್ಷಯ್​ ಕುಮಾರ್​ ಅವರು ನಟಿಸಿದ ಹಲವು ಸಿನಿಮಾಗಳು ಒಂದರ ಹಿಂದೊಂದರಂತೆ ಸೋತಿವೆ. ಅವುಗಳ ಸಾಲಿಗೆ ‘ಸರ್ಫಿರಾ’ ಸಿನಿಮಾ ಕೂಡ ಸೇರಿಕೊಂಡಿದೆ. ಈ ಸಿನಿಮಾಗೆ ಸುಧಾ ಕೊಂಗರ ಅವರು ನಿರ್ದೇಶನ ಮಾಡಿದ್ದಾರೆ. ಅಕ್ಷಯ್​ ಕುಮಾರ್​ ಅವರಿಗೆ ಜೋಡಿಯಾಗಿ ರಾಧಿಕಾ ಮದನ್​ ಅವರು ನಟಿಸಿದ್ದಾರೆ. ಪರೇಶ್ ರಾವಲ್​, ಪ್ರಕಾಶ್​ ಬೆಳವಾಡಿ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಕಾಲಿವುಡ್ ನಟ ಸೂರ್ಯ ಅವರು ಅತಿಥಿ ಪಾತ್ರ ಮಾಡಿದ್ದಾರೆ. ತಮಿಳಿನ ಮೂಲ ಸಿನಿಮಾ ‘ಸೂರರೈ ಪೋಟ್ರು’ನಲ್ಲಿ ಸೂರ್ಯ ಹೀರೋ ಆಗಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್