Kajol: ಒಟಿಟಿ ಜಗತ್ತಿಗೆ ನಟಿ ಕಾಜೋಲ್​ ಎಂಟ್ರಿ; ಪ್ರತಿ ಎಪಿಸೋಡ್​ಗೆ ಪಡೆಯುವ ಸಂಭಾವನೆ ಇಷ್ಟೊಂದಾ?

| Updated By: ಮದನ್​ ಕುಮಾರ್​

Updated on: Jul 13, 2022 | 7:15 AM

ನಟಿ ಕಾಜೋಲ್​ ಅವರು ಒಟಿಟಿ ಕ್ಷೇತ್ರಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಚೊಚ್ಚಲ ವೆಬ್​ ಸರಣಿಗಾಗಿ ಅವರು ಭರ್ಜರಿ ಸಂಭಾವನೆ ಪಡೆಯುತ್ತಿರುವ ಬಗ್ಗೆ ಮಾಹಿತಿ ಕೇಳಿಬಂದಿದೆ.

Kajol: ಒಟಿಟಿ ಜಗತ್ತಿಗೆ ನಟಿ ಕಾಜೋಲ್​ ಎಂಟ್ರಿ; ಪ್ರತಿ ಎಪಿಸೋಡ್​ಗೆ ಪಡೆಯುವ ಸಂಭಾವನೆ ಇಷ್ಟೊಂದಾ?
ಕಾಜೋಲ್
Follow us on

ಒಟಿಟಿ ಕ್ಷೇತ್ರದ ವ್ಯಾಪ್ತಿ ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ. ಅನೇಕ ಸ್ಟಾರ್​ ಕಲಾವಿದರು ಈಗ ಒಟಿಟಿ (OTT platform) ಸಂಸ್ಥೆಗಳ ಜೊತೆ ನಂಟು ಬೆಳೆಸಿಕೊಂಡಿದ್ದಾರೆ. ಬಾಲಿವುಡ್​ನ ಅನೇಕ ನಟಿಯರು ವೆಬ್​ ಸಿರೀಸ್​ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಹಿಂದಿ ಚಿತ್ರರಂಗದ ಟಾಪ್​ ಹೀರೋಯಿನ್​ ಆಗಿದ್ದವರೆಲ್ಲ ಈಗ ಒಟಿಟಿ ದುನಿಯಾದಲ್ಲಿ ಗೆಲುವು ಕಾಣುತ್ತಿದ್ದಾರೆ. ಮಾಧುರಿ ದೀಕ್ಷಿತ್​ ಅವರು ‘ದಿ ಫೇಮ್​ ಗೇಮ್​’ ವೆಬ್​ ಸರಣಿಯಲ್ಲಿ ಮಿಂಚಿದರು. ‘ಅರಣ್ಯಕ್​’ ವೆಬ್​ ಸಿರೀಸ್​ನಲ್ಲಿ ರವೀನಾ ಟಂಡನ್​ ನಟಿಸಿದರು. ಈಗ ನಟಿ ಕಾಜೋಲ್​ (Kajol) ಅವರಿಗೆ ಒಟಿಟಿ ಸಂಸ್ಥೆಯಿಂದ ದೊಡ್ಡ ಆಫರ್​ ಬಂದಿದೆ. ಅವರು ಕೂಡ ವೆಬ್​ ಸಿರೀಸ್​ನಲ್ಲಿ ನಟಿಸಲಿದ್ದು ಭರ್ಜರಿ ಸಂಭಾವನೆ (Kajol Remuneration) ಪಡೆಯುವ ಬಗ್ಗೆ ವರದಿ ಆಗಿದೆ.

ಮೂಲಗಳ ಪ್ರಕಾರ, ‘ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​’ನಲ್ಲಿ ಕಾಜೋಲ್ ಅವರ ವೆಬ್​ ಸರಣಿ ಪ್ರಸಾರ ಆಗಲಿದೆ. ಮುಂಬೈನಲ್ಲಿ ಜುಲೈ 11ರಂದು ಇದರ ಶೂಟಿಂಗ್​ ಕೂಡ ಆರಂಭ ಆಗಿದೆ. ಇದರ ಪ್ರತಿ ಎಪಿಸೋ​ಡ್​ಗೆ ಕಾಜೋಲ್​ ಅವರು 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಕನಿಷ್ಠ 8 ಎಪಿಸೋಡ್​ ಇದ್ದರೆ, 40 ಕೋಟಿ ರೂಪಾಯಿ ಸಿಕ್ಕಂತೆ ಆಗುತ್ತದೆ. ಆದರೆ ಈ ವಿಚಾರದ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಬರೀ ಅಂತೆ-ಕಂತೆಗಳು ಹರಿದಾಡುತ್ತಿವೆ.

ಒಂದು ಕಾಲದಲ್ಲಿ ಕಾಜೋಲ್​ ಅವರು ಬಹುಬೇಡಿಕೆಯ ನಟಿ ಆಗಿದ್ದರು. ಈಗ ಅವರು ನಟನೆಯಿಂದ ಕೊಂಚ ದೂರ ಉಳಿದುಕೊಂಡಿದ್ದಾರೆ. ಅಪರೂಪಕ್ಕೆ ಕೆಲವು ಪ್ರಾಜೆಕ್ಟ್​ಗಳನ್ನು ಒಪ್ಪಿಕೊಳ್ಳುತ್ತಾರಷ್ಟೇ. ಈಗ ಅವರು ವೆಬ್​ ಸಿರೀಸ್​ನಲ್ಲಿ ನಟಿಸುತ್ತಿರುವ ವಿಷಯ ಕೇಳಿ ಫ್ಯಾನ್ಸ್​ ಖುಷಿ ಆಗಿದ್ದಾರೆ. ಆದಷ್ಟು ಬೇಗ ಈ ವೆಬ್​ ಸಿರೀಸ್​ ಪ್ರಸಾರ ಆಗಲಿ ಎಂದು ಅಭಿಮಾನಿಗಳು ಹಂಬಲಿಸಿದ್ದಾರೆ. ಸುಪರ್ಣ್​ ವರ್ಮಾ ಅವರು ಇದಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ
Bhool Bhulaiyaa 2: ಒಟಿಟಿಗೆ ಬರ್ತಿದೆ ‘ಭೂಲ್​ ಭುಲಯ್ಯ 2’; ಕಾರ್ತಿಕ್​ ಆರ್ಯನ್​ ಫ್ಯಾನ್ಸ್​ಗೆ ಸಿಹಿ ಸುದ್ದಿ​ ನೀಡಿದ ನೆಟ್​ಫ್ಲಿಕ್ಸ್​
ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ 200 ಕೋಟಿ ರೂಪಾಯಿ ಲಾಭ ಮಾಡಿದ ‘ವಿಕ್ರಮ್​’ ಸಿನಿಮಾ
‘ನಾನು ಹಿಂದಿ ಹೀರೋ’ ಎಂದು ಗರ್ವ ತೋರಿಸಿ ಸೋತ ಜಾನ್​ ಅಬ್ರಾಹಂ ಸಿನಿಮಾಗೆ ಈಗ ಒಟಿಟಿ ಮಾತ್ರ ಗತಿ
ಮತ್ತೆ ಹಳೇ ಚಾರ್ಮ್​ ಪಡೆದ ಶಾರುಖ್​ ಖಾನ್​; ‘ಪಠಾಣ್​’ ಚಿತ್ರದ ಒಟಿಟಿ ಪ್ರಸಾರ ಹಕ್ಕು 200 ಕೋಟಿ ರೂ.ಗೆ ಸೇಲ್​?

ಮೊದಲ ಲಾಕ್​ಡೌನ್​ ಸಂದರ್ಭದಲ್ಲಿ ಒಟಿಟಿ ಸಂಸ್ಥೆಗಳಿಗೆ ಹೆಚ್ಚು ಬೇಡಿಕೆ ಬಂತು. ಈಗ ಹೊಸ ಹೊಸ ಕಂಟೆಂಟ್​ಗಳನ್ನು ನಿರ್ಮಿಸುವಲ್ಲಿ ಎಲ್ಲ ಒಟಿಟಿಗಳ ನಡುವೆ ಪೈಪೋಟಿ ಇದೆ. ಹಾಗಾಗಿ ಬಹುಕೋಟಿ ರೂಪಾಯಿ ಬಂಡವಾಳ ಹೂಡಲು ಸಿದ್ಧವಾಗಿವೆ. ಒಟ್ಟಿನಲ್ಲಿ ಪ್ರೇಕ್ಷಕರನ್ನು ತಮ್ಮತ್ತ ಸೆಳೆದುಕೊಳ್ಳಲು ಹಲವು ಪ್ರಯತ್ನಗಳು ನಡೆಯುತ್ತಿವೆ.