‘ಬಿಗ್ ಬಾಸ್ ಒಟಿಟಿ’ಯಲ್ಲಿ ಸ್ಫೂರ್ತಿ ಗೌಡ (Spoorthi Gowda) ಅವರು ಯಶಸ್ವಿಯಾಗಿ ಎರಡನೇ ವಾರವನ್ನು ಪೂರ್ಣಗೊಳಿಸುತ್ತಿದ್ದಾರೆ. ಈ ವಾರ ಬಿಗ್ ಬಾಸ್ ಒಟಿಟಿಯಿಂದ ಯಾರು ಹೊರಹೋಗುತ್ತಾರೆ ಅನ್ನೋದು ಸದ್ಯದ ಕುತೂಹಲ. 9 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ ಇದೆ. ಸ್ಫೂರ್ತಿ ಗೌಡ ಅವರ ಮೇಲೂ ನಾಮಿನೇಷನ್ ತೂಗುಗತ್ತಿ ಇದೆ. ಈ ಮಧ್ಯೆ ಅವರ ಲೆಕ್ಕಾಚಾರ ಉಲ್ಟಾ-ಪಲ್ಟಾ ಆಗಿದೆ. ಈ ಕಾರಣದಿಂದ ಅವರು ಮನೆಯಿಂದ ಹೊರಹೋಗುವ ಆಲೋಚನೆಯಲ್ಲಿ ಇದ್ದಾರೆ.
‘ಬಿಗ್ ಬಾಸ್’ ಮನೆಯಲ್ಲಿ ಸಮಯ ಕಳೆಯುವುದು ಸುಲಭದ ಮಾತಲ್ಲ. ಹೊರ ಜಗತ್ತಿಗೆ ಹೋಲಿಸಿದರೆ, ಈ ಜಗತ್ತು ತುಂಬಾನೇ ಭಿನ್ನ. ಇಲ್ಲಿ ಮೊಬೈಲ್ ಬಳಕೆ ಮಾಡುವಂತಿಲ್ಲ. ಹೊರಗಿನ ಜಗತ್ತಿನ ಜತೆ ಸಂಪರ್ಕ ಇರುವುದಿಲ್ಲ. ಕುಟುಂಬದಿಂದ ದೂರ ಇರಬೇಕು. ಈ ಕಾರಣದಿಂದ ದೊಡ್ಮನೆಯಲ್ಲಿ ಉಳಿಯೋಕೆ ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಸ್ಫೂರ್ತಿ ಗೌಡ ಕೂಡ ಬಿಗ್ ಬಾಸ್ ಮನೆಯಲ್ಲಿ ಕಷ್ಟ ಪಡುತ್ತಿದ್ದಾರೆ. ಅವರಿಗೆ ಮನೆ ಕಷ್ಟ ಎನಿಸಿದೆ.
ಈ ಬಾರಿ ಕಳಪೆ ತಮಗೆ ಬರಬಹುದು ಎಂಬ ಭಯ ಸ್ಫೂರ್ತಿ ಅವರನ್ನು ಕಾಡುತ್ತಿದೆ. ಈ ಕಾರಣಕ್ಕೆ ಅವರು ಜಯಶ್ರೀ ಜತೆಗೆ ಈ ವಿಚಾರ ಮಾತನಾಡಿದ್ದಾರೆ. ‘ನಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಲ್ಲ. ಎಲ್ಲರೂ ನನ್ನನ್ನು ಕಳಪೆ ಎಂದು ಹೇಳಿದರೆ ನಾನು ಜೈಲಿಗೆ ಹೋಗಲ್ಲ’ ಎಂದರು. ಇದಕ್ಕೆ ಜಯಶ್ರೀ ಕೊಟ್ಟ ಉತ್ತರ ನೋಡಿ ಸ್ಫೂರ್ತಿ ಲೆಕ್ಕಾಚಾರ ತಲೆಕೆಳಗಾದಂತೆ ಆಯಿತು.
‘ಕಳಪೆ ಅನ್ನೋದು ಮನೆಯವರ ನಿರ್ಧಾರ. ಅದರಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ. ಕಳಪೆ ಎಂದು ಬಂದರೆ ಹೊರಗೆ ಕೂರೋಕೆ ಸಾಧ್ಯವಿಲ್ಲ’ ಎಂಬ ಉತ್ತರ ಜಯಶ್ರೀ ಕಡೆಯಿಂದ ಬಂತು. ಆ ಮಾತನ್ನು ಕೇಳಿ ಸ್ಫೂರ್ತಿ ತುಂಬಾನೇ ಬೇಸರಗೊಂಡರು.
ಇದನ್ನೂ ಓದಿ: ‘ಇನ್ನು ಯಾವುದೇ ಆಟ ಆಡಲ್ಲ’; ಬಿಗ್ ಬಾಸ್ ಮನೆಯಿಂದ ಹೊರಹೋಗ್ತಾರಾ ಜಯಶ್ರೀ?
ಇನ್ನು, ಬಿಗ್ ಬಾಸ್ ಮನೆಯಲ್ಲಿ ಸಮಯ ಕಳೆಯೋಕೆ ಸ್ಫೂರ್ತಿ ಬಳಿ ಸಾಧ್ಯವಾಗುತ್ತಿಲ್ಲ. ‘ದಿನ ಕಳೆದಂತೆ ನಾನು ಡೌನ್ ಆಗುತ್ತಿದ್ದೇನೆ ಅನಿಸಿತು. ಹೀಗಾಗಿ, ಮನೆಯಿಂದ ಹೊರ ಹೋಗಬೇಕು ಅನಿಸುತ್ತಿದೆ’ ಎಂದಿದ್ದಾರೆ ಸ್ಫೂರ್ತಿ. ಈ ವಾರ ಅವರು ನಾಮಿನೇಟ್ ಆಗಿದ್ದಾರೆ. ಅವರು ಮನೆಯಿಂದ ಹೊರ ಹೋದರು ಯಾವುದೇ ಅಚ್ಚರಿ ಇಲ್ಲ ಎಂಬ ಮಾತು ಕೇಳಿ ಬಂದಿದೆ.