AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ನಿರ್ದೇಶಕರು ನನ್ನ ಮುಟ್ಟಿನ ದಿನದ ಬಗ್ಗೆ ಕೇಳಿದರು’; ಸೆಕ್ಸ್ ದೃಶ್ಯದ ಶೂಟ್ ಬಗ್ಗೆ ನಟಿ ಅಮೃತಾ ಮಾತು

ಇಂಟಿಮೇಟ್ ದೃಶ್ಯಗಳನ್ನು ಶೂಟ್ ಮಾಡುವಾಗ ನಿರ್ದೇಶಕರು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಆ ಸಂದರ್ಭವನ್ನು ಅನುರಾಗ್ ಕಶ್ಯಪ್ ಉತ್ತಮವಾಗಿ ನಿರ್ವಹಿಸುತ್ತಾರೆ ಎಂಬುದು ಅಮೃತಾ ಸುಭಾಶ್ ಅವರ ಮಾತು.

‘ಆ ನಿರ್ದೇಶಕರು ನನ್ನ ಮುಟ್ಟಿನ ದಿನದ ಬಗ್ಗೆ ಕೇಳಿದರು’; ಸೆಕ್ಸ್ ದೃಶ್ಯದ ಶೂಟ್ ಬಗ್ಗೆ ನಟಿ ಅಮೃತಾ ಮಾತು
ಅಮೃತಾ ಸುಭಾಷ್
ರಾಜೇಶ್ ದುಗ್ಗುಮನೆ
|

Updated on: Jul 06, 2023 | 12:02 PM

Share

ನಟಿ ಅಮೃತಾ ಸುಭಾಶ್ (Amruta Subhash) ಅವರು ಕಿರುತೆರೆ, ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ‘ಲಸ್ಟ್ ಸ್ಟೋರಿಸ್ 2’  (Lust Stories 2) ಚಿತ್ರದಲ್ಲಿ ಬರುವ ‘ದಿ ಮಿರರ್’ ಎಪಿಸೋಡ್​ನಲ್ಲಿ ಅವರು ಕಾಣಿಸಿಕೊಂಡಿದ್ದರು. ಮಾಲೀಕನ ಮನೆಯಲ್ಲೇ ಪತಿ ಜೊತೆ ಸೆಕ್ಸ್ ಮಾಡುವ ಕೆಲಸದಾಕೆಯ ಪಾತ್ರದಲ್ಲಿ ಅಮೃತಾ ಕಾಣಿಸಿಕೊಂಡಿದ್ದರು. ಅವರ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ಈ ಸಿನಿಮಾದಿಂದ ಅವರ ಜನಪ್ರಿಯತೆ ಹೆಚ್ಚಿದೆ. ‘ಸೇಕ್ರೆಡ್ ಗೇಮ್ಸ್​ 2’ ವೆಬ್ ಸೀರಿಸ್​ನಲ್ಲಿ ಅವರು ನಟಿಸಿದ್ದರು. ಇದರಲ್ಲಿ ಸೆಕ್ಸ್ ದೃಶ್ಯ ಬರುತ್ತದೆ. ಅದನ್ನು ಶೂಟ್ ಮಾಡುವ ದಿನ ಹೇಗಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

ಇಂಟಿಮೇಟ್ ದೃಶ್ಯಗಳನ್ನು ಶೂಟ್ ಮಾಡುವಾಗ ನಿರ್ದೇಶಕರು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಆ ಸಂದರ್ಭವನ್ನು ಅನುರಾಗ್ ಕಶ್ಯಪ್ ಉತ್ತಮವಾಗಿ ನಿರ್ವಹಿಸುತ್ತಾರೆ ಎಂಬುದು ಅಮೃತಾ ಸುಭಾಶ್ ಅವರ ಮಾತು. ‘ಸೇಕ್ರೇಡ್ ಗೇಮ್ಸ್ 2’ ಸರಣಿಯನ್ನು ಅನುರಾಗ್ ಕಶ್ಯಪ್ ನಿರ್ದೇಶನ ಮಾಡಿದ್ದರು. ಆ ವೆಬ್ ಸೀರಿಸ್​ನಲ್ಲಿ ಬರುವ ಇಂಟಿಮೇಟ್ ದೃಶ್ಯದ ಶೂಟ್ ಬಗ್ಗೆ ಅವರು ಮಾತನಾಡಿದ್ದಾರೆ.

‘ನಾನು ಮೊದಲ ಬಾರಿಗೆ ಇಂಟಿಮೇಟ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು ಅನುರಾಗ್ ಕಶ್ಯಪ್ ಅವರ ‘ಸೇಕ್ರೆಡ್ ಗೇಮ್ಸ್ 2’ ಸರಣಿಯಲ್ಲಿ. ನಿರ್ದೇಶನ ಮಾಡುತ್ತಿರುವುದು ಪುರುಷನೋ ಮಹಿಳೆಯೋ ಎಂಬ ಪ್ರಶ್ನೆಯೇ ಬರಲಿಲ್ಲ. ಅವರು ತುಂಬಾನೇ ಸೆನ್ಸಿಟಿವ್ ಆಗಿದ್ದರು. ಅವರು ನನ್ನ ಮುಟ್ಟಿನ ದಿನದ ಬಗ್ಗೆ ಕೇಳಿದರು. ಆ ಸಂದರ್ಭದಲ್ಲಿ ಇಂಟಿಮೇಟ್​ ದೃಶ್ಯಗಳ ಶೂಟ್ ಮಾಡುವುದಿಲ್ಲ ಎಂದರು’ ಎಂಬುದಾಗಿ ಅನುರಾಗ್ ಬಗ್ಗೆ ಅಮೃತಾ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: Mrunal Thakur: ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಮಿಂಚಿದ ಮೃಣಾಲ್ ಠಾಕೂರ್

‘ಸೇಕ್ರೆಡ್ ಗೇಮ್ಸ್ 2’ ಸರಣಿಯಲ್ಲಿ ರಾ ಏಜೆಂಟ್ ಆಗಿ ಅಮೃತಾ ನಟಿಸಿದ್ದಾರೆ. ನವಾಜುದ್ದೀನ್ ಸಿದ್ಧಿಕಿ ಗಣೇಶ್ ಗಾಯ್ತೊಂಡೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಗಣೇಶ್ ಗಾಯ್ತೊಂಡೆ ವಿರುದ್ಧ ಸ್ಪೈ ನಡೆಸಲು ಆತನ ಜೊತೆಯೇ ಈ ರಾ ಏಜೆಂಟ್ ಸೇರಿಕೊಳ್ಳುತ್ತಾಳೆ. ಈ ರೀತಿಯಲ್ಲಿ ಪಾತ್ರ ಅಮೃತಾ ಮೂಡಿ ಬಂದಿತ್ತು. ಸಖತ್ ಇಂಟಿಮೇಟ್ ಆಗಿ ಅವರು ಕಾಣಿಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!